ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋ ನಿಲ್ದಾಣ: ಬಿಬಿಎಂಪಿಯಿಂದ ಫುಟ್ ಪಾತ್ ಅಭಿವೃದ್ಧಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 2 : ಬಿಬಿಎಂಪಿಯು ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ 40 ಕಿ.ಮೀ ಉದ್ದದ ಫುಟ್ ಪಾತ್ ಗಳನ್ನು 90 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸುತ್ತಿದೆ.

ಫುಟ್ ಪಾತ್ ಗಳ ಅಭಿವೃದ್ಧಿ ಯಿಂದ ಸೈಕಲ್ ಸವಾರರು ಮತ್ತು ಪಾದಚಾರಿಗಳು ಯಾವುದೇ ಅಡೆತಡೆ ಇಲ್ಲದೆ ಮೆಟ್ರೋ ನಿಲ್ದಾಣಗಳನ್ನು ತಲುಪಬಹುದು. ಪಾದಚಾರಿ ಮಾರ್ಗಗಳ ಅಭಿವೃದ್ಧಿ ಸಂಬಂಧ ವಿಸ್ತೃತ ಯೋಜನಾ ವರದಿಯನ್ನು ಪಾಲಿಕೆಯು ಸಿದ್ಧಪಡಿಸುತ್ತಿದೆ. ಈ ಯೋಜನೆಯು ಅನುಷ್ಠಾನಗೊಂಡರೆ, ಟೆಂಡರ್ ಶ್ಯೂರ್ ಮಾದರಿಯಲ್ಲಿ ಫುಟ್ ಪಾತ್ ಗಳು ಅಭಿವೃದ್ಧಿ ಹೊಂದಲಿವೆ.

ಮೆಟ್ರೋ-2 ಕಾಮಗಾರಿ: ನಿಗದಿತ ವೇಳೆಗೆ ಪೂರ್ಣ ನಿರೀಕ್ಷೆಮೆಟ್ರೋ-2 ಕಾಮಗಾರಿ: ನಿಗದಿತ ವೇಳೆಗೆ ಪೂರ್ಣ ನಿರೀಕ್ಷೆ

ಈ ಯೋಜನೆಯಲ್ಲಿಯೇ ಸೈಕಲ್ ಪಥ ನಿರ್ಮಿಸಲು ಚಿಂತನೆ ನಡೆಸಿದೆ. ನಗರದ ಎಂಜಿ ರಸ್ತೆ, ಇಂದಿರಾನಗರ, ಬೈಯಪ್ಪನಹಳ್ಳಿ, ದೀಪಾಂಜಲಿನಗರ, ಮೈಸೂರು ರಸ್ತೆ, ಜಯನಗರ, ಜೆಪಿನಗರ ಮೆಟ್ರೋ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳು ಅಭಿವೃದ್ಧಿಯಾಗಲಿವೆ.

BBMP plans to develop 40km of footpath around Metro stations

ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಫುಟ್ ಪಾತ್ ಅಭಿವೃದ್ಧಿ ಸಂಬಂಧ ವಿಸ್ತೃತ ಯೋಜನಾ ವರದಿಯು ಮುಂದಿನ ಒಂದು ತಿಂಗಳಲ್ಲಿ ತಯಾರಾಗಲಿದೆ. ಆನಂತರ ಕಾಮಗಾರಿ ಕೈಗೆತ್ತಿಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಕೊಳ್ಳಲಾಗುವುದು.

ಎಂಜಿ ರಸ್ತೆ ಸುತ್ತಮುತ್ತಲಿನ ಪಾದಚಾರಿ ಮಾರ್ಗಗಳನ್ನು ಈಗಾಗಲೇ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ ಸಣ್ಣಪುಟ್ಟ ಕೆಲಸಗಳಷ್ಟೇ ಬಾಕಿ ಇವೆ. ಹಂತ ಹಂತವಾಗಿ ಉಳಿದ ಮೆಟ್ರೋ ನಿಲ್ದಾಣಗಳ ಸುತ್ತಮುತ್ತಲಿನ ಫುಟ್ ಪಾತ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಈ ಯೋಜನೆಗೆ 90 ಕೋಟಿ ರೂ ವೆಚ್ಚವಾಗಲಿದೆ ಎಂದು ಬಿಬಿಎಂಪಿಯ ಕಾರ್ಯ ನಿರ್ವಾಹಕ ಎಂಜಿನಿಯರ್ ಪ್ರಭಾಕರ್ ತಿಳಿಸಿದ್ದಾರೆ.

ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರು ನಿಲ್ದಾಣ ಗಳಿಗೆ ಬರಲು ಬೈಕ್, ಕಾರು, ಟ್ಯಾಕ್ಸಿ ಅಥವಾ ಆಟೋ ರಿಕ್ಷಾಗಳನ್ನು ಬಳಸುತ್ತಿದ್ದಾರೆ. ಫುಟ್ ಪಾತ್ ಗಳನ್ನು ಅಭಿವೃದ್ಧಿಪಡಿಸುವುದರಿಂದ ಪಾದಚಾರಿಗಳಿಗೆ ತುಂಬಾ ಅನುಕೂಲವಾಗಲಿದೆ.

English summary
In a move to promote non-motorized forms of transport, walking and cycling in plain speak, the BBMP plans to develop and upgrade about 40km of footpaths around Metro stations in the city. The idea of the project is to encourage people in the vicinity to walk to metro stations instead of depending on motorized modes of transport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X