India
  • search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಕಾಯ್ದೆ ಸೋಮವಾರದಿಂದ ಜಾರಿ: ಕಾಯ್ದೆಯಲ್ಲಿ ಏನೇನಿದೆ?

|
Google Oneindia Kannada News

ಬೆಂಗಳೂರು, ಜನವರಿ 9: ಮೇಯರ್ ಮತ್ತು ಉಪ ಮೇಯರ್ ಅಧಿಕಾರಾವಧಿ ವಿಸ್ತರಿಸುವ, ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ 2020, ಜನವರಿ 11ರಿಂದ ಜಾರಿಯಾಗಲಿದೆ.

ಈ ಕಾಯ್ದೆಯು ಬಿಬಿಎಂಪಿಯ ಸ್ವರೂಪದಲ್ಲಿ ಅನೇಕ ಬದಲಾವಣೆಗಳನ್ನು ತರಲಿದೆ. ಈ ಮೂಲಕ ವಾರ್ಡ್‌ಗಳ ಸಂಖ್ಯೆಯು 198ರಿಂದ 243ಕ್ಕೆ ಏರಿಕೆಯಾಗಲಿವೆ. ಮೇಯರ್ ಮತ್ತು ಉಪ ಮೇಯರ್ ಅವರ ಅಧಿಕಾರಾವಧಿ 30 ತಿಂಗಳು ಇರಲಿದೆ. ಮೇಯರ್, ಮುಖ್ಯ ಆಯುಕ್ತ, ವಲಯ ಆಯುಕ್ತ, ವಲಯ ಸಮಿತಿಗಳು, ಸ್ಥಾಯಿ ಸಮಿತಿಗಳು, ವಾರ್ಡ್ ಸಮಿತಿಗಳು ಮತ್ತು ಪ್ರದೇಶ ಸಭಾಗಳು ಇರಲಿವೆ.

ವಿಧಾನಮಂಡಲದಲ್ಲಿ ಬಿಬಿಎಂಪಿ ಮಸೂದೆ ಚರ್ಚೆ ನಡೆದು ಅಂಗೀಕಾರಗೊಂಡಿತ್ತು. ಅದಕ್ಕೆ ಡಿ. 19ರಂದು ರಾಜ್ಯಪಾಲ ವಜೂಭಾಯಿ ವಾಲಾ ಒಪ್ಪಿಗೆ ನೀಡಿದ್ದರು. ಈಗ ಕಾಯ್ದೆಯ ಜಾರಿಗೆ ಅಧಿಸೂಚನೆ ಹೊರಡಿಸಲಾಗಿದೆ.

ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಂತದ ಅಧಿಕಾರಿಯು ಮುಖ್ಯ ಆಯುಕ್ತರಾಗಬಹುದು. ಮುಖ್ಯ ಆಯುಕ್ತರ ಕಾರ್ಯವೈಖರಿ ತೃಪ್ತಿದಾಯಕ ಎಂದು ಸರ್ಕಾರಕ್ಕೆ ಅನಿಸಿದರೆ ಎರಡು ವರ್ಷ ಅವರನ್ನು ಹುದ್ದೆಯಲ್ಲಿ ಮುಂದುವರಿಸಬೇಕು. ಆಡಳಿತ ಇನ್ನಷ್ಟು ಪರಿಣಾಮಕಾರಿಯಾಗಬೇಕು ಎನಿಸಿದರೆ ಅವರನ್ನು ವರ್ಗಾವಣೆ ಮಾಡಬಹುದು. ಆದರೆ ವರ್ಗಾವಣೆಗೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಪಾಲಿಕೆ ಜತೆ ಸಮಾಲೋಚನೆ ನಡೆಸಬೇಕು ಮತ್ತು ಅದಕ್ಕೆ ಕಾರಣಗಳನ್ನು ಸಹ ನಮೂದಿಸಬೇಕು.

ವಲಯ ಆಯುಕ್ತರು ಆಯಾ ವಲಯದ ಆಡಳಿತ ನಿರ್ವಹಿಸುವ ನೋಡಲ್ ಅಧಿಕಾರಿ ಆಗಿರುತ್ತಾರೆ. ಮೇಯರ್ ಹಾಗೂ ಆಯುಕ್ತರ ನಿರ್ದೇಶನದಂತೆ ವಾರ್ಡ್ ಸಮಿತಿ, ಪ್ರದೇಶ ಸಭಾದ ಮೇಲ್ವಿಚಾರಣೆ, ನಿರ್ದೇಶನ ಮತ್ತು ಸಮನ್ವಯದ ಕಾರ್ಯ ನಿರ್ವಹಿಸುತ್ತಾರೆ.

ವಲಯ ಸಮಿತಿಯು ಬಿಬಿಎಂಪಿ ಬಜೆಟ್‌ನಲ್ಲಿ ನಿರ್ದಿಷ್ಟ ವಲಯಕ್ಕೆ ಮೀಸಲಾದ ಅನುದಾನವನ್ನು ವಾರ್ಡ್ ಸಮಿತಿಗಳಿಗೆ ಹಂಚಿಕೆ ಮಾಡುತ್ತದೆ. ಅನುದಾನಗಳ ಹಂಚಿಕೆ ಸರ್ಕಾರದ ಮಾನದಂಡಗಳಿಗೆ ಅನುಗುಣವಾಗಿರಬೇಕು.

English summary
BBMP new act 2020 will be implemented from January 11. Here is some details of new rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X