ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೊಂದು ಸ್ಕೈ ವಾಕ್‌ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ

By Gururaj
|
Google Oneindia Kannada News

ಬೆಂಗಳೂರು, ಜೂನ್ 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಮತ್ತೊಂದು ಸ್ಕೈವಾಕ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. ನಗರದಲ್ಲಿ ಭಾರೀ ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ಇದು ನಿರ್ಮಾಣವಾಗುತ್ತಿದ್ದು, ಪಾದಚಾರಿಗಳಿಗೆ ಸಂತಸ ತಂದಿದೆ.

ರಾಜಾರಾಮ್ ಮೋಹನ್ ರಾಯ್ ರಸ್ತೆಯಲ್ಲಿ ಸ್ಕೈ ವಾಕ್ ನಿರ್ಮಾಣ ವಾಗುತ್ತಿದೆ. ಹಡ್ಸನ್ ಸರ್ಕಲ್, ಬಿಬಿಎಂಪಿ ಕಚೇರಿ ಬಳಿಯೇ ಸ್ಕೈ ವಾಕ್ ನಿರ್ಮಾಣ ಮಾಡಲು ಬಿಬಿಎಂಪಿ ಸಿದ್ಧತೆ ಆರಂಭಿಸಿದೆ.

ಬಿಬಿಎಂಪಿ ಸೂಚನಾ ಫಲಕಗಳಿನ್ನು ದೆಹಲಿ ಮಾದರಿಬಿಬಿಎಂಪಿ ಸೂಚನಾ ಫಲಕಗಳಿನ್ನು ದೆಹಲಿ ಮಾದರಿ

ಸಂಪಗಿರಾಮನಗರ-ಕಂಠೀರವ ಸ್ಟೇಡಿಯಂಗೆ ಈ ಸ್ಕೈವಾಕ್ ಸಂಪರ್ಕ ಕಲ್ಪಿಸಲಿದೆ. ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ.

bbmp

ನಾಲ್ಕು ಪಥದ ಈ ರಸ್ತೆಯಲ್ಲಿ ಒಂದು ಕಡೆ ಹಲವು ವಾಣಿಜ್ಯ ಸಂಕೀರ್ಣಗಳಿವೆ. ಮತ್ತೊಂದು ಕಡೆ ಕಂಠೀರವ ಸ್ಟೇಡಿಯಂ ಇದೆ. ಸಂಪಗಿರಾಮನಗರದಲ್ಲಿ ಹಲವು ಕ್ರೀಡಾಪಟುಗಳು ವಾಸವಾಗಿದ್ದು, ಅವರು ದಿನನಿತ್ಯ ತರಬೇತಿಗಾಗಿ ಸ್ಟೇಡಿಯಂಗೆ ಹೋಗಲು ಇದು ಸಹಾಯಕವಾಗಲಿದೆ.

ಸುಮನಹಳ್ಳಿ-ಕೊಟ್ಟಿಗೆಪಾಳ್ಯ ರಸ್ತೆಗೆ ನಾಲ್ಕು ಪಥ ಸೇರ್ಪಡೆಸುಮನಹಳ್ಳಿ-ಕೊಟ್ಟಿಗೆಪಾಳ್ಯ ರಸ್ತೆಗೆ ನಾಲ್ಕು ಪಥ ಸೇರ್ಪಡೆ

ಈ ಸ್ಕೈ ವಾಕ್‌ಅನ್ನು ಹಣ ಖರ್ಚು ಮಾಡಲು ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆಯ ಬಂದು ಕಡೆ ಯಾವುದೇ ಅಂಗಡಿಗಳು ಇಲ್ಲ. ಸ್ಟೇಡಿಯಂಗೆ ನಿತ್ಯ ಎಷ್ಟು ಜನರು ಹೋಗುತ್ತಾರೆ? ಅವರಿಗಾಗಿ ಸ್ಕೈ ವಾಕ್ ಬೇಕಾ? ಎಂದು ಕೆಲವು ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪಾದಚಾರಿಗಳ ಸುರಕ್ಷತೆಯೇ ನಮಗೆ ಮುಖ್ಯ. ಈ ರಸ್ತೆಯನ್ನು ದಾಟುವಾಗ ಜನರು ಕಷ್ಟ ಪಡುವುದನ್ನು ನಾವು ನೋಡಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದು, ಸ್ಕೈ ವಾಕ್ ನಿರ್ಮಾಣ ಅಗತ್ಯ ಎಂದು ಹೇಳಿದ್ದಾರೆ.

English summary
The Bruhat Bengaluru Mahanagara Palike (BBMP) new sky walk project will come up in Raja Ram Mohan Roy Road. The sky walk will connect Sampangiramnagar and Kanteerava Stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X