ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಯಾಯಿತಿ ದರದಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಅವಧಿ ವಿಸ್ತರಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿ ಅವಧಿ ಮತ್ತೊಮ್ಮೆ ವಿಸ್ತರಿಸಲಾಗಿದೆ.ಜೂನ್ 15ರ ತನಕ ಶೇ 5ರಷ್ಟು ರಿಯಾಯಿತಿ ಜತೆಗೆ ತೆರಿಗೆ ಪಾವತಿಸಬಹುದು.

By Mahesh
|
Google Oneindia Kannada News

ಬೆಂಗಳೂರು, ಮೇ 31: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಸ್ತಿ ತೆರಿಗೆ ಪಾವತಿ ಅವಧಿ ಮತ್ತೊಮ್ಮೆ ವಿಸ್ತರಿಸಲಾಗಿದೆ. ಆನ್ ಲೈನ್ ಪಾವತಿ ವ್ಯವಸ್ಥೆಯಲ್ಲಿನ ಲೋಪ, ವಲಯವಾರು ಪಾವತಿ ಗೊಂದಲದಿಂದಾಗಿ ತೆರಿಗೆ ಪಾವತಿಸದ ನಾಗರಿಕರು ಚಿಂತಿಸಬೇಕಾಗಿಲ್ಲ. ಜೂನ್ 15ರ ತನಕ ಶೇ 5ರಷ್ಟು ವಿನಾಯಿತಿ ಜತೆಗೆ ತೆರಿಗೆ ಪಾವತಿಸಬಹುದು.

ಸಾಮಾನ್ಯವಾಗಿ ಆಸ್ತಿ ತೆರಿಗೆಯನ್ನು ಏಪ್ರಿಲ್‌ ತಿಂಗಳಿನಲ್ಲೇ ಪಾವತಿ ಮಾಡಿದರೆ ಶೇ 5ರಷ್ಟು ರಿಯಾಯಿತಿ ದೊರೆಯುತ್ತದೆ. ಈ ಅವಧಿಯನ್ನು ಮೇ ತಿಂಗಳ ಅಂತ್ಯದ ತನಕ ಈ ಬಾರಿ ವಿಸ್ತರಿಸಲಾಯಿತು. ಈಗ ಜೂನ್ ತಿಂಗಳ ಅಂತ್ಯದ ತನಕ ಮತ್ತೊಮ್ಮೆ ವಿಸ್ತರಣೆ ಮಾಡಲಾಗಿದೆ. ಆನಂತರ ತೆರಿಗೆ ಪಾವತಿಸಿದರೆ ಶೇ 2ರಷ್ಟು ಬಡ್ಡಿ ಕಟ್ಟಬೇಕು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಪ್ರಕಟಿಸಿದೆ.[ಆನ್ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?]

BBMP property tax rebate period extended till June 15, 2017

ಪಾವತಿ ಮಾಡುವುದು ಹೇಗೆ? : ಬಿಬಿಎಂಪಿ 2 ರೀತಿಯ ಸೌಲಭ್ಯಗಳನ್ನು ನೀಡಿದೆ. ಆನ್‌ಲೈನ್ ಮೂಲಕ ತೆರಿಗೆ ಪಾವತಿ ಮಾಡಬಹುದು. ಅಥವಾ ಕೆನರಾ ಬ್ಯಾಂಕ್ ಶಾಖೆಗಳಲ್ಲಿಯೂ ತೆರಿಗೆ ಪಾವತಿ ಮಾಡಬಹುದಾಗಿದೆ.

ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದವರು ಶೀಘ್ರದಲ್ಲೇ ಸಮಸ್ಯೆಗೆ(ಆನ್ ಲೈನ್ ಮೂಲಕ ಪಾವತಿ) ಪರಿಹಾರ ಸಿಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಡಾ. ರಾಜ್ ಕುಮಾರ್ ರಸ್ತೆಯ ಕೆಳ ಸೇತುವೆ ಉದ್ಘಾಟನೆ ನಂತರ ಹೇಳಿದರು.

English summary
The Bruhat Bengaluru Mahanagara Palike (BBMP) has extended the last date for availing five per cent rebate on property tax till the June 15, 2017. The rebate period is being extended for the second time this fiscal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X