ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಪೌರ ಕಾರ್ಮಿಕರಿಂದ ಶುಕ್ರವಾರ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಜುಲೈ 09 : ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ಪೌರ ಕಾರ್ಮಿಕರು ನಗರವನ್ನು ಸ್ವಚ್ಛವಾಗಿಡಲು ಕೆಲಸ ಮಾಡುತ್ತಿದ್ದಾರೆ. ಆದರೆ, ಪೌರ ಕಾರ್ಮಿಕರ ಬಗ್ಗೆ ಬಿಬಿಎಂಪಿ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ.

Recommended Video

Susheel Gowda , ದುರಂತದ ಹಿಂದಿನ ಕಾರಣವೇನು | Filmibeat Kannada

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘ ಕೋವಿಡ್ - 19 ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತೆ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ. ಇದುವರೆಗೂ ನಗರದ 23 ಪೌರ ಕಾರ್ಮಿಕರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ.

ಶಿವಮೊಗ್ಗದಲ್ಲಿ ಜನರಿಂದ ಪೌರ ಕಾರ್ಮಿಕರಿಗೆ, ಪೊಲೀಸರಿಗೆ ಪಾದ ಪೂಜೆ ಶಿವಮೊಗ್ಗದಲ್ಲಿ ಜನರಿಂದ ಪೌರ ಕಾರ್ಮಿಕರಿಗೆ, ಪೊಲೀಸರಿಗೆ ಪಾದ ಪೂಜೆ

ಬಿಬಿಎಂಪಿ ಪೌರ ಕಾರ್ಮಿಕರ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಕಾರ್ಮಿಕರ ಸಂಘ ಶುಕ್ರವಾರ ಪ್ರತಿಭಟನೆ ನಡೆಸಲು ಮುಂದಾಗಿದೆ. ಜುಲೈ 10ರ ಶುಕ್ರವಾರ ಬೆಳಗ್ಗೆ 10.30 ರಿಂದ 11.30ರ ತನಕ ವಲಯ ಮಟ್ಟದಲ್ಲಿ ಪ್ರತಿಭಟನೆ ನಡೆಯಲಿದೆ.

ಬಿಬಿಎಂಪಿ ಕಚೇರಿಗೆ ಪ್ರವೇಶಿಸದಂತೆ ಸಾರ್ವಜನಿಕರಿಗೆ ನಿರ್ಬಂಧ ಬಿಬಿಎಂಪಿ ಕಚೇರಿಗೆ ಪ್ರವೇಶಿಸದಂತೆ ಸಾರ್ವಜನಿಕರಿಗೆ ನಿರ್ಬಂಧ

BBMP Powrakarika Sangha Protest On July 10

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಬಗ್ಗೆ ತಕ್ಷಣ ಕಾಳಜಿ ವಹಿಸಬೇಕು. ಬೇಡಿಕೆ ಈಡೇರಿಸಬೇಕು ಎಂದು ಪ್ರತಿಭಟನೆ ಮೂಲಕ ಬಿಬಿಎಂಪಿಯನ್ನು ಒತ್ತಾಯಿಸಲಾಗುತ್ತದೆ.

'ಮಿಸ್ಟ್ ಕೆನಾನ್ ಸ್ಪ್ರೇಯರ್' ಯಂತ್ರಕ್ಕೆ ಚಾಲನೆ ನೀಡಿದ ಬಿಬಿಎಂಪಿ'ಮಿಸ್ಟ್ ಕೆನಾನ್ ಸ್ಪ್ರೇಯರ್' ಯಂತ್ರಕ್ಕೆ ಚಾಲನೆ ನೀಡಿದ ಬಿಬಿಎಂಪಿ

ಬೆಂಗಳೂರು ನಗರದಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲಿ ಕಸ ಸಂಗ್ರಹಣೆಗೆ ಹೋಗುವ ಕಾರ್ಮಿಕರಿಗೆ ಬಿಬಿಎಂಪಿ ಪಿಪಿಇ ಕಿಟ್‌ಗಳನ್ನು ವಿತರಣೆ ಮಾಡಬೇಕಾಗುತ್ತದೆ.

ಪೌರ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಾರಿಯರ್ಸ್ ಎಂದು ಘೋಷಣೆ ಮಾಡಿದ್ದಾರೆ. ಅವರ ಆರೋಗ್ಯದ ಬಗ್ಗೆ ಬಿಬಿಎಂಪಿ ಕಾಳಜಿ ವಹಿಸಬೇಕು, ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದರೆ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.

English summary
The BBMP powrakarmika Sangha has been repeatedly raising the issue of safety of powrakarmikas in the time of the covid-19 crisis. BBMP has not taken any steps towards protecting the health of powrakarmikas. To protest this powrakarmika sangha will stage protest on July 10, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X