ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

100 ದಿನಗಳ ಸಾಧನೆ ಶೂನ್ಯ ಎಂದಿದ್ದಕ್ಕೆ ಬಿಬಿಎಂಪಿ ಮೇಯರ್ ಕಿಡಿ

|
Google Oneindia Kannada News

ಬೆಂಗಳೂರು, ಜನವರಿ 9: 'ನನ್ನ 100 ದಿನದ ಕೆಲಸಕ್ಕೆ ಬೆಂಗಳೂರು ಜನ ಮಾರ್ಕ್ಸ ಕೊಡುತ್ತಾರೆ. 100 ದಿನದಲ್ಲಿ ನನ್ನ ಪ್ರೊಗ್ರೆಸ್ ಕಾರ್ಡ್ ಸಂಪೂರ್ಣ ಅಳತೆ ಮಾಡುವುದಕ್ಕೆ ಆಗುವುದಿಲ್ಲ. ಅಬ್ದುಲ್ ವಾಜೀದ್ ಬಿಬಿಎಂಪಿ ವಿರೋಧ ಪಕ್ಷದ ನಾಯಕರಾಗಿ ಆರೋಪ ಮಾಡಬೇಕೆಂದು ಮಾಡುತ್ತಿದ್ದಾರಷ್ಟೇ. ಅವರ ಆರೋಪದಲ್ಲಿ ಯಾವುದೇ ಹುರಳಿಲ್ಲ' ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಎಂ ಗೌತಮ್ ಕುಮಾರ್ ಹೇಳಿದರು.

ಅಧಿಕಾರ ವಹಿಸಿಕೊಂಡು 100 ದಿನ ಪೂರೈಸಿದರೂ ಬಿಬಿಎಂಪಿ ಮೇಯರ್ ಸಾಧನೆ ಶೂನ್ಯ ಎಂದು ಆರೋಪಿಸಿದ್ದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಅವರಿಗೆ ಮೇಯರ್ ತಿರುಗೇಟು ನೀಡಿದರು.

ಅಧಿಕಾರ ನಡೆಸ್ತಿರೋದು ನೀವಾ ಅಥವಾ ಆಯುಕ್ತರಾ?: ಮೇಯರ್‌ಗೆ ಪ್ರಶ್ನೆಅಧಿಕಾರ ನಡೆಸ್ತಿರೋದು ನೀವಾ ಅಥವಾ ಆಯುಕ್ತರಾ?: ಮೇಯರ್‌ಗೆ ಪ್ರಶ್ನೆ

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮೇಯರ್, 'ಬೆಂಗಳೂರು ಅಭಿವೃದ್ಧಿ ಎಂಬುದು ಒಂದೇ ದಿನದಲ್ಲಿ ಆಗುವಂತದ್ದು ಅಲ್ಲ, ಎಲ್ಲರೂ ಸೇರಿ ಮಾಡುವಂತದ್ದು. ನಾವು ಅಂದುಕೊಂಡಿದ್ದ ಕೆಲಸವನ್ನು ಮಾಡುತ್ತಿದ್ದೇವೆ. ವಿರೋಧ ಪಕ್ಷದ ನಾಯಕರಿಗೆ ತಮ್ಮದೇ ಸಂಸ್ಥೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದೇನೆ ಎಂಬ ಕನಿಷ್ಠ ಪ್ರಜ್ಞೆ ಇಲ್ಲದಿರುವುದು ಆಶ್ಚರ್ಯ ಮೂಡಿಸುತ್ತದೆ. ಬೆಂಗಳೂರು ಜನ ನಮ್ಮನ್ನು ಗಮನಿಸುತ್ತಿದ್ದಾರೆ. ಟೀಕೆ ಮಾಡುತ್ತಾ ಕಾಲ ಕಳೆಯುವುದರಲ್ಲಿ ಅರ್ಥ ಇಲ್ಲ. ಪಾಲಿಕೆ ಆಯುಕ್ತರು, ನಾವೆಲ್ಲ ಸೇರಿ ಒಂದು ಟೀಮ್ ಆಗಿ ಕೆಲಸ ಮಾಡುತ್ತಿದ್ದೇವೆ' ಎಂದು ಸ್ಪಷ್ಟನೆ ನೀಡಿದರು.

BBMP Mayor Opposes Opposition Leader Allegation

ಬಿಬಿಎಂಪಿ ಮೇಯರ್ 100 ದಿನ ಪೂರೈಸಿದ್ದರ ಹಿನ್ನೆಲೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅಬ್ದುಲ್ ವಾಜೀದ್ ಅವರು, 'ಮೇಯರ್ ಗೌತಮ್ ಕುಮಾರ್ ಅಧಿಕಾರ ವಹಿಸಿಕೊಂಡು ನೂರು ದಿನಗಳು ಕಳೆದಿವೆ. ಆದರೆ ಸಾಧನೆ ಮಾತ್ರ ಶೂನ್ಯ' ಎಂದು ಆರೋಪಿಸಿದ್ದರು.

English summary
BBMP Mayor M Goutham Kumar Opposes BBMP Opposition Leader Allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X