ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಲಾಕ್‌ಡೌನ್‌ ಸ್ವಾಗತಿಸಿದ ಬಿಬಿಎಂಪಿ ವಿಪಕ್ಷ ನಾಯಕ ಅಬ್ದುಲ್ ವಾಜಿದ್

|
Google Oneindia Kannada News

ಬೆಂಗಳೂರು, ಜುಲೈ 11: ಜುಲೈ 14ರಿಂದ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ.

ರಾಜ್ಯ ಸರ್ಕಾರದ ಈ ಕ್ರಮಕ್ಕೆ ಬಿಬಿಎಂಪಿಯ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್ ಸ್ವಾಗತಿಸಿದ್ದು, ''ನಮ್ಮ ಮನವಿಗೆ ಪುರಸ್ಕರಿಸಿ ಬೆಂಗಳೂರು ಲಾಕ್‌ಡೌನ್‌ ಮಾಡಿದ್ದಕ್ಕಾಗಿ ಧನ್ಯವಾದಗಳು'' ಎಂದಿದ್ದಾರೆ.

Breaking: ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!Breaking: ಮಂಗಳವಾರದಿಂದ ಒಂದು ವಾರ ಬೆಂಗಳೂರು ಲಾಕ್ ಡೌನ್!

ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸಾಂಕ್ರಮಿಕ ರೋಗ ವೇಗವಾಗಿ ಹರಡುತ್ತಿದ್ದು. ಸಾಂಕ್ರಮಿಕ ರೋಗಕ್ಕೆ ಕಡಿವಾಣ ಹಾಕಲು ಬೆಂಗಳೂರು ನಗರವನ್ನು ಲಾಕ್ ಡೌನ್ ಮಾಡಬೇಕೆಂದು ಮನವಿ ಸಲ್ಲಿಸಲಾಯಿತು. ನಮ್ಮ ಮನವಿಗೆ ಪುರಸ್ಕರಿಸಿ ಇದೀಗ ಒಂದು ವಾರ ಲಾಕ್ ಡೌನ್ ಮಾಡಲು ಆದೇಶ ನೀಡಿರುತ್ತಾರೆ. ಮುಖ್ಯಮಂತ್ರಿಗಳ ಆದೇಶಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಬೆಂಗಳೂರು ನಗರ ಸಮಸ್ತ ನಾಗರಿಕರ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ಅಬ್ದುಲ್ ವಾಜಿದ್ ಹೇಳಿದ್ದಾರೆ.

BBMP opposition leader Abdul wajid welcomes CMs Bengaluru lockdown decision

ಇನ್ನು ಈ ಲಾಕ್‌ಡೌನ್‌ ಅವಧಿಯಲ್ಲಿ ''ಬಡವರು, ಮಧ್ಯಮವರ್ಗದವರು, ಕೂಲಿ ಕಾರ್ಮಿಕರು, ಆಟೋ ಚಾಲಕರು, ಕ್ಯಾಬ್ ಚಾಲಕರಿಗೆ ಉಚಿತ ಊಟದ ವ್ಯವಸ್ತೆ ಮಾಡಬೇಕು, ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು'' ಎಂದು ಆಗ್ರಹಿಸಿದ್ದಾರೆ.

English summary
BBMP opposition leader Abdul wajid welcomes CM yediyurappa bangalore lockdown decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X