ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಕಾಮಾಕ್ಯ, ಇಟ್ಟಮಡು ಜಂಕ್ಷನ್ ನಡುವೆ ಫ್ಲೈ ಓವರ್

|
Google Oneindia Kannada News

ಬೆಂಗಳೂರು, ಜೂನ್ 20 : ಬೆಂಗಳೂರಿನಲ್ಲಿ ಮತ್ತೊಂದು ಫ್ಲೈ ಓವರ್ ನಿರ್ಮಾಣ ಮಾಡಲು ಬಿಬಿಎಂಪಿ ಪ್ರಸ್ತಾವನೆ ಸಿದ್ಧಪಡಿಸಿದೆ. ಈ ಯೋಜನೆಗೆ ಅನುಮತಿ ಸಿಕ್ಕರೆ ಮೈಸೂರು ರಿಂಗ್ ರಸ್ತೆಯಲ್ಲಿ ಪ್ರಯಾಣಿಸುವ ವಾಹನ ಸವಾರರಿಗೆ ತುಸು ನೆಮ್ಮದಿ ಸಿಗಲಿದೆ.

ನಗರದ ಕಾಮಾಕ್ಯ ಚಿತ್ರಮಂದಿರ-ಇಟ್ಟಮಡು ಜಂಕ್ಷನ್ ನಡುವೆ ಫ್ಲೈ ಓವರ್ ನಿರ್ಮಾಣ ಮಾಡಲು ಬಿಬಿಎಂಪಿ ಮುಂದಾಗಿದೆ. ಸದಾ ವಾಹನದಿಂದ ತುಂಬಿರುವ ಈ ರಿಂಗ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ.

ಕರ್ನಾಟಕ : ಹಲವು ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಸಿದ್ಧರಾಗಿಕರ್ನಾಟಕ : ಹಲವು ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಸಿದ್ಧರಾಗಿ

ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗೆ ಸುಮಾರು 125 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕಾಮಾಕ್ಯ, ಕತ್ರಿಗುಪ್ಪೆ ಮತ್ತು ಇಟ್ಟಮಡು ಮೂರು ಹೆಚ್ಚು ವಾಹನ ಸಂಚಾರ ದಟ್ಟಣೆ ಇರುವ ಸಿಗ್ನಲ್‌ಗಳಾಗಿವೆ.

ರಾಜಾಜಿನಗರದಿಂದ ಔಟರ್‌ ರಿಂಗ್ ರೋಡ್‌ವರೆಗೆ ರಸ್ತೆ ಅಗಲೀಕರಣರಾಜಾಜಿನಗರದಿಂದ ಔಟರ್‌ ರಿಂಗ್ ರೋಡ್‌ವರೆಗೆ ರಸ್ತೆ ಅಗಲೀಕರಣ

BBMP propose flyover between Kamakhya theatre and Ittamadu junction

ನಾಯುಂಡಹಳ್ಳಿ ಬಳಿಯ ಮೈಸೂರು ರಸ್ತೆಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ತನಕ ಸಿಗ್ನಲ್ ಮುಕ್ತ ರಸ್ತೆ ನಿರ್ಮಿಸುವ ಯೋಜನೆಯಡಿ ಈ ಫ್ಲೈ ಓವರ್ ನಿರ್ಮಾಣವಾಗಲಿದೆ. ಕಾಮಾಕ್ಯದಿಂದ-ಇಟ್ಟಮಡು ಜಂಕ್ಷನ್‌ ವರೆಗಿನ ರಸ್ತೆಯಲ್ಲಿ ಗಂಟೆಗೆ 15 ಸಾವಿರ ಕಾರುಗಳು ಸಂಚಾರ ನಡೆಸುತ್ತವೆ.

ಬಿಬಿಎಂಪಿಗೆ ಬಿಳಿಯಾನೆಯಾದ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್!ಬಿಬಿಎಂಪಿಗೆ ಬಿಳಿಯಾನೆಯಾದ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್!

ಬಿಬಿಎಂಪಿ ಮೊದಲು ಕತ್ರಿಗುಪ್ಪೆ ಸಿಗ್ನಲ್‌ನಲ್ಲಿ 17.82 ಕೋಟಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿತ್ತು. ಆದರೆ, ಈಗ ಕಾಮಾಕ್ಯದಿಂದ ಇಟ್ಟಮಡು ಜಂಕ್ಷನ್ ತನಕ ಫ್ಲೈ ಓವರ್ ನಿರ್ಮಾಣ ಮಾಡುವುದರಿಂದ ಆ ಯೋಜನೆ ಕೈ ಬಿಡಲಾಗಿದೆ.

ಈ ರಿಂಗ್ ರಸ್ತೆಯಲ್ಲಿ ಈಗಾಗಲೇ ದೇವೇಗೌಡ ಪೆಟ್ರೋಲ್ ಬಂಕ್ ಮತ್ತು ಪಿಇಎಸ್ ಕಾಲೇಜು ಬಳಿ ಫ್ಲೈ ಓವರ್ ನಿರ್ಮಾಣವಾಗಿದೆ. ಜನತಾ ಬಜಾರ್‌ ಬಳಿ ಅಂಡರ್ ಪಾಸ್ ಕೆಲಸ ನಡೆಯುತ್ತಿದೆ. ಈಗ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಆರಂಭವಾದರೆ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.

English summary
Bruhat Bengaluru Mahanagara Palike (BBMP) has proposed building a flyover between Kamakhya theatre and Ittamadu junction. The estimated cost of project Rs. 125 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X