ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರೇ ಎಚ್ಚರ, ಇಷ್ಟರಲ್ಲೇ ಆಸ್ತಿ ತೆರಿಗೆ ಹೆಚ್ಚಳವಾಗುತ್ತೆ!

|
Google Oneindia Kannada News

ಬೆಂಗಳೂರು, ಜೂನ್ 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ಆಸ್ತಿಗಳ ತೆರಿಗೆ ಹೆಚ್ಚಳ ಮಾಡಲು ಚಿಂತನೆ ನಡೆಸಲಾಗಿದ್ದು, ಈ ಬಗ್ಗೆ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ಬೆಂಗಳೂರಿಗರ ಮೇಲೆ ತೆರಿಗೆ ಹೊರೆ ಬೀಳಲಿದೆ. ಶೇ.25ರಷ್ಟು ವಸತಿ ಸ್ವತ್ತುಗಳಿಗೆ ಮತ್ತು ಶೇ.30ರಷ್ಟು ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಕುರಿತು ಪಾಲಿಕೆ ಅಧಿಕಾರಿಗಳು ಈಗಾಗಲೇ ಪ್ರಸ್ತಾವನೆ ಸಿದ್ಧಪಡಿಸಿದ್ದು, ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಕೌನ್ಸಿಲ್ ಸಭೆಯ ಮುಂದೆ ಪ್ರಸ್ತಾಪಿಸಿ ಅನುಮೋದನೆ ಪಡೆಯಲಾಗುವುದು ಎಂದು ಬಿಬಿಎಂಪಿ ಆಯುಕ್ ಎನ್ ಮಂಜುನಾಥ್ ಪ್ರಸಾದ್ ಅವರು ಹೇಳಿದರು.

ಆಸ್ತಿ ತೆರಿಗೆ ಪಾವತಿ ಇನ್ನು ತಲೆನೋವಲ್ಲಆಸ್ತಿ ತೆರಿಗೆ ಪಾವತಿ ಇನ್ನು ತಲೆನೋವಲ್ಲ

ಕೆಎಂಸಿ ಕಾಯ್ದೆಯ ಪ್ರಕಾರ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆಯನ್ನು ಶೇ 15 ರಿಂದ 30 ರಷ್ಟು ಹೆಚ್ಚಳ ಮಾಡುವುದು ಕಡ್ಡಾಯವಾಗಿದೆ.2008 ಬಳಿಕ ಬಿಬಿಎಂಪಿ ಆಸ್ತಿ ತೆರಿಗೆ ಹೆಚ್ಚಳ ಮಾಡಿರಲಿಲ್ಲ. ಆದರೆ, 2016-17ನೇ ಸಾಲಿನಲ್ಲಿ ಆಸ್ತಿ ತೆರಿಗೆ ಹೆಚ್ಚಳವಾಗಿತ್ತು. ವಸತಿ ಸ್ವತ್ತುಗಳಿಗೆ ಶೇ.20ರಷ್ಟು ಮತ್ತು ವಸತಿಯೇತರ ಸ್ವತ್ತುಗಳಿಗೆ ಶೇ.25ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿತ್ತು.

ಆಸ್ತಿ ತೆರಿಗೆ ಆನ್ ಲೈನಲ್ಲಿ ಪಾವತಿಸುವುದು ಹೇಗೆ?ಆಸ್ತಿ ತೆರಿಗೆ ಆನ್ ಲೈನಲ್ಲಿ ಪಾವತಿಸುವುದು ಹೇಗೆ?

ಆಸ್ತಿ ತೆರಿಗೆ ದರವನ್ನು ಹೆಚ್ಚಳ ಮಾಡುವುದರಿಂದ ಪಾಲಿಕೆಗೆ ವಾರ್ಷಿಕ 800 ಕೋಟಿಯಷ್ಟು ಹೆಚ್ಚುವರಿ ಆದಾಯ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಎಷ್ಟು ಪ್ರಮಾಣದಲ್ಲಿ ತೆರಿಗೆ ಏರಿಕೆ ಸಾಧ್ಯತೆ?

ಎಷ್ಟು ಪ್ರಮಾಣದಲ್ಲಿ ತೆರಿಗೆ ಏರಿಕೆ ಸಾಧ್ಯತೆ?

ಬಿಬಿಎಂಪಿ 2016-17ನೇ ಸಾಲಿನಲ್ಲಿ ಪರಿಷ್ಕರಿಸಿಶೇ.20-25ರಷ್ಟು ತೆರಿಗೆ ಹೆಚ್ಚಳ ಮಾಡಿತ್ತು, ಇದೀಗ ತೆರಿಗೆ ಹೆಚ್ಚಿಸಿ ಮತ್ತೆ ಮೂರು ವರ್ಷ ಕಳೆಯುತ್ತಿರುವುದರಿಂದ 2019ನೇ ಸಾಲಿನಲ್ಲಿ ಮತ್ತೆ ತೆರಿಗೆಯನ್ನು ಶೇ.25-30ರಷ್ಟು ಹೆಚ್ಚಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಎಷ್ಟು ಪ್ರಮಾಣ ಎಂಬುದು ಆರ್ಥಿಕ ಸ್ಥಾಯಿ ಸಮಿತಿ, ಕೌನ್ಸಿಲ್ ಸಭೆ ನಂತರ ಸ್ಪಷ್ಟವಾಗಲಿದೆ.

ನಿಮ್ಮ ಆಸ್ತಿ ಯಾವ ವಲಯದಲ್ಲಿದೆ? ಆನ್ ಲೈನ್ ನಲ್ಲಿ ಹುಡುಕಿನಿಮ್ಮ ಆಸ್ತಿ ಯಾವ ವಲಯದಲ್ಲಿದೆ? ಆನ್ ಲೈನ್ ನಲ್ಲಿ ಹುಡುಕಿ

ಏಪ್ರಿಲ್ 2019ರಿಂದ ಜಾರಿಗೆ ಬರಲಿರುವ ತೆರಿಗೆ ಹೆಚ್ಚಳ

ಏಪ್ರಿಲ್ 2019ರಿಂದ ಜಾರಿಗೆ ಬರಲಿರುವ ತೆರಿಗೆ ಹೆಚ್ಚಳ

ಬಿಬಿಎಂಪಿ ಆಯುಕ್ತ ಮಂಜುನಾಥ್ ಅವರು ಪ್ರಸ್ತಾಪಿಸಿದಂತೆ ಆಸ್ತಿ ತೆರಿಗೆ ಹೆಚ್ಚಿಳ ಟಿಪ್ಪಣಿಗೆ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿ ಮುಂದಿನ ಕೌನ್ಸಿಲ್ ಸಭೆಯಲ್ಲಿ ಕೂಡ ಮಂಡಿಸಲಾಗುತ್ತೆ. ಪ್ರಸ್ತಾವನೆಗೆ ಯಥಾವತ್ತಾಗಿ ಅನುಮೋದನೆ ದೊರೆತರ 2019ರ ಏಪ್ರಿಲ್ ನಿಂದ ತೆರಿಗೆ ಹೆಚ್ಚಳವಾಗಲಿದೆ. ಇದು 2016ರಲ್ಲಿ ಏರಿಸಲಾಗಿದ್ದ ಆಸ್ತಿ ತೆರಿಗೆ ಪ್ರಮಾಣಕ್ಕಿಂತ ಶೇ.5ರಷ್ಟು ಹೆಚ್ಚುವರಿಯಾಗಲಿದೆ.

ಒಂದೊಂದು ವಲಯಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ದರ

ಒಂದೊಂದು ವಲಯಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ದರ

ಸ್ಥಿರಾಸ್ತಿಗಳ ಮಾರ್ಗಸೂಚಿ ದರಕ್ಕೆ ಅನುಗುಣವಾಗಿ ಆರು ವಲಯಗಳನ್ನು ವರ್ಗೀಕರಣ ಮಾಡಿ, ಆಸ್ತಿ ತೆರಿಗೆ ಸಂಗ್ರಹ ಮಾಡಲಾಗುತ್ತದೆ. ಇದಕ್ಕಾಗಿ ಎಬಿಸಿಡಿಇಎಫ್ ಎಂಬ ವಲಯಗಳನ್ನು ವಿಂಗಡಣೆ ಮಾಡಿಕೊಳ್ಳಲಾಗಿದೆ. ಒಂದೊಂದು ವಲಯಕ್ಕೆ ಪ್ರತ್ಯೇಕ ಆಸ್ತಿ ತೆರಿಗೆ ದರ ನಿಗದಿ ಮಾಡಿ ಸ್ವತ್ತುಗಳ ಮಾಲೀಕರಿಂದ ಸಂಗ್ರಹಿಸಲಾಗುತ್ತದೆ.

ಬಿಬಿಎಂಪಿ ವಲಯವಾರು ಆಸ್ತಿ ತೆರಿಗೆಗೆ ವಿರೋಧ

ಬಿಬಿಎಂಪಿ ವಲಯವಾರು ಆಸ್ತಿ ತೆರಿಗೆಗೆ ವಿರೋಧ

ಎ ವಲಯದಲ್ಲಿನ ವಸತಿ ಕಟ್ಟಡಗಳಿಗೆ ಚದರಡಿಗೆ 2.50ರೂ, ವಾಣಿಜ್ಯ ಸ್ವತ್ತುಗಳಿಗೆ 5 ರೂ, ಬಿ ವಲಯಯದ ವಸತಿ ಕಟ್ಟಡಗಳಿಗೆ 2 ರೂ ಮತ್ತು ವಾಣಿಜ್ಯ ಕಟ್ಟಡಗಳಿಗೆ 4 ರೂ ತೆರಿಗೆ ನಿಗದಿಪಡಿಸಲಾಗಿದೆ. 2016-17ರಲ್ಲಿ ಎ ವಲಯದ ವಸತಿ ಕಟ್ಟಡಗಳಿಗೆ 3 ರೂ, ವಾಣಿಜ್ಯ ಸ್ವತ್ತುಗಳಿಗೆ 6 ರೂ ನಿಗದಿಪಡಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಲಯ ವರ್ಗೀಕರಣ ಕೈಬಿಡಲಾಗಿತ್ತು.

English summary
Bruhat Bangalore Mahanagara Palike (BBMP) set to hike property taxes of residential building by 25 percent and 30 percent for commercial buildings.A proposal has been to sent to Urban development department for approval said BBMP commissioner Manjunath Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X