ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಸಿ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಬಿಬಿಎಂಪಿ ಯೋಜನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 3 : ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ ದ್ವಿಮುಖ ರಸ್ತೆಯನ್ನು ಏಕಮುಖ ರಸ್ತೆಯನ್ನಾಗಿ ಪರಿವರ್ತಿಸಲಾಗುತ್ತಿದೆ. ಆದರೆ, 20 ವರ್ಷಗಳ ಹಿಂದೆ ಏಕಮುಖ ವಾಗಿಸಿತ್ತು. ನಿತ್ಯ ೧ ಲಕ್ಷಕ್ಕೂ ಹೆಚ್ಚಿನ ವಾಹನಗಳ ಸಂಚಾರವಿರುವ ರಸ್ತೆಯೊಂದನ್ನು ದ್ವಿಮುಖ ರಸ್ತೆಯನ್ನಾಗಿ ಪರಿವರ್ತಿಸಲು ಬಿಬಿಎಂಪಿ ಸಜ್ಜಾಗಿದೆ.

ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗಿನ ಉಕ್ಕಿನ ಮೇಲುರಸ್ತೆ ಕಾಮಗಾರಿ ಸ್ಥಗಿತಗೊಂಡ ನಂತರ ಸರ್ಕಾರ ಮತ್ತು ಬಿಬಿಎಂಪಿ, ಶಿವಾನಂದ ವೃತ್ತ ಹಾಗೂ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಉಕ್ಕಿನ ಮೇಲುರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದೆ. ಶಿವಾನಂದ ವೃತ್ತ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಈಗಾಗಲೇ ಆರಂಭವಾಗಿದೆ.

ವಿಡಿಯೋ : ಯಮನಿಗೆ ಆಹ್ವಾನ ನೀಡಬೇಡಿ ಬೈಕ್ ಚಾಲಕರೆವಿಡಿಯೋ : ಯಮನಿಗೆ ಆಹ್ವಾನ ನೀಡಬೇಡಿ ಬೈಕ್ ಚಾಲಕರೆ

ಪ್ರತ್ಯೇಕ ಇಳಿ,ಏರು ರಸ್ತೆಗಳು: ಯೋಜನೆಯಂತೆ ಉಕ್ಕಿನ ಮೇಲ್ಸೇತುವೆ ಮೂಲಕ ಬೇರೆ ಮಾರ್ಗಕ್ಕೆ ಸಂಚರಿಸಲು 2 ಇಳಿ ಹಾದಿ ಹಾಗೂ 3 ಏರು ಹಾದಿ ನಿರ್ಮಿಸಲಾಗುತ್ತಿದೆ. ಹಡ್ಸನ್ ವೃತ್ತದಿಂದ ಆರ್ ವಿ ರಸ್ತೆ ಕಡೆಗೆ ಸಂಚರಿಸುವ ವಾಹನಗಳಿಗಾಗಿ 1 ಇಳಿ ಹಾದಿ ಹಾಗೂ 1 ಏರು ಹಾದಿ ನಿರ್ಮಿಸಲಾಗುತ್ತದೆ.

BBMP planning two way traffic in JC road

ಟ್ರಾಫಿಕ್ ಪೊಲೀಸರ ಕೈಗೆ ಹೊಸ ಮೊಬೈಲ್, ನಿಯಮ ಉಲ್ಲಂಘನೆ ಅಸಾಧ್ಯಟ್ರಾಫಿಕ್ ಪೊಲೀಸರ ಕೈಗೆ ಹೊಸ ಮೊಬೈಲ್, ನಿಯಮ ಉಲ್ಲಂಘನೆ ಅಸಾಧ್ಯ

ದ್ವಿಪಥದ ಮೇಲ್ಸೇತುವೆ: 2008 ರ ವಾಹನ ಸಮೀಕ್ಷೆ ವರದಿ ಪ್ರಕಾರ ಮಿನರ್ವ ವೃತ್ತ-ಹಡ್ಸನ್ ವೃತ್ತ ಮಾರ್ಗದಲ್ಲಿ ಪ್ರತಿದಿನ ಬೆಳಗ್ಗೆ9 ರಿಂದ 11 ಗಂಟೆಯವರೆಗೆ 12 ಸಾವಿರ, ಸಂಜೆ4 ರಿಂದ 7 ರವರೆಗೆ 10 ಸಾವಿರ ಕಾರುಗಳು ಸಂಚರಿಸುತ್ತಿದ್ದವು. ಈ ಪ್ರಮಾಣ ಈಗ 50 ಸಾವಿರಕ್ಕೆ ಏರಿದೆ. ದ್ವಿಚಕ್ರ ಹಾಗೂ ಭಾರಿ ವಾಹನಗಳು ಸೇರಿ 1 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಸಂಚಾರ ದಟ್ಟಣೆ ತಗ್ಗಿಸಲು ಮಿನರ್ವ ವೃತ್ತ-ಹಡ್ಸನ್ ವೃತ್ತ ಮಾರ್ಗದಲ್ಲಿ 4 ಪಥದ ದ್ವಿಮುಖ ಸಂಚಾರ ಸೇತುವೆ ನಿರ್ಮಿಸಲಾಗುತ್ತದೆ.

English summary
After two decade of one traffic in most busiest JC road in Bengaluru will get two esay opportunity for the general public. BBMP planning to construction steel bridge in the road to resolve traffic congestion of the road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X