ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಟ್ಟ ಮಾತು ಉಳಿಸಿಕೊಂಡ ಪಾಲಿಕೆ, ಸರ್ಕಾರ

|
Google Oneindia Kannada News

ಬೆಂಗಳೂರು, ನ. 21 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಸರ್ಕಾರ ಮಂಡೂರಿನ ಜನರಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದೆ. ಬೆಂಗಳೂರು ನಗರದ ಕಸವನ್ನು ಮಂಡೂರಿನಲ್ಲಿ ಸುರಿಯುವುದನ್ನು ಶುಕ್ರವಾರದಿಂದಲೇ ಸ್ಥಗಿತಗೊಳಿಸಲಾಗಿದ್ದು, ಮಂಡೂರು ಜನರ ಹೋರಾಟಕ್ಕೆ ಫಲ ದೊರಕಿದೆ.

ಡಿಸೆಂಬರ್‌ 1ರಿಂದ ಮಂಡೂರಿನಲ್ಲಿ ಕಸ ಸುರಿಯುವುದಿಲ್ಲ ಎಂದು ಮಂಡೂರಿನ ಜನರಿಗೆ ಸಿಎಂ ಸಿದ್ದರಾಮಯ್ಯ ಮತ್ತು ಬೃಹತ್ ಬೆಂಗಳೂರ ಮಹಾನಗರ ಪಾಲಿಕೆ ಮಾತು ಕೊಟ್ಟಿತ್ತು. ಅದಕ್ಕೂ ಅದಕ್ಕೂ ಮುನ್ನವೇ ಕಸ ಸುರಿಯುವುದು ಬಂದ್ ಮಾಡಲಾಗಿದ್ದು, ಕಸನವನ್ನು ಎಲ್ಲಿ ಹಾಕುತ್ತಾರೆ? ಎಂಬ ಪ್ರಶ್ನೆಗೆ ಉತ್ತರ ದೊರಕಿಲ್ಲ.

ಘನತ್ಯಾಜ್ಯ ನಿರ್ವಹಣೆಗಾಗಿ ನೇಮಕವಾಗಿದ್ದ ವಿಶೇಷ ಆಯುಕ್ತ ದರ್ಪಣ ಜೈನ್ ಅವರ ಆದೇಶದಂತೆ ಶುಕ್ರವಾರದಿಂದಲೇ ಮಂಡೂರಿಗೆ ಕಸ ಹೊತ್ತು ಹೋಗುವ ಲಾರಿಗಳನ್ನು ನಿಲ್ಲಿಸಲಾಗಿದೆ. ಹೊಸದಾಗಿ 5 ಕಡೆ ಜಾಗಗಳನ್ನು ಗುರುತಿಸಿದ್ದು, ಅಲ್ಲಿ ಕಸ ಸುರಿಯಲು ನಿರ್ಧರಿಸಲಾಗಿದ್ದು, ಆ ಸ್ಥಳಗಳು ಯಾವುದು ಎಂಬುದು ಬಹಿರಂಗಗೊಂಡಿಲ್ಲ. [1 ಕೆಜಿ ಕಸಕ್ಕೆ 2 ರೂ. ಕರೆ ಮಾಡಿ ಪಡೆಯಿರಿ]

ಆಗಸ್ಟ್ 3ರಂದು ಮಂಡೂರು ತ್ಯಾಜ್ಯ ಘಟಕಕ್ಕೆ ಭೇಟಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟಕಕ್ಕೆ ಡಿಸೆಂಬರ್ 1 ರಿಂದ ಯಾವುದೇ ಕಾರಣಕ್ಕೂ ಕಸ ಸುರಿಯಲು ಬಿಡುವುದಿಲ್ಲ. ಇದು ನಾನು ನಿಮಗೆ ಕೊಡುತ್ತಿರುವ ವಾಗ್ದಾನ. ಇಲ್ಲಿ ಬಿದ್ದಿರುವ ಕಸವನ್ನು ಮೂರು ವರ್ಷಗಳಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. [ಮಂಡೂರಿಗೆ ಸಿಎಂ ಭೇಟಿ]

Siddaramaiah

ನಂತರ ಬಿಬಿಎಂಪಿ ಮೇಯರ್, ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರ ಜೊತೆ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದ ಸಿಎಂ ಬೇರೆ ಸ್ಥಳ ಗುರುತಿಸಿ, ಡಿಸೆಂಬರ್‌ನಂತರ ಕಸ ಸುರಿಯಬಾರದು ಎಂದು ಖಡಕ್ ಸೂಚನೆ ನೀಡಿದ್ದರು. ಅದರಂತೆ ಈಗ ಕಸದ ಲಾರಿಗಳ ಸಾಗಣೆಯನ್ನು ಸ್ಥಗಿತಗೊಳಿಸಲಾಗಿದೆ.

ಮಾಗಡಿ ತಾಲೂಕಿನ ಗೊರೂರಿನಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಣಯಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಉದ್ದೇಶಿತ ಸ್ಥಳದಲ್ಲಿ ಸರ್ವೆ ನಡೆಸಲು ಬಂದ ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.

ಸದ್ಯ ಬಿಬಿಎಂಪಿ ಹಸಿ ಕಸದಿಂದ ಬಯೋಗ್ಯಾಸ್ ತಯಾರಿಸುವ ಚಿಕ್ಕ-ಚಿಕ್ಕ ಘಟಕಗಳನ್ನು ವಾರ್ಡ್‌ ಮಟ್ಟದಲ್ಲಿ ಸ್ಥಾಪಿಸಿದೆ. 198 ವಾರ್ಡ್‌ಗಳ ಪೈಕಿ 168ರಲ್ಲಿ ಅವುಗಳನ್ನು ಮಾಡಲಾಗಿದ್ದು, ಹಲವು ಟನ್ ಕಸ ಇಲ್ಲೇ ಕರಗುತ್ತಿದೆ. ಉಳಿದ ಕಸ ಸುರಿಯಲು ಹೊಸ ಸ್ಥಳ ಗುರುತಿಸಲಾಗಿದೆ. [ಮೇಯರ್ ಸಂದರ್ಶನ ಓದಿ]

ಅಂದಹಾಗೆ 2006 ರಿಂದ ಮಂಡೂರಿಗೆ ಕಸ ವಿಲೇವಾರಿ ಪ್ರಕ್ರಿಯೆ ಆರಂಭಗೊಂಡಿತ್ತು. ಬೆಂಗಳೂರು ನಗರದಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ 3500 ಟನ್ ಕಸದಲ್ಲಿ 2000 ಟನ್‌ಗೂ ಹೆಚ್ಚು ಕಸವನ್ನು ಮಂಡೂರಿಗೆ ಸಾಗಿಸಲಾಗುತ್ತಿತ್ತು.

English summary
As Chief Minister Siddaramaiah assurance to residents of Mandur The Bruhat Bengaluru Mahanagara Palike stopped send garbage to Mandur from November 21. BBMP identified five more place for garbage dumping.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X