ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಲಸಿಕೆ ಪಡೆಯುವ 1.15 ಲಕ್ಷ ಜನರ ಪಟ್ಟಿ ಸಿದ್ಧಪಡಿಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಡಿಸೆಂಬರ್.01: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗೆ ಮೊದಲು ಬಿಡುಗಡೆಯಾಗುವ ಲಸಿಕೆಯನ್ನು ಯಾರಿಗೆ ನೀಡಬೇಕು ಎನ್ನುವುದರ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಂತಿಮ ಪಟ್ಟಿಯೊಂದನ್ನು ಸಿದ್ಧಪಡಿಸಿದೆ.

ಪ್ರಾಥಮಿಕ ಹಂತದಲ್ಲಿ ಮೊದಲಿಗೆ 1.15 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್-19 ಲಸಿಕೆಯನ್ನು ನೀಡುವುದಕ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಬಿಬಿಎಂಪಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ವೈದ್ಯಕೀಯ ಸಿಬ್ಬಂದಿ, ವೈದ್ಯರು, ಆಸ್ಪತ್ರೆ ಆಡಳಿತಾತ್ಮಕ ಸಿಬ್ಬಂದಿ ಹಾಗೂ 29,000 ಖಾಸಗಿ ವೈದ್ಯಕೀಯ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಭಾರತದ ಕಂಟೇನ್ಮೆಂಟ್ ಝೋನ್ ಮಾರುಕಟ್ಟೆಗಳಿಗೆ ಹೊಸ ಮಾರ್ಗಸೂಚಿಭಾರತದ ಕಂಟೇನ್ಮೆಂಟ್ ಝೋನ್ ಮಾರುಕಟ್ಟೆಗಳಿಗೆ ಹೊಸ ಮಾರ್ಗಸೂಚಿ

ಕೊವಿಡ್-19 ಲಸಿಕೆ ಸಂಗ್ರಹಿಸಿ ಇಡುವುದಕ್ಕೆ ಬಿಬಿಎಂಪಿಯು ಮೂರು ರೀತಿಯ ವ್ಯವಸ್ಥೆಯನ್ನು ಗುರುತಿಸಿದೆ. ಇತ್ತೀಚಿಗೆ ಹೆಬ್ಬಾಳದಲ್ಲಿರುವ ಪ್ರಾಣಿ ಸಾಕಾಣಿಕೆ ಮತ್ತು ಪಶುವೈದ್ಯಕೀಯ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಿದೆ.

 BBMP Prepares List Of 1.15 Lakh Govt Health Workers For Covid Vaccine

ಕೊವಿಡ್-19 ಲಸಿಕೆ ಬಗ್ಗೆ ಬಿಬಿಎಂಪಿ ಸ್ಪಷ್ಟನೆ:

"ಬೆಂಗಳೂರಿನಲ್ಲಿ ಎರಡನೇ ಹಂತದಲ್ಲಿ ಯಾರಿಗೆ ಕೊರೊನಾವೈರಸ್ ಲಸಿಕೆ ನೀಡಬೇಕು ಎನ್ನುವುದರ ಕುರಿತು ಪಟ್ಟಿಯನ್ನು ಸಹ ಸಿದ್ಧಪಡಿಸುವುದಕ್ಕೆ ಮುಂದಾಗಿದ್ದೇವೆ. ಬಡ ಕಾರ್ಮಿಕರು, ಎರಡನೇ ಹಂತದ ವೈದ್ಯಕೀಯ ಕಾರ್ಯಕರ್ತರು ಹಾಗೂ ವೃದ್ಧರಿಗೆ ಕೊವಿಡ್-19 ಲಸಿಕೆಯನ್ನು ಎರಡನೇ ಹಂತದಲ್ಲಿ ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಲಸಿಕೆಯನ್ನು ಶೇಖರಿಸಿ ಇಡುವುದಕ್ಕೆ ವಿಶಾಲವಾದ ಸ್ಥಳದ ಅವಶ್ಯಕತೆ ಇರುತ್ತದೆ. ಹೆಚ್ಚುವರಿ ಘಟಕಗಳನ್ನು ಸ್ಥಾಪಿಸಬೇಕಾಗಿರುತ್ತದೆ. ಏಕೆಂದರೆ ಕರ್ನಾಟಕದ ಮಟ್ಟಿಗೆ ಬೆಂಗಳೂರು ಕೊರೊನಾವೈರಸ್ ಲಸಿಕೆಗಳ ಸಂಗ್ರಹಣಕ್ಕೆ ಪ್ರಮುಖ ಕೇಂದ್ರವಾಗಿರಲಿದೆ" ಎಂದು ಬಿಬಿಎಂಪಿ ತಿಳಿಸಿದೆ.

Recommended Video

coronaಯಿಂದ ಎಷ್ಟು ಕಷ್ಟ ನೋಡಿ | Oneindia Kannada

English summary
BBMP Prepares List Of 1.15 Lakh Govt Health Workers For Coronavirus Vaccine. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X