ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ಸರ್ವೇಕ್ಷಣ 2020: ಕಳೆದ ಬಾರಿಗಿಂತ ಬಿಬಿಎಂಪಿಯಿಂದ ಕಳಪೆ ಸಾಧನೆ

|
Google Oneindia Kannada News

ಬೆಂಗಳೂರು, ಆಗಸ್ಟ್ 20: ಸ್ವಚ್ಛ ಸರ್ವೇಕ್ಷಣದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹಿನ್ನಡೆಯಾಗಿದೆ. ಕಳೆದ ಬಾರಿಯ ಪಟ್ಟಿಯಲ್ಲಿ 194ನೇ ಸ್ಥಾನಲ್ಲಿದ್ದ ಬೆಂಗಳೂರು ಈ ಬಾರಿ 214ನೇ ಸ್ಥಾನಕ್ಕೆ ಕುಸಿದಿದೆ.

Recommended Video

ಸ್ಯಾಟಲೈಟ್ ನಲ್ಲಿ ಸೆರೆಯಾಯ್ತು Chinese ಮತ್ತೊಂದು ಮಂಗನಾಟ | Oneindia Kannada

10 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಆಯ್ದ 47 ನಗರಗಳನ್ನು ‌ಪಟ್ಟಿ ಮಾಡಿ ಕಸ ವಿಲೇವಾರಿ ಹಾಗೂ ನಿರ್ವಹಣೆಗೆ ಈ ನಗರಗಳು ಅಳವಡಿಸಿಕೊಂಡಿರುವ ವಿಧಾನ ಮತ್ತು ಪ್ರಯತ್ನವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 47 ನಗರಗಳಲ್ಲಿ ಪಾಲಿಕೆಗೆ 37ನೇ ಸ್ಥಾನ ಲಭ್ಯವಾಗಿದೆ.

ಸ್ವಚ್ಛ ಸರ್ವೇಕ್ಷಣ 2020: ಸ್ವಚ್ಛನಗರ ಇಂದೋರ್, ಸ್ವಚ್ಛ ರಾಜ್ಯ ಛತ್ತೀಸ್‌ಗಢಸ್ವಚ್ಛ ಸರ್ವೇಕ್ಷಣ 2020: ಸ್ವಚ್ಛನಗರ ಇಂದೋರ್, ಸ್ವಚ್ಛ ರಾಜ್ಯ ಛತ್ತೀಸ್‌ಗಢ

ಪ್ರತಿ ವರ್ಷ ನಗರಗಳ ಸ್ವಚ್ಛತೆ ಹಾಗೂ ಕಸವಿಲೇವಾರಿ ಮಾನದಂಡಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಪ್ರಶಸ್ತಿ ಮತ್ತು ಸ್ಥಾನ ನೀಡುತ್ತದೆ. ಬೆಂಗಳೂರು ಈ ಬಾರಿಯೂ ಹಿನ್ನಡೆ ಸಾಧಿಸುವುದರ ಜೊತೆಗೆ ಕಳೆದ ವರ್ಷಕ್ಕಿಂತ 20 ಸ್ಥಾನ ಹಿನ್ನಡೆ ‌ಸಾಧಿಸಿದೆ.

BBMP Performance in Swachh Survekshan 2020: Bengaluru Finds Place in Swachh Bharath Rating

ಬೆಸ್ಟ್ ಸಸ್ಟೇನೆಬಲ್ ಸಿಟಿ: ಕಳೆಪೆ ಸಾಧನೆಯ ನಡುವೆಯೂ ಪಾಲಿಕೆಗೆ ಬೆಸ್ಟ್ ಸಸ್ಟೇನೆಬಲ್ ಸಿಟಿ ಎಂಬ ಪ್ರಶಸ್ತಿ ಸಿಕ್ಕಿರುವುದು ಅಚ್ಚರಿ‌ ಮೂಡಿಸಿದೆ.

ಸ್ವಚ್ಛ ಸರ್ವೇಕ್ಷಣ 2020ರ ಫಲಿತಾಂಶ ಹೊರಬಿದ್ದಿದೆ. ಇಂದೋರ್ ಭಾರತದ ಸ್ವಚ್ಛ ನಗರ ಎನ್ನುವ ಖ್ಯಾತಿಗೆ ಪಾತ್ರವಾದರೆ , ಛತ್ತೀಸ್‌ಗಢ ದೇಶದ ಸ್ವಚ್ಛ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಂದೋರ್ ನಾಲ್ಕನೇ ಬಾರಿ ಸ್ವಚ್ಛ ನಗರ ಪ್ರಶಸ್ತಿ ಪಡೆದುಕೊಳ್ಳುತ್ತಿದೆ, ಛತ್ತೀಸ್‌ಗಢ ಎರಡನೇ ಬಾರಿಗೆ ಸ್ವಚ್ಛ ರಾಜ್ಯ ಎನ್ನುವ ಪಟ್ಟ ಪಡೆದುಕೊಂಡಿದೆ.. ಈ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ.

ಗುಜರಾತಿನ ಸೂರತ್ ಎರಡನೇ ಸ್ಥಾನ ಪಡೆದುಕೊಂಡರೆ ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನ ಗಳಿಸಿದೆ. ಒಟ್ಟ 129 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಈ ಬಾರಿ ಸಮೀಕ್ಷೆಯು 4242 ನಗರಗಳನ್ನು ಒಳಗೊಂಡಿತ್ತು.

English summary
BBMP Performance in Swachh Survekshan 2020, BBMP gor 214 Rank lesser than Last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X