ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೋಟರ್ ಐಡಿ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

|
Google Oneindia Kannada News

ಬೆಂಗಳೂರು, ಆಗಸ್ಟ್ 22: ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರ ಅಂತಿಮ ಕರಡು ಪಟ್ಟಿಯನ್ನು ಹೊರಡಿಸಲು ಬಿಬಿ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ವೋಟರ್ ಐಡಿ ಕಾರ್ಡ್‌ಅನ್ನು ಆಧಾರ್ ಜೊತೆ ಲಿಂಕ್ ಮಾಡುವಂತೆ ಬಿಬಿಎಂಪಿ ಆದೇಶವನ್ನು ರಾಜ್ಯ ಚುನಾವಣಾ ಆಯೋಗ ಟ್ವೀಟ್ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯ್ಲಿ ವಾಸಿಸಿವ ಅದೆಷ್ಟೋ ಜನರು ವಲಸಿಗರಾಗಿದ್ದಾರೆ. ಬೇರೆ ಬೇರೆ ರಾಜ್ಯದಿಂದ, ರಾಜ್ಯದ ಇತರೆ ಜಿಲ್ಲೆಗಳಿಂದ ವಲಸೆ ಬಂದಿರುತ್ತಾರೆ. ತಮ್ಮ ಮೂಲ ಸ್ಥಳದಲ್ಲೊಂದು ಮತದಾನ ಗುರುತಿನ ಚೀಟಿ ಮತ್ತು ಬೆಂಗಳೂರಿನಲ್ಲೂ ಮತ್ತೊಂದು ಗುರುತಿನ ಚೀಟಿಯನ್ನು ಇಟ್ಟುಕೊಂಡಿರುತ್ತಾರೆ. ಎರಡು ಕಡೆ ಗುರುತಿನ ಚೀಟಿಯನ್ನು ಪಡೆಯುವಂತಿಲ್ಲ. ಮತದಾನ ಗುರುತಿನಿ ಚೀಟಿಯನ್ನು ಆಧಾರ್ ಜೊತೆಗೆ ಲಿಂಕ್ ಮಾಡಿದರೇ ಆ ಮತದಾನ ಗುರುತಿನ ಸತ್ಯಾಂಶ ಬಯಲಾಗಲಿದೆ. ಈ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಜನ ಸಾಮಾನ್ಯರು ಸ್ವಯಂ ಪ್ರೇರಿತರಾಗಿ ಆಧಾರ್ ಗೆ ಮತದಾನ ಗುರುತಿನ ಚೀಟಿ ಲಿಂಕ್ ಮಾಡಲು ಬಿಬಿಎಂಪಿ ಕೋರಿಕೊಂಡಿದೆ.

BBMP Order to Link Voter ID Card with Aadhaar, Know How to Do It

ಮತದಾರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಹೇಗೆ?
ಎಲ್ಲಾ ಮತದಾರರು ತಮ್ಮ ಕುಟುಂಬದ ಎಲ್ಲಾ ಮತದಾರರ ಗುರುತಿನ ಚೀಟಿಗೆ App ಮುಖಾಂತರ ಮನೆಯಲ್ಲಿ ಕುಳಿತುಕೊಂಡು ಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್‌ ನಂಬರ್‍‌ಗೆ ಲಿಂಕ್ ಮಾಡಬಹುದು.
1. play storeಗೆ ಹೋಗಿ voter help line appನ್ನು Install ಮಾಡಿಕೊಳ್ಳಬೇಕು.
2. appನ್ನು Install ಮಾಡುವಾಗ permission ಎಲ್ಲವೂ allow ಎಂದು ಮಾಡಬೇಕು.
3. appನ್ನು Install ಮಾಡಿಕೊಂಡು app ಕೆಳಗಡೆ ಎಡಬದಿಯಲ್ಲಿರುವ Explore option ಮೇಲೆ ಕ್ಲಿಕ್ ಮಾಡಬೇಕು.
4.Electroral Authentication Form 16B select ಮಾಡಿಕೊಳ್ಳಬೇಕು.
5. ಮೊಬೈಲ್ ನಂಬರ್ ಅನ್ನು ಹಾಕಬೇಕು.
6. ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ. ಆ ನಂಬರ್ ಎಂಟ್ರಿಮಾಡಬೇಕು, ವೆರಿಫೈ ಅಂತ ಮಾಡಬೇಕು.
7. ನಿಮ್ಮ ಎಪಿಕ್ ನಂಬರ್ ಹಾಕಬೇಕು( ಚುನಾವಣಾ ಗುರುತಿನ ಚೀಟಿ ನಂಬರ್) ಮತ್ತು ಸ್ಟೇಟ್ ಸೆಲೆಕ್ಟ್ ಮಾಡಬೇಕು.

BBMP Order to Link Voter ID Card with Aadhaar, Know How to Do It


8. ನಿಮ್ಮ ಆಧಾರ್ ನಂಬರ್ ನಮೂದಿಸಬೇಕು.
9. ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
10. EMail Id ನಮೂ ಇರದಿದ್ದರೇ ಹಾಗಯೇ ಖಾಲಿ ಬಿಡಿ.
11. ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ.
12. Proceed option ಒತ್ತಿ.
13. Confirm button ಒತ್ತಿ.
14. Successfully ಅಂತ ಒಂದು ref Number ಬರುತ್ತದೆ.

ಈ ಹಂತಗಳನ್ನು ಫಾಲೋ ಮಾಡುವ ಮೂಲಕ ಮತದಾರ ಗುರುತಿನ ಚೀಟಿಗೆ ಆಧಾರ್ ಅನ್ನು ಸ್ವಯಂ ಪ್ರೇರಣೆಯಿಂದ ಲಿಂಕ್ ಮಾಡಲು ಬಿಬಿಎಂಪಿ ಕೋರಿದೆ.

English summary
BBMP is gearing up to release the final draft voter list as the BBMP elections draw near. The State Election Commission tweeted the BBMP order to link voter ID card with Aadhaar,Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X