ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

40 ಪೌರಕಾರ್ಮಿಕರಿಂದ ಆತ್ಮಹತ್ಯೆ ಬೆದರಿಕೆ: ಆಯುಕ್ತರಿಗೆ ಪತ್ರ

By Nayana
|
Google Oneindia Kannada News

ಬೆಂಗಳೂರು, ಜು. 14: ಕೇವಲ 15 ಸಾವಿರ ಪೌರಕಾರ್ಮಿಕರಿಗೆ ಮಾತ್ರ ವೇತನ ಬಿಡುಗಡೆ ಮಾಡಲಾಗಿದೆ ಯಾಕೆ ನಾವು ಪೌರಕಾರ್ಮಿಕರಲ್ಲವೆ ಎಂದು ಪೌರಕಾರ್ಮಿಕರು ಪ್ರಶ್ನಿಸಿದ್ದಾರೆ .ಆಯುಕ್ತರಿಗೆ ಈ ಕುರಿತು ಪ್ರಶ್ನಿಸಿರುವ 40 ಪೌರಕಮಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ಪತ್ರ ಬರೆದಿದ್ದಾರೆ.

ಏಳು ತಿಂಗಳಾದರೂ ವೇತನ ನೀಡಿಲ್ಲ, ಬಾಕಿ ವೇತನವನ್ನು ನೀಡುವುದಾಗಿ ಮೇಯರ್‌ ಸುಳ್ಳು ಭರವಸೆ ನೀಡಿದ್ದಾರೆ ಆದರೆ ಇದುವರೆಗೂ ಎಲ್ಲರಿಗೂ ವೇತನ ಸಿಕ್ಕಿಲ್ಲ, ನಾವು ಜೀವನ ನಡೆಸುವುದು ಕಷ್ಟವಾಗಿದೆ, ಕೂಡಲೇ ಎಲ್ಲಾ ಪೌರಕಾರ್ಮಿಕರಿಗೂ ವೇತನ ಬಿಡುಗಡೆ ಮಾಡಬೇಕು ಇಲ್ಲವಾದಲ್ಲಿ ಎಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಪತ್ರ ಬರೆದಿದ್ದಾರೆ.

ಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ: ಎಸಿಬಿ ತನಿಖೆಗೆ ನಿರ್ಧಾರಪೌರ ಕಾರ್ಮಿಕ ಸುಬ್ರಮಣಿ ಆತ್ಮಹತ್ಯೆ: ಎಸಿಬಿ ತನಿಖೆಗೆ ನಿರ್ಧಾರ

ಶಿವಾಜಿನಗರದ ಸಂಪಂಗಿ ರಾಮನಗರ ವಾರ್ಡ್‌ನ ಪೌರಕಾರ್ಮಿಕರು ಈ ಎಚ್ಚರಿಕೆ ನೀಡಿದ್ದಾರೆ, ಜತೆಗೆ ಪತ್ರದಲ್ಲಿ ಮೇಸ್ತ್ರಿ ಶಾಮ ಮತ್ತಿತರೆ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಇತ್ತೀಚೆಗೆ ಕಾವಲ್‌ಭೈರಸಂದ್ರದ ಪೌರಕಮಾರ್ಮಿಕ ಸುಬ್ರಮಣಿ ಆತ್ಹಮಹತ್ಯೆ ಮಾಡಿಕೊಂಡಿದ್ದರು.

BBMP Poura Karmikas threat suicide for salary again

ಈ ವಿಚಾರ ತಾರಕಕ್ಕೇರುತ್ತಿದ್ದ ಕಾರಣ ಬಿಬಿಎಂಪಿಯು ತಕ್ಷಣವೇ ವೇತನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು, ಇದೀಗ ಕೇವಲ 15 ಸಾವಿರ ಪೌರಕಾರ್ಮಿಕರಿಗೆ ಮಾತ್ರ ವೇತನವನ್ನು ನೀಡಿ ಒಂದಷ್ಟು ಪೌರಕಾರ್ಮಿಕರ ಬಾಯನ್ನು ಮುಚ್ಚಿದ್ದಾರೆ ಆದರೆ ಉಳಿದ ಕಾರ್ಮಿಕರ ಗತಿಯೇನು ಎನ್ನುವುದರ ಕುರಿತು ಆಲೋಚನೆ ಮಾಡಬೇಕಿದೆ.

English summary
More than 40 contract Poura Karmikas of BBMP have written a letter to commissioner alleging some officers have extorting for salary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X