ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

23 ಸಾವಿರ ಹೊಸ ಕಟ್ಟಡಗಳ ತೆರಿಗೆ ಬಾಕಿ: ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು

By Nayana
|
Google Oneindia Kannada News

ಬೆಂಗಳೂರು, ಜು.14: ಹೊಸ ಕಟ್ಟಡಗಳ ತೆರಿಗೆ ಬಾಕಿ ವಸೂಲು ಮಾಡುವಲ್ಲಿ ಬಿಬಿಎಂಪಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಸಾವಿರಾಋಉ ಕಟ್ಟಡಗಳ ನಿರ್ಮಾಣಕ್ಕೆ ಸ್ವಾಧೀನಾನುಭವ ಪ್ರಮಾಣಪತ್ರ ನೀಡಲಾಗುತ್ತದೆ.

ಒಸಿ ನೀಡಿದ ನಂತರ ಆ ಕಟ್ಟಡಗಳ ದಾಖಲೆ ಪರಿಶೀಲಿಸಿ, ತೆರಿಗೆ ನಿಗದಿ ಮಾಡಬೇಕಿದೆ. 2017-18ನೇ ಸಾಲಿನಲ್ಲಿ 160 ಕಟ್ಟಡಗಳಿಗೆ ಒಸಿ ನೀಡಲಾಗಿದ್ದು, ಈವರೆಗೆ 4 ಕಟ್ಟಡಗಳಿಗೆ ಮಾತ್ರ ತೆರಿಗೆ ನಿಗದಿ ಮಾಡಲಾಗಿದೆ. ಉಳಿದ ಕಟ್ಟಗಳ ಕಡೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎನ್ನುವ ದೂರು ಕೇಳಿಬಂದಿದೆ.

ಪೌರಕಾರ್ಮಿಕರ ವೇತನ ವಿಳಂಬ, ಹಿಂದಿರುವ ಆ ಐದು ಕಾರಣಗಳುಪೌರಕಾರ್ಮಿಕರ ವೇತನ ವಿಳಂಬ, ಹಿಂದಿರುವ ಆ ಐದು ಕಾರಣಗಳು

ಬಿಬಿಎಂಪಿಯಿಂದ 2017-18ರಲ್ಲಿ ಒಟ್ಟು 160 ಕಟ್ಟಡಗಳ 23232 ಆಸ್ತಿಗಳಿಗೆ ಒಸಿ ನೀಡಲಾಗಿದೆ. ಆದರೆ, 8 ವಲಯಗಳಲ್ಲಿ ಯಲಹಂಕ ವಲಯದಲ್ಲಿನ 18 ಕಟ್ಟಡಗಳಲ್ಲಿ 4 ಕಟ್ಟಡಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕಟ್ಟಡಗಳ ದಾಖಲೆ ಪರಿಶೀಲಿಸಿಲ್ಲ. ಅದರ ಜತೆಗೆ ತೆರಿಗೆಯನ್ನು ನಿಗದಿ ಮಾಡಿಲ್ಲ.

BBMP negligence causes over 23k new buildings tax due

ಆಸ್ತಿಗಳಿಗೆ ತೆರಿಗೆ ನಿಗದಿ ಮಾಡದ ಕುರಿತು ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಪ್ರಮುಖವಾಗಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿನ ಹೊರಮಾವು ಮತ್ತು ಕೊತ್ತನೂರಿನಲ್ಲಿನ 3 ಅಪಾರ್ಟ್‌ಮೆಂಟ್‌ಗಳ 623 ಫ್ಲ್ಯಾಟ್‌ಗಳಿಗೆ ತೆರಿಗೆ ನಿಗದಿ ಮಾಡದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಬೆಂಗಳೂರಿನ ಎಲ್ಲ ವಲಯಗಳಲ್ಲೂ ಅಧಿಕಾರಿಗಳು ತೆರಿಗೆ ನಿಗದಿ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

English summary
After ensuring Clearance Certificate (CC) from authorities over 23,000 new buildings still have pay tax and BBMP officials have not take any action on these properties owners has caused loss to the civic body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X