ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕ್ಲಬ್, ಬಾರ್, ರೆಸ್ಟೊರೆಂಟ್‌ಗಳಲ್ಲಿ ಸ್ಮೋಕಿಂಗ್ ಜೋನ್‌ ಖಡ್ಡಾಯ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್‌ 28: ನಗರದ ಬಾರು, ಕ್ಲಬ್, ಹೊಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಸ್ಮೋಕಿಂಗ್ ಜೋನ್‌ (ಧೂಮಪಾನ ವಲಯ) ಇರುವುದು ಖಡ್ಡಾಯ ಎಂದು ಬಿಬಿಎಂಪಿ ಮೇಯರ್ ಸಂಪತ್‌ ರಾಜ್ ಹೇಳಿದ್ದಾರೆ.

ಬಿಬಿಎಂಪಿ ಸಭೆಯಲ್ಲಿಂದು ಹೇಗೆ ಪರೋಕ್ಷ ಧೂಮಪಾನ ಸೇವನೆಯಿಂದ ಕ್ಯಾನ್ಸರ್‌ ರೋಗಕ್ಕೆ ಜನ ತುತ್ತಾಗುತ್ತಿದ್ದಾರೆ ಎಂದು ಕ್ಯಾನ್ಸರ್ ರೋಗ ತಜ್ಞ ಡಾ.ವಿಶಾಲ್ ರಾವ್ ಅವರು ಪ್ರಾತ್ಯಕ್ಷಿತೆ ನೀಡಿ, ಧೂಮಪಾನ ನಿಯಂತ್ರಣಕ್ಕೆ ಮನವಿ ಮಾಡಿದ್ದರು, ಹಾಗಾಗಿ ಮೇಯರ್‌ ಅವರು ಈ ಸೂಚನೆ ಹೊರಡಿಸಿದ್ದಾರೆ.

ಸಾರಿಗೆ ಸೆಸ್ ಹೇರುವ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದ ಬಿಬಿಎಂಪಿಸಾರಿಗೆ ಸೆಸ್ ಹೇರುವ ನಿರ್ಧಾರದಿಂದ ಸದ್ಯಕ್ಕೆ ಹಿಂದೆ ಸರಿದ ಬಿಬಿಎಂಪಿ

ಶಾಲಾ-ಕಾಲೇಜುಗಳ ನೂರು ಮೀಟರ್‌ ಸುತ್ತಳತೆಯಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಬಾರದು ಈ ನಿಟ್ಟಿನಲ್ಲಿ ಅಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎಂದು ಮೇಯರ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

BBMP order that bar, club, restaurants should have smoking zone

ವಿಶಾಲ್ ರಾವ್ ಅವರ ಮನವಿಗೆ ಸಭೆಯಲ್ಲಿ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಯಿತು. ಎಲ್ಲ ಪಕ್ಷದ ಸದಸ್ಯರು ಧೂಮಪಾನ ನಿಯಂತ್ರಣ ಮೊದಲ ಆದ್ಯತೆ ಆಗಬೇಕು ಎಂದು ಧನಿಗೂಡಿಸಿದರು. ಅದರಲ್ಲಿಯೂ ಪರೋಕ್ಷ ಧೂಮಪಾನದಿಂದ ಆಗುತ್ತಿರುವ ಹಾನಿಯನ್ನು ತಡೆಗಟ್ಟಬೇಕು ಎಂದರು.

ಯಾರಾಗಲಿದ್ದಾರೆ ಬಿಬಿಎಂಪಿಯ ನೂತನ ಮೇಯರ್?ಯಾರಾಗಲಿದ್ದಾರೆ ಬಿಬಿಎಂಪಿಯ ನೂತನ ಮೇಯರ್?

ಈ ಕೂಡಲೇ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು ಕಾರ್ಯಾಚರಣೆ ನಡೆಸಿ ಸ್ಮೋಕಿಂಗ್ ಜೋನ್ ತೆರೆಯುವ ಬಗ್ಗೆ ಹೊಟೆಲ್, ಬಾರ್, ಕ್ಲಬ್‌ ಮಾಲೀಕರಲ್ಲಿ ಅರಿವು ಮೂಡಿಸಬೇಕು ಹಾಗೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮೇಯರ್‌ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದರು.

English summary
BBMP mayor Sampath Raj orders that all Bar, pub, club, restaurants in the city should have smoking zone. Health officers should create awareness about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X