ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮತ್ತೊಂದು ವಾರ ಲಾಕ್‌ಡೌನ್ ಮುಂದುವರಿಕೆ?

|
Google Oneindia Kannada News

ಬೆಂಗಳೂರು, ಜುಲೈ 17: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನೊಂದು ವಾರಗಳ ಕಾಲ ಲಾಕ್‌ಡೌನ್‌ ಮುಂದುವರಿಯುವ ಸುಳಿವು ಸಿಕ್ಕಿದೆ. ನಗರದಲ್ಲಿ ಕೊರೊನಾ ವೈರಸ್ ಚೈನ್ ಬ್ರೇಕ್ ಮಾಡಲು ಒಂದು ವಾರ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.

Recommended Video

B Srimalu ಆರೋಗ್ಯ ಸಚಿವರಾಗಿ ಹೀಗೆ ಹೇಳಬಾರದಿತ್ತಾ ? | Oneindia Kannada

ಆದರೆ, ಈ ಅವಧಿಯನ್ನು ಮತ್ತೊಂದು ವಾರಕ್ಕೆ ಮುಂದುವರಿಸಬೇಕು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಮತ್ತು ತಂಡ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ ಎಂಬ ವಿಚಾರ ತಿಳಿದು ಬಂದಿದೆ.

ಈ ಕುರಿತು ಎಎನ್ಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ಗೌತಮ್ ಕುಮಾರ್ ''ಕೊವಿಡ್ ವಿರುದ್ಧ ಹೋರಾಡಲು ನಮಗೆ ಇನ್ನು ಸ್ವಲ್ಪ ಸಮಯ ಸಿಕ್ಕರೆ ಸೂಕ್ತ, ಹಾಗಾಗಿ ಇನ್ನೊಂದು ವಾರಗಳ ಲಾಕ್‌ಡೌನ್ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ'' ಎಂದಿದ್ದಾರೆ.

ಲಾಕ್ ಡೌನ್: ಬೆಂಗಳೂರಿಗರಿಗೆ ಕಾದಿದೆಯಾ ಶಾಕಿಂಗ್ ನ್ಯೂಸ್!?ಲಾಕ್ ಡೌನ್: ಬೆಂಗಳೂರಿಗರಿಗೆ ಕಾದಿದೆಯಾ ಶಾಕಿಂಗ್ ನ್ಯೂಸ್!?

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಕೇಸ್‌ಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 2 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆಯಾಗಿತ್ತು. ಮುಂದಿನ ದಿನದಲ್ಲಿ ಇದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

BBMP Mayor request to extend lockdown for one more week

ಈ ಹಿನ್ನೆಲೆ ಇಂದು ಸಿಎಂ ಯಡಿಯೂರಪ್ಪ ಅವರ ಜೊತೆ ಬೆಂಗಳೂರು ಎಂಟು ವಲಯಗಳ ಉಸ್ತುವಾರಿ ಸಚಿವರು, ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮುಂದಿನ ಹಂತದ ಯೋಜನೆಗಳ ಬಗ್ಗೆ ನಿರ್ಧಾರವಾಗಲಿದೆ. ಲಾಕ್‌ಡೌನ್ ವಿಸ್ತರಣೆ ಕುರಿತು ಸಹ ಈ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ಅಂದ್ಹಾಗೆ, ಜುಲೈ 14ರ ರಾತ್ರಿ 8 ಗಂಟೆಯಿಂದ ಜಾರಿಯಾಗಿರುವ ಒಂದು ವಾರಗಳ ಲಾಕ್‌ಡೌನ್ ಜುಲೈ 22ರ ಬೆಳಗ್ಗೆ 6 ಗಂಟೆಯ ಮುಕ್ತಾಯವಾಗಲಿದೆ.

English summary
BBMP Mayor Goutham Kumar and his team has requested to state govt to extend lockdown in bengaluru for one more week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X