ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ: ಅಪಾರ್ಟ್ಮೆಂಟ್, ಬಡಾವಣೆಗಳಿಗೆ ಮಹತ್ವದ ಸೂಚನೆ

|
Google Oneindia Kannada News

ಬೆಂಗಳೂರು, ಮಾರ್ಚ್ 26: ನಗರದ ಸರ್ಜಾಪುರ ರಸ್ತೆಯ ಕೈಕೊಂಡಹಳ್ಳಿಯ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನಿವಾಸಿಯೊಬ್ಬರಿಗೆ ''ಕೊರೊನಾ ವೈರಸ್ ಪಾಸಿಟಿವ್'' ಇರುವ ಶಂಕೆ ವ್ಯಕ್ತವಾದಾಗಿನಿಂದಲೂ ಅಪಾರ್ಟ್ಮೆಂಟ್ ನಿವಾಸಿಗಳಲ್ಲಿ ಕೊರೊನಾವೈರಸ್ ಕುರಿತಂತೆ ಆತಂಕ ಇದ್ದೇ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆಯುಕ್ತರು ಈ ನಿಟ್ಟಿನಲ್ಲಿ ಆಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಲೇಔಟ್ ಗಳಲ್ಲಿ ವಾಸಿಸುವವರಿಗಾಗಿ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ಕೊರೊನಾ: ನಿಮ್ಮ ಅಪಾರ್ಟ್ ಮೆಂಟ್ ಎಷ್ಟು ಸೇಫ್?ಬೆಂಗಳೂರಿನಲ್ಲಿ ಕೊರೊನಾ: ನಿಮ್ಮ ಅಪಾರ್ಟ್ ಮೆಂಟ್ ಎಷ್ಟು ಸೇಫ್?

ಬೆಂಗಳೂರಿನಲ್ಲಿ ಸರಿ ಸುಮಾರು 22 ಸಾವಿರ ಅಪಾರ್ಟ್ ಮೆಂಟ್ ಗಳು ಇವೆ. ಕಡಿಮೆ ಎಂದರೂ ಒಂದು ಅಪಾರ್ಟ್ ಮೆಂಟ್ ನಲ್ಲಿ 20 ಫ್ಲಾಟ್ ಗಳು ಇರುತ್ತದೆ. ನೂರಾರೂ ಮಂದಿ ವಾಸ ಮಾಡುವ ಅಪಾರ್ಟ್ ಮೆಂಟ್ ಗಳಲ್ಲಿ ಅಪ್ಪಿ ತಪ್ಪಿ ಕೊರೊನಾ ವೈರಸ್ ಸೋಂಕು ತಗುಲಿದರೆ, ಒಮ್ಮೆಲೆ ಹೆಚ್ಚು ಮಂದಿಯ ಜೀವಕ್ಕೆ ಕುತ್ತು ಬಂದ ಹಾಗೆ. ಹೀಗಾಗಿ, ಅಪಾರ್ಟ್ ಮೆಂಟ್ ನಲ್ಲಿ ವಾಸ ಮಾಡುವವರು ಹೆಚ್ಚಿನ ಸುರಕ್ಷತಾ ಕ್ರಮವನ್ನು ಕೈಗೊಳ್ಳಬೇಕು ಎಂದು ಬಿಬಿಎಂಪಿ ಅಧಿಕಾರಿ ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಅಪಾರ್ಟ್ಮೆಂಟ್/ ಲೇ ಔಟ್ ಗಳಲ್ಲಿ ಸಾಮಾಜಿಕ ಅಂತರ(Social Distancing) ಕಾಯ್ದುಕೊಳ್ಳುವುದು ಹಾಗೂ ಇತರರಿಂದ ಪ್ರತ್ಯೇಕವಾಗಿರುವುದರ(Quarantine)ಕುರಿತಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಮಾರ್ಗದರ್ಶಿ ಸೂತ್ರ, ಕ್ರಮಗಳು ಮುಂದಿವೆ...

 ಸೋಮ್ಕು ನಿವಾರಣ ಮಿಶ್ರಣ ಸಿಂಪಡಿಸಿ

ಸೋಮ್ಕು ನಿವಾರಣ ಮಿಶ್ರಣ ಸಿಂಪಡಿಸಿ

ಎಲ್ಲಾ ಅಪಾರ್ಟ್ಮೆಂಟ್/ ಲೇ ಔಟ್ ಗಳಲ್ಲಿ ಕಡ್ಡಾಯವಾಗಿ ಅಗತ್ಯ ಸೋಂಕು ನಿವಾರಣಾ ಮಿಶ್ರಣವನ್ನು ಸ್ಪ್ರೇ ಹಾಗೂ ಧೂಮಿಕರಣ ಮಾಡಲು ಕ್ರಮವಹಿಸುವುದು.

ಎಲ್ಲಾ ಒಳ ಬರುವ ಹಾಗೂ ಹೊರ ಹೋಗ ಸಾರ್ವಜನಿಕರಿಗೆ ಲಭ್ಯವಾಗುವಂತೆ ಹ್ಯಾಂಡ್ ಸ್ಯಾನಿಟೈಸರ್/ ಸೋಪ್ ಸಲ್ಯೂಷನ್ ಒದಗಿಸುವುದು ಹಾಗೂ ಸದರಿ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಸೋಪು ಸಾರ್ವಜನಿಕರು ಸ್ವಚ್ಛವಾಗಿರಿಸುವಂತೆ ಬಳಸಲು ಕ್ರಮವಹಿಸುವುದು ಹಾಗೂ ಖಾತರಿ ಪಡಿಸಿಕೊಳ್ಳುವುದು.

 ಅಪಾರ್ಟ್ಮೆಂಟ್ ಗೆ ಬರುವ ಸಾರ್ವಜನಿಕರಿಗೆ

ಅಪಾರ್ಟ್ಮೆಂಟ್ ಗೆ ಬರುವ ಸಾರ್ವಜನಿಕರಿಗೆ

ಸಾರ್ವಜನಿಕರಿಗೆ ಜ್ವರ, ಶೀತ, ಕೆಮ್ಮು ಇತರೆ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಆರೋಗ್ಯ ತಪಾಸನೆಯನ್ನು ಮಾಡಿಸಿ ಅಗತ್ಯ ಚಿಕಿತ್ಸೆಗೆ ಒಳಪಡಿಸುವುದು.

ಸಾರ್ವಜನಿಕರು ಸುರಕ್ಷಿತ ದಿರಿಸುಗಳನ್ನು ಧರಿಸುವ ಮೂಲಕ ಪರಸ್ಪರರ ಮಧ್ಯ ಕನಿಷ್ಠ ಭೌತಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಎಚ್ಚರ ವಹಿಸಲು ಅರಿವು ಮೂಡಿಸುವುದು.

 ಖಾಸಗಿ ಅಪಾರ್ಟ್ಮೆಂಟ್ ಈಜುಕೊಳಕ್ಕೂ ನುಗ್ಗಿದ ಕೊರೊನಾ ಭೀತಿ! ಖಾಸಗಿ ಅಪಾರ್ಟ್ಮೆಂಟ್ ಈಜುಕೊಳಕ್ಕೂ ನುಗ್ಗಿದ ಕೊರೊನಾ ಭೀತಿ!

 ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್ಸ್ ತಪಾಸಣೆ

ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್ಸ್ ತಪಾಸಣೆ

ಅಪಾರ್ಟ್ಮೆಂಟ್/ ಸಂಕೀರ್ಣಗಳು/ ಲೇ ಔಟ್ ಗಳಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಮಿಕರು ತಮ್ಮ ಕರ್ತವ್ಯದ ಅವಧಿಯಲ್ಲಿ ಗ್ಲೌಸ್, ಮಾಸ್ಕ್ ಮತ್ತು ಶೂ ಮುಂತಾದ ಸುರಕ್ಷಾ ದಿರಿಸುಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಕೈಗಳಿಗೆ ಸೋಂಕು ತಗುಲದಂತೆ ಹ್ಯಾಂಡ್ ಸ್ಯಾನಿಟೈಸರ್/ ಡೆಟಾಲನ್ನು ಆಗಾಗ್ಗೆ ಬಳಸುವುದು.

ಎಲ್ಲಾ ಅಪಾರ್ಟ್ಮೆಂಟ್/ ಸಂಕೀರ್ಣಗಳು/ಲೇ ಔಟ್ ಗಳಲ್ಲಿ ಒಳಬರುವ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನರ್ಸ್ ಮೂಲಕ ತಪಾಸಣೆಗೆ ಒಳಪಡಿಸಲು ಕ್ರಮವಹಿಸುವುದು.

ತ್ಯಾಜ್ಯ ನಿರ್ವಹಣೆ ಬಗ್ಗೆ

ಅಪಾರ್ಟ್ಮೆಂಟ್/ ಸಂಕೀರ್ಣಗಳು/ ಲೇ ಔಟ್ ಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕದೇ ಹಸಿ/ಒಣ/ ಸ್ಯಾನಿಟರಿ ಮತ್ತು ಬಯೋ ಮೆಡಿಕಲ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ. ಸ್ಯಾನಿಟರಿ ಮತ್ತು ಬಯೋ ತ್ಯಾಜ್ಯವನ್ನು ಪ್ರತ್ಯೇಕ ಪೇಪರ್ ಅಥವಾ ಎಕೋ ಫ್ರೆಂಡ್ಲಿ ಚೀಲದಲ್ಲಿರಿಸಿ ಡಸ್ಟ್ ಬಿನ್ ಹಾಕುವುದು ಹಾಗೂ ಬಿಬಿಎಂಪಿ/ Bulk waste vendor ಸಿಬ್ಬಂದಿಗಳಿಗೆ ನೀಡುವುದು.

ಅಪಾರ್ಟ್ಮೆಂಟ್/ ಸಂಕೀರ್ಣಗಳು/ ಲೇ ಔಟ್ ಗಳಲ್ಲಿರುವ ಈಜುಕೊಳ, ಜಿಮ್, ಕ್ಲಬ್ ಹೌಸ್, ಪಾರ್ಕ್ ಹಾಗೂ ಆಟ ಪಾಠದ /ಮನರಂಜನಾ ಸ್ಥಳಗಳನ್ನು ಸರ್ಕಾರದ ಆದೇಶದ ಪ್ರಕಾರ ಕಡ್ಡಾಯವಾಗಿ ಮುಂದಿನ ಆದೇಶದವರೆಗೆ ಉಪಯೋಗಿಸುವಂತೆ ಕ್ರಮವಹಿಸುವುದು.

English summary
The BBMP Commissioner issued an order for all apartments/gated communities/layouts in Bengaluru, so as to ensure social distancing and quarantining of citizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X