India
  • search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಬಿಬಿಎಂಪಿ ಮುಖ್ಯ ಆಯುಕ್ತರ ನಡೆ ಪೂರ್ವ ವಲಯದ ಕಡೆ'- ದೂರುಗಳೇನು..?

|
Google Oneindia Kannada News

ಬೆಂಗಳೂರು, ಜುಲೈ05: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 08 ವಲಯಗಳ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ನೀಡಲು ಮುಖ್ಯ ಆಯುಕ್ತರ ಕಛೇರಿಗೆ ಆಗಮಿಸುತ್ತಿರುವುದು ಗಮನಿಸಲಾಗಿರುತ್ತದೆ. ಸಾರ್ವಜನಿಕರಿಗೆ ಅನುಕೂಲಕರವಾಗಿರಲೆಂದು ಹಾಗೂ ವಲಯ ಮಟ್ಟದಲ್ಲಿ ನಡೆಯುತ್ತಿರುವ ಕಾರ್ಯಚಟುವಟಿಕೆಗಳನ್ನು ನಿಯಮಿತವಾಗಿ ಪರಿಶೀಲಿಸುವ ಸಲುವಾಗಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಪೂರ್ವ ವಲಯ ಕಛೇರಿಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

ಸಾರ್ವಜನಿಕರಿಂದ ಬಂದ ಅಹವಾಲುಗಳು:

1. ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗಲಿದ್ದು, ಅದನ್ನು ತೆರವುಗೊಳಿಸಲು ಮನವಿ. ಸಂಬಂಧಪಟ್ಟ ವಾರ್ಡ್ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲು ಮುಖ್ಯ ಆಯುಕ್ತರು ಸೂಚನೆ ನೀಡಿದರು.

2. ಹೊಯ್ಸಳ ನಗರ ವಾರ್ಡ್ 80ರಲ್ಲಿ ನಡೆಯುವ ವಾರ್ಡ್ ಸಮಿತಿ ಸಭೆಯ ನಡಾವಳಿಗಳನ್ನು ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಲು ಮನವಿ. ವಾರ್ಡ್ ಸಮಿತಿಯ ನೋಡಲ್ ಅಧಿಕಾರಿಗಳಿ ಸಭೆ ನಡೆದ ಬಳಿಕ ಕಡ್ಡಾಯವಾಗಿ ವೆಬ್ ಸೈಟ್ ನಲ್ಲಿ ನಡಾವಳಿ ಹಾಕಲು ಅಧಿಕಾರಿಗಳಿಗೆ ಸೂಚಿಸಿದರು.

3. ಜಲಮಂಡಳಿಯಿಂದ ತೆಗೆದುಕೊಂಡಿದ್ದ ಕೆಲಸ ಪೂರ್ಣಗೊಂಡಿದ್ದರೂ ರಸ್ತೆ ದುರಸ್ತಿ ಕಾರ್ಯ ಮಾಡಿಲ್ಲ. ಕೂಡಲೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ.

4. ಬಾಣಸವಾಡಿ ವಾರ್ಡ್ ಸಂ. 27 ಒಎಂಬಿಆರ್ ಲೇಔಟ್ 4 ಹಾಗೂ 6ನೇ ಕ್ರಾಸ್ ನಲ್ಲಿ ಜಲಮಂಡಳಿಯಿಂದ ರಸ್ತೆ ಕತ್ತರಿಸಿ ಹಾಳಾಗಿದ್ದು, ಅದನ್ನು ಕೂಡಲೆ ಸರಿಪಡಿಸಲು ಮನವಿ. ಕೂಡಲೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ.

5. ಖಾಲಿ ಸ್ಥಳಗಳಲ್ಲಿ ಕಸ ಹಾಕುವುದನ್ನು ತಪ್ಪಿಸಲು ಮನವಿ. ಈ ಪೈಕಿ ಸಂಬಂಧಪಟ್ಟ ಮಾಲೀಕರಿಂದ ಕಸ ತೆರವುಗೊಳಿಸಲು ಸೂಚನೆ ನೀಡಿ. ಕಸ ತೆರವುಗೊಳಿಸಿಲ್ಲವಾದರೆ ಪಾಲಿಕೆಯಿಂದಲೇ ತೆರವುಗೊಳಿಸಿ ಮಾಲೀಕರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

6. ಸಗಯಾರ ಪುರಂ ವಾರ್ಡ್ 60ರಲ್ಲಿ ಬೀದಿ ದೀಪ ಅಳವಡಿಸಲು ಮನವಿ. ವಿದ್ಯುತ್ ಅಭಿಯಂತರರು ಎಲ್ಲೆಲ್ಲಿ ಬೀದಿ ದೀಪಗಳಿಲ್ಲ ಪರಿಶೀಲಿಸಿ ಕೂಡಲೆ ದೀಪಗಳನ್ನು ಅಳವಡಿಸಲು ಸೂಚಿಸಿದರು.

7. ಸಗಯಾರ ಪುರಂ ವಾರ್ಡ್ ನಲ್ಲಿ ಪಾದಚಾರಿ ಮಾರ್ಗ ಆಳಾಗಿದ್ದು, ಸರಿಪಡಿಸಲು ಮನವಿ. ಎಲ್ಲೆಲ್ಲಿ ಪಾದಚಾರಿ ಮಾರ್ಗ ದುರಸ್ತಿಯಾಗಿದೆ ಎಂಬುದನ್ನು ಪರಿಶೀಲಿಸಿ ಕೂಡಲೆ ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

8. ರಿಚರ್ಡ್ಸ್ ಉದ್ಯಾನ ನಿರ್ವಹಣೆ ಮಾಡಲು ಮನವಿ. ಉದ್ಯಾನಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಪಾರ್ಕ್ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರನ ದೂರವಾಣಿ ಸಂಖ್ಯೆಯ ನಾಮಫಲಕ ಅಳವಡಿಸಬೇಕು ಹಾಗೂ ಉದ್ಯಾನದಲ್ಲಿರುವ ಅಳವಡಿಸಿರುವ ಶೆಡ್ಡರ್ ಹಾಳಾಗಿದ್ದು, ಅದನ್ನು ದುರಸ್ತಿಪಡಿಸಲು ಸೂಚಿಸಿದರು.

9. ನ್ಯೂ ತಿಪ್ಪಸಂದ್ರ ವಾರ್ಡ್ ಹೆಚ್.ಎ.ಎಲ್ 3ನೇ ಸ್ಟೇಜ್, ಇಂದಿರಾನಗರ 80 ಅಡಿ ರಸ್ತೆಯ ರಾಜಕಾಲುವೆ ಹಾಗೂ ರಸ್ತೆ ಬದಿಯ ಚರಂಡಿಗಳಲ್ಲ್ಲಿ ಹೂಳೆತ್ತಲು ಮನವಿ. ಕೂಡಲೆ ಹೂಳೆತ್ತುವ ಕಾರ್ಯ ಪ್ರಾರಂಭಿಸಲು ರಾಜಕಾಳುವೆ ವಿಭಾಗ ಅಭಿಯಂತರರಿಗೆ ಸೂಚಿಸಿದರು.

BBMP Mukya Ayukthara Nade Valayada Kade in East zone

10. ಹೆ.ಚ್.ಎ.ಎಲ್ 4ನೇ ಕ್ರಾಸ್ ನಲ್ಲಿ ಮಳೆಯಾದ ವೇಳೆ ಸಿವೇಜ್ ನೀರು ರಸ್ತೆ ಮೇಲೆ ಬರುತ್ತಿದ್ದು, ಅದನ್ನು ನಿಲ್ಲಿಸಲು ಮನವಿ. ಸಂಬಂಧಪಟ್ಟ ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೀವೇಜ್ ಲೈನ್ ಗೆ ಸಂಪರ್ಕವಿಲ್ಲದ ಲೈನ್‌ಗಳನ್ನು ಸೀವೇಜ್ ಲೈನ್ ಗೆ ಹೋಗುವಂತೆ ಕ್ರಮ ಕೈಗೊಳ್ಳಬೇಕು.

11. ಜೀವನ್ ಭೀಮಾ ನಗರ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗ ದುರಸ್ತಿಯಾಗಿದ್ದು, ಅದನ್ನು ಸರಿಪಡಿಸಲು ಮನವಿ. ಸಂಬಂಧಪಟ್ಟ ಗುತ್ತಿಗೆದಾರರನ್ನು ಕರೆಸಿ ಕೂಡಲೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಕಾರ್ಯಪಾಲಕ ಅಭಿಯಂತರಿಗೆ ಮುಖ್ಯ ಆಯುಕ್ತರು ಸೂಚನೆ ನೀಡಿದರು.

12. ದಿನಾಂಕ: 08-06-2022 ಮಳೆಯಾದ ವೇಳೆ ಮರದ ಕೆಳಗೆ ನಿಂತಿರುವಾಗ ಕೊಂಬೆ ಬಿದ್ದು, ರಾಕೇಶ್(13 ವರ್ಷ) ಮೃತಪಟ್ಟಿದ್ದು, ಪರಿಹಾರ ನೀಡಲು ಪೋಷಕರು ಮನವಿ. ಅವರಿಗೆ ವಲಯ ಆಯುಕ್ತರಿಂದ ನಾಳೆ 5 ಲಕ್ಷ ರೂ. ಪರಿಹಾರ ನೀಡಲು ಸೂಚನೆ.

13. ಕಾಕ್ಸ್ ಟೌನ್ ಹಾಗೂ ಫ್ರೇಜರ್ ಟೌನ್ ನ ಸುಂದರ ಮೂರ್ತಿ ರಸ್ತೆ ಬದಿಯುದಕ್ಕೂ ಕಸ ಹಾಕುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಜೊತೆಗೆ ವಿದ್ಯುತ್ ದೀಪಗಳಿಲ್ಲದೆ ಸಮಸ್ಯೆ ಆಗುತ್ತಿದ್ದು, ಅದನ್ನು ಸರಿಪಡಿಸಲು ಮನವಿ. ರಸ್ತೆ ಬದಿ ಕಸ ಹಾಕುವುದನ್ನು ತಡೆಯಲು ಮಾರ್ಷಲ್ ಗಳು ಮೇಲ್ವಿಚಾರಣೆ ಮಾಡಿ ರಸ್ತೆ ಬದಿ ಕಸ ಆಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಹಾಗೂ ತ್ವರಿತವಾಗಿ ಬೀದಿ ದೀಪಗಳನ್ನು ಅಳವಡಿಸಲು ಸೂಚನೆ.

14. ಸುಂದರ ಮೂರ್ತಿ ರಸ್ತೆ, ಅಸಾಯ ರಸ್ತೆ ಹಾಗೂ ಎಂ.ಎಂ ರಸ್ತೆಯಲ್ಲಿ ಹಸುಗಳು ರಸ್ತೆಯ ಮೇಲೆಯೇ ಇರಲಿದ್ದು, ಅದನ್ನು ತಡೆಯಲು ಮನವಿ. ಸಂಬಂಧಪಟ್ಟವರಿಗೆ ನೋಟಿಸ್ ಕೊಟ್ಟು ಹಸುಗಳನ್ನು ರಸ್ತೆಗೆ ಬಿಡದಿರಲು ಸೂಚನೆ ಕೊಡಿ.

15. ಹೆಬ್ಬಾಳ ವಾರ್ಡ್ ಸಂ. 21 ಆನಂದ ನಗರದಲ್ಲಿರುವ ಉದ್ಯಾನದಲ್ಲಿ ಮಕ್ಕಳಿಗೆ ಅಳವಡಿಸಿರುವ ಆಟಿಕೆಗಳು ಹಾಗೂ ಕೂರಲು ಹಾಕಿರುವ ಹಾಸನಗಳು ಹಾಳಾಗಿದ್ದು, ಅದನ್ನು ದುರಸ್ತಿ ಪಡಿಸಲು ಮನವಿ. ಈ ಸಂಬಂಧ ಯೋಜನಾ ವಿಭಾಗದ ಕಾರ್ಯಪಾಲಕ ಅಭಿಯಂತರರು ಸ್ಥಳ ಪರಿಶೀಲಿಸಿ ಕೂಡಲೆ ದುರಸ್ತಿ ಕಾರ್ಯ ಮಾಡಿ ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಚನೆ ನೀಡಿದರು.

16. ಹಲಸೂರು ವಾರ್ಡ್ ಸಂ. 90 ಗುಪ್ತ ಲೇಔಟ್ 6ನೇ ಕ್ರಾಸ್ ರಸ್ತೆ ಬದಿಯ ಖಾಲಿ ಜಾಗದಲ್ಲಿ ಕಸ ಸುರಿಯುತ್ತಿದ್ದು, ಅದನ್ನು ತೆರವುಗೊಳಿಸಲು ಮನವಿ. ಈ ಸಂಬಂಧ ಘನತ್ಯಾಜ್ಯ ವಿಭಾಗಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸಮಸ್ಯೆಯನ್ನು ಬಗೆಹರಿಸಿ ಸ್ಥಳದಲ್ಲಿ ಕಸ ಬೀಳದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

17. ಅಪಾಯ ಸ್ಥಿತಿಯಲ್ಲಿರುವ ಒಣಗಿರುವ ಮರ, ರೆಂಬೆ/ಕೊಂಬೆಗಳನ್ನು ತೆರವುಗೊಳಿಸಲು ಮನವಿ. ಅರಣ್ಯ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಗಳು ಒಣಗಿರುವ ಮರ, ರೆಂಬೆ/ಕೊಂಬೆಗಳನ್ನು ಗುರುತಿಸಿ ತೆರವುಗೊಳಿಸಲು ಸೂಚಿಸಿದರು.

18. ಇಂದಿರಾನಗರ ಇ.ಎಸ್.ಐ ಆಸ್ಪತ್ರೆ ಬಳಿ 11 ಹಾಗೂ 12ನೇ ಕ್ರಾಸ್ ನಲ್ಲಿ ತಿರುವ ಡ್ರೈನ್ ಮಾಡಿಕೊಡಲು ಮನವಿ. ಈ ಪೈಕಿ ಸ್ಥಳ ಪರಿಶೀಲಿಸಿ ಡ್ರೈ‌ನ್ ನಿರ್ಮಿಸಲು ಸೂಚನೆ ನೀಡಿದರು.

19. ಹೆಚ್.ಬಿ.ಆರ್ ಬಡಾವಣೆಯಲ್ಲಿ ಸೈಡ್ ಡ್ರೈನ್ ನಲ್ಲಿ ಹೂಳೆತ್ತಲು ಹಾಗೂ ಬೀದಿ ದೀಪ ನಿರ್ವಹಣೆ ಮಾಡಲು ಮನವಿ. ಸೈಡ್ ಡ್ರೈನ್ ಗಳಲ್ಲಿ ಹೂಳೆತ್ತುವ ಹಾಗೂ ಬೀದಿ ದೀಪ ಅಳವಡಿಸುವ ಕೆಲಸ ತ್ವರಿತವಾಗಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

20. ಹೆ.ಬಿ.ಆರ್ ಲೇಔಟ್ 2ನೇ ಬ್ಲಾಕ್ ಬಿಡಿಎ ಕಾಂಪ್ಲೆಕ್ಸ್ ನಿಂದ ಇಂದಿರಾ ಕ್ಯಾಂಟೀನ್ ವರೆಗಿನ ರಸ್ತೆ ಬದಿ ಕುರಿಗಳು ಮಾರಾಟ ಮಾಡುವುದನ್ನು ನಿಲ್ಲಿಸಲು ಮನವಿ. ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಿಂದ ಸುತ್ತೋಲೆ ಹೊರಡಿಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ.

21. ಲಿಂಗರಾಜಪುರ ಡಾ. ರಾಜ್ ಕುಮಾರ್ ಕೆಳಸೇತುವೆಯಲ್ಲಿ ವಾಟರ್ ಲಾಗಿಂಗ್ ಆಗದಂತೆ ಕ್ರಮ ಕೈಗೊಳ್ಳಲು ಮನವಿ. ಕಾರ್ಯಫಾಲಕ ಅಭಿಯಂತರರ ಸ್ಥಳಕ್ಕೆ ಭೇಟಿ ನೀಡಿ ಮಳೆ ನೀರು ನಿಲ್ಲದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ.

22. ಜೀವನ್ ಭೀಮಾನಗರ ವಾಡ್ ಆನಂದಪುರ ಕೊಳಗೇರಿ ಪ್ರದೇಶದಲ್ಲಿ ಮನೆಗೆ ಮಳೆ ನೀರು ನುಗ್ಗಿತ್ತು. ಆದರೂ ನಮಗೆ ಯಾವುದೇ ಪರಿಹಾರ ಸಿಕ್ಕಿರುವುದಿಲ್ಲ. ಈ ಸಂಬಂಧ ಸ್ಥಳ ಪರಿಶೀಲಿಸಿ ಪರಿಶೀಲಿಸಿ ಮನೆಗೆ ಮಳೆ ನೀರು ನುಗ್ಗಿರುವುದು ಸಾಭೀತಾದರೆ ನಿಯಮಾನುಸಾರ ಪರಿಹಾರ ನೀಡಿ ಸಂಬಂಧಪಟ್ಟ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ವಲಯ ಜಂಟಿ ಆಯುಕ್ತರಿಗೆ ಸೂಚಿಸಿದರು.

23. ಜೀವನ್ ಭೀಮಾ ನಗರ ವಾರ್ಡ್ ಹೆ.ಎಚ್.ಎಲ್ 2ನೇ ಹಂತ 13ನೇ ಮುಖ್ಯ ರಸ್ತೆಯಲ್ಲಿ ಬೆಸ್ಕಾಂ ಇಲಾಖೆಯು ನೆಲದಡಿ ವಿದ್ಯುತ್ ತಂತಿ ಅಳವಡಿಸಲು ಹೆಗದು ಹಾಳಾಗಿದೆ. ಇದನ್ನು ಕೂಡಲೆ ಸರಿಪಡಿಸಲು ಬೆಸ್ಕಾಂ ಅಧಿಕಾರಿಗೆ ಸೂಚನೆ

24. ಇಂದಿರಾ ನಗರ 80 ಅಡಿ ರಸ್ತೆ ಪಾದಚಾರಿ ಮಾರ್ಗ ಹಾಳಾಗಿದ್ದು, ಅದನ್ನು ಸರಿಪಡಿಸಲು ಮನವಿ. ಕೂಡಲೆ ಪಾದಚಾರಿ ಮಾರ್ಗಗಳನ್ನು ಸರಿಪಡಿಸಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸಮಸ್ಯೆ ಆಗದಂತೆ ಮಾಡಲು ಸೂಚಿಸಿದರು.

25. ಬಾಣಸವಾಡಿ ವಾರ್ಡ್ ನಲ್ಲಿರುವ ಕೆರೆಯ ಬಫರ್ ಜೋನ್‌ನಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣವಾಗಿದ್ದು, ಅದನ್ನು ತೆರವುಗೊಳಿಸಲು ಮನವಿ. ಈ ಸಂಬಂಧ ಕೆರೆ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು.

ಪೂರ್ವ ವಲಯ ವ್ಯಾಪ್ತಿಯಲ್ಲಿ 'ವಲಯದ ಕಡೆ ಮುಖ್ಯ ಆಯುಕ್ತರ ನಡೆ'ಯ ದಿನದಂದು ಆಲಿಸುವ ಸಾರ್ವಜನಿಕರ ಅಹವಾಲುಗಳಲ್ಲಿ ತ್ವರಿತವಾಗಿ ಬಗೆಹರಿಯುವಂತಹ ಸಮಸ್ಯೆಗಳನ್ನು ಕೂಡಲೆ ಬಗೆಹರಿಸಬೇಕು. ಇದಲ್ಲದೆ ವಲಯ ಆಯುಕ್ತರು ಹಾಗೂ ವಲಯ ಜಂಟಿ ಆಯುಕ್ತರು ಕೂಡಾ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸೂಚನೆ ನೀಡಿದರು.

ಈ ವೇಳೆ ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ವಲಯ ಜಂಟಿ ಆಯುಕ್ತರಾದ ಶಿಲ್ಪಾ, ಮುಖ್ಯ ಅಭಿಯಂತರರಾದ ಸುಗುಣಾ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Chief Commissioner Tushar GiriNath received complaints from the public at the East Zonal Office for the convenience of the public and to regularly review the ongoing activities at the zonal level, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X