ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಡೂರಿಗೆ ಕಸ ಸಾಗಣೆ ಬಂದ್ ಮಾಡುತ್ತೇವೆ : ಮೇಯರ್

|
Google Oneindia Kannada News

ಡಿಸೆಂಬರ್‌ ನಂತರ ಮಂಡೂರಿಗೆ ಕಸ ಸಾಗಣೆ ಬಂದ್, ಮುಂದೇನು?
ಮಂಡೂರಿಗೆ ಡಿಸೆಂಬರ್‌ ನಂತರ ಕಸ ಸಾಗಣೆ ಮಾಡಬಾರದು ಎಂದು ಬಿಬಿಎಂಪಿ ಮತ್ತು ಸರ್ಕಾರ ತೀರ್ಮಾನ ತೆಗೆದುಕೊಂಡಿವೆ. ಮಂಡೂರು ಹೊರತುಪಡಿಸಿ ಬೇರೆ ಕಡೆ ಕಸವನ್ನು ಹಾಕಲು ಪಾಲಿಕೆ ಜಾಗವನ್ನು ಗುರುತಿಸಿದೆ. ಹಸಿ ಕಸದಿಂದ ಬಯೋಗ್ಯಾಸ್ ತಯಾರಿಸುವ ಚಿಕ್ಕ-ಚಿಕ್ಕ ಘಟಕಗಳನ್ನು ವಾರ್ಡ್‌ ಮಟ್ಟದಲ್ಲಿ ಸ್ಥಾಪಿಸಲಾಗುತ್ತಿದೆ. ಇಂತಹ ಘಟಕಗಳನ್ನು 198 ವಾರ್ಡ್‌ಗಳ ಪೈಕಿ 168ರಲ್ಲಿ ಮಾಡಲಾಗಿದೆ. ಕೆಲವು ವಾರ್ಡ್‌ಗಳಲ್ಲಿ ಜಾಗದ ಕೊರತೆಯಿಂದ ಕಾಮಗಾರಿ ವಿಳಂಬವಾಗುತ್ತಿದೆ. ಎಲ್ಲಾ ವಾರ್ಡ್‌ಗಳಲ್ಲಿ ಘಟಕ ಸ್ಥಾಪಿಸುವಂತೆ ಹೈಕೋರ್ಟ್‌ ಆದೇಶ ನೀಡಿದೆ.

ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ ಸಹಕಾರ ಸಿಗುತ್ತಿದೆಯೇ?
ಸರ್ಕಾರವೂ ಬೆಂಗಳೂರು ನಗರದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿದರೆ, ಸಹಯಕವಾಗುತ್ತದೆ. ಬಿಬಿಎಂಪಿಯೂ ಸಹ ಸಂಪನ್ಮೂಲ ಕ್ರೋಢಿಕರಣ ಮಾಡಿಕೊಂಡು, ಕಾಮಗಾರಿಗಳನ್ನು ನಡೆಸಲು ಅನುಕೂಲವಾಗುತ್ತದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಾಗ ಪಾಲಿಕೆ ಆಸ್ತಿಯನ್ನು ಅಡವಿಟ್ಟು, ಸಾಲ ಪಡೆಯುತ್ತೇವೆ. ನಂತರ ಸಾಲ ತೀರಿದ ಬಳಿಕ ಅದು ಪುನಃ ಪಾಲಿಕೆ ಕೈ ಸೇರುತ್ತದೆ.

198 ವಾರ್ಡ್‌ಗಳ ಬಿಬಿಎಂಪಿ ವಿಭಜನೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕೆಂಪೇಗೌಡರು ಕಟ್ಟಿದ ಬೆಂಗಳೂರು ಹೀಗೆಯೇ ಇರಲಿ ಎಂಬುದು ನಮ್ಮ ಅಭಿಪ್ರಾಯ. ಪಾಲಿಕೆ ವಿಭಜನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ವೈಯಕ್ತಿಕವಾಗಿ ನಾವು ಪಾಲಿಕೆಯನ್ನು ವಿಭಜಿಸುವುದು ಬೇಡ ಎಂದೇ ಹೇಳುತ್ತಿದ್ದೇವೆ. ಪಾಲಿಕೆಯನ್ನು ಎರಡು ಅಥವ ಮೂರು ಭಾಗಗಳಾಗಿ ವಿಂಗಡಿಸುವ ಚಿಂತನೆ ಸರ್ಕಾರಕ್ಕಿದೆ.

 Shantha Kumari

ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸುವ ಆದೇಶದ ಪಾಲನೆ ಹೇಗೆ?
ಹೈಕೋರ್ಟ್‌ ನಗರದಲ್ಲಿನ ಫುಟ್‌ಪಾತ್‌ ಅನ್ನು ತೆರವುಗೊಳಿಸಲು ಮೂರು ತಿಂಗಳ ಗಡುವು ನೀಡಿದೆ. ಅತ್ತ ಸುಪ್ರೀಂಕೋರ್ಟ್‌ ಫುಟ್‌ಪಾತ್ ವ್ಯಾಪಾರಿಗಳನ್ನು ತೆರವುಗೊಳಿಸಿದರೆ, ಅವರಿಗೆ ಶಾಶ್ವತ ಪುರ್ವಸತಿ ಕಲ್ಪಿಸಿ ಎಂದು ಆದೇಶ ನೀಡಿದೆ. ಸರ್ಕಾರ ಈ ಕುರಿತು ತೀರ್ಮಾನ ಕೈಗೊಳ್ಳಲು ಸಮಿತಿ ರಚನೆ ಮಾಡಿದೆ. ಅದರ ವರದಿ ಬಂದ ಮೇಲೆ ತೀರ್ಮಾನ ಕೈಗೊಳ್ಳುತ್ತೇವೆ. ಕಟ್ಟಡಗಳ ತ್ಯಾಜ್ಯಗಳನ್ನು ಫುಟ್‌ಪಾತ್‌ ಮೇಲೆ ಸುರಿದರೆ, ದಂಡ ವಿಧಿಸಲಾಗುತ್ತದೆ.

ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಿಂದ ನಗರವನ್ನು ಸ್ವಚ್ಛಗೊಳಿಸಬಹುದೇ?
ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧೀಜಿಯವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ಪ್ರಯತ್ನ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲೂ ಇದನ್ನು ಜಾರಿಗೆ ತರುವ ಪ್ರಯತ್ನ ನಡೆಸುತ್ತಿದ್ದೇವೆ. ಇಷ್ಟು ದೊಡ್ಡ ಬೆಂಗಳೂರನ್ನು ಸ್ವಚ್ಛಗೊಳಿಸಲು ಪಾಲಿಕೆಯೊಂದಿಗೆ ಜನರು ಕೈಜೋಡಿಸಬೇಕು. ಪ್ರತಿದಿನ ಬೆಳಗ್ಗೆ ನಾನು ಎರಡು ವಾರ್ಡ್‌ಗಳಿಗೆ ಭೇಟಿ ನೀಡಿ ಕಸ ವಿಲೇವಾರಿ ಬಗ್ಗೆ ಗಮನ ಹರಿಸುತ್ತಿದ್ದೇನೆ. ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಿ ನೀಡಬೇಕು ಮತ್ತು ಪಾಲಿಕೆ ಸಿಬ್ಬಂದಿಯೂ ಅದನ್ನು ಪ್ರತ್ಯೇಕವಾಗಿ ಸಂಗ್ರಹಣೆ ಮಾಡಬೇಕು. ಆಗ ಅನುಕೂಲವಾಗುತ್ತದೆ.

ಸಾಮಾಜಿಕ ತಾಣಗಳನ್ನು ಹೇಗೆ ಬಳಸಿಕೊಳ್ಳುತ್ತೀರಿ?
ಜನರ ಸಮಸ್ಯೆಯನ್ನು ಆಲಿಸಲು ಸಾಮಾಜಿಕ ಜಾಲತಾಣಗಳನ್ನು ಪಾಲಿಕೆ ಆರಂಭಿಸುತ್ತಿವೆ. ಎರಡು ದಿನದಲ್ಲಿ ಫೇಸ್‌ಬುಕ್ ಖಾತೆ ಆರಂಭಿಸಲಾಗುತ್ತದೆ. ಟ್ವಿಟರ್‌ ಖಾತೆ ತೆರೆಯಲಾಗಿದೆ. ಜನರಿಂದ ಬಂದ ಸಮಸ್ಯೆಯನ್ನು ಆಲಿಸಿ ಅಧಿಕಾರಿಗಳಿಂದ ಅದನ್ನು ಬಗೆಹರಿಸಿ, ಆ ಬಗ್ಗೆ ಸಹ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಲಿದ್ದೇವೆ. ಪಾಲಿಕೆ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಮಾತ್ರ ಫೇಸ್‌ಬುಕ್ ಪುಟದಲ್ಲಿ ಹಾಕಿ ಎಂದು ಜನರಿಗೆ ಮನವಿ ಮಾಡುತ್ತೇನೆ.

[ಸಂದರ್ಶನ : ಬಾಲರಾಜ್ ತಂತ್ರಿ, ಗುರು ಕುಂಟವಳ್ಳಿ]

English summary
Oneindia Kannada interview : The Bruhat Bengaluru Mahanagara Palike (BBMP) Mayor N. Shanthakumari interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X