ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರೋಪ ಸಾಬೀತಾದರೆ ರಾಜೀನಾಮೆ ನೀಡುವೆ: ಮಂಜುನಾಥ್ ರೆಡ್ಡಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 27: ನನ್ನ ವಿರುದ್ಧ ನೀಡಿರುವ ದೂರಿಗೆ ಯಾವುದೇ ಆಧಾರವಿಲ್ಲ. ನನ್ನ ತೇಜೋವಧೆ ಮಾಡಿರುವವರ ವಿರುದ್ಧ ಕಾನೂನು ಕ್ರಮತೆಗೆದುಕೊಳ್ಳಲು ಚಿಂತನೆ ಮಾಡಿದ್ದೇನೆ ಎಂದು ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮಂಜುನಾಥ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೆಡ್ಡಿ, ನಾನು ಇದುವರೆಗೆ ನಾಲ್ಕು ಬಾರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಚುನಾವಣಾ ಆಯೋಗ ತಿಳಿಸದಂತೆಯೇ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ನೀಡುರುವ ದಾಖಲೆಗಳು ಸರಿಯಾಗಿಲ್ಲ ಎಂದು ಸಾಬೀತಾದರೆ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಅಲ್ಲದೇ ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದರು.[ಪಾದಚಾರಿಗಳಿಗೆ ನರಕ ದರ್ಶನ ಮಾಡಿಸುವ ರೆಸಿಡೆನ್ಸಿ ರಸ್ತೆ]

ಕಾನೂನು ತಜ್ಞರ ಸಲಹೆ ಪಡೆದು ಪ್ರಕರಣವನ್ನು ನ್ಯಾಯಾಲಯದಲ್ಲೂ ಎದುರಿಸಲು ಸಿದ್ಧ ಎಂದು ಹೇಳಿದರು. ಇಂಥ ವೈಯಕ್ತಿಕ ಆರೋಪಗಳಿಗೆ ಬೆಲೆ ನೀಡಲು ಸಾಧ್ಯವಿಲ್ಲ. ಆದರೆ ಬೆಂಗಳೂರು ನಾಗರಿಕರಿಗೆ ನನ್ನ ಬಗ್ಗೆ ಹೋಗಿರುವ ತಪ್ಪು ಸಂದೇಶ ಸರಿಯಾಗಬೇಕು ಎಂದು ಹೇಳಿದರು .[ಕಸ, ಗುಂಡಿ, ಟ್ರಾಫಿಕ್ ಮುಕ್ತ ಮುಕ್ತ ಮುಕ್ತ ನಗರಕ್ಕೆ ರೆಡ್ಡಿ ಸೂತ್ರ]

ಬಿಬಿಎಂಪಿ ಚುನಾವಣೆಗೆ ಮೇಯರ್ ಮಂಜುನಾಥ ರೆಡ್ಡಿ ಸಲ್ಲಿಸಿರುವ ಅಸ್ತಿ ವಿವರ ಘೋಷಣೆ ದೋಷದಿಂದ ಕೂಡಿದ್ದು, ಕ್ರಿಮಿನಲ್ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಅಡ್ವೊಕೇಟ್ ಎನ್.ಪಿ ಅಮೃತೇಶ್ ದೂರು ಸಲ್ಲಿಸಿದ್ದರು. ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ರಾಜಕೀಯ ಕುತಂತ್ರ ಇರಬಹುದು

ರಾಜಕೀಯ ಕುತಂತ್ರ ಇರಬಹುದು

ದೂರು ನೀಡಿದ ವ್ಯಕ್ತಿಯನ್ನು ನಾನು ಇದುವರೆಗೂ ನೋಡಿಲ್ಲ. ಯಾವ ಕಾರಣಕ್ಕೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂಬುದನ್ನು ದೂರು ಸಲ್ಲಿಸಿದಚವರ ಬಳಿಯೇ ಕೇಳಬೇಕು ಎಂದು ಹೇಳಿದರು.

ದಾಖಲೆ ನೋಡಿ

ದಾಖಲೆ ನೋಡಿ

2015 ರ ಚುನಾವಣೆಗೆ ಸ್ಪರ್ಧೆ ಮಾಡುವ ವೇಳೆ ಸಕಲ ದಾಖಲೆಗಳನ್ನು ನೀಡಿದ್ದೇನೆ. ಯಾವ ಮುಚ್ಚು ಮೋರೆ ಮಾಡಿಲ್ಲ. ಆದಾಯ ತೆರಿಗೆಯನ್ನು ಪಾವತಿ ಮಾಡಿದ್ದೇನೆ ಎಂದು ಅಫಿಡವಿಟ್ ದಾಖಲೆಗಳನ್ನು ಮಾಧ್ಯಮಗಳಿಗೆ ನೀಡಿದರು.

 ಬಾರ್ ಕೌನ್ಸಿಲ್ ಗೆ ದೂರು ನೀಡುತ್ತೇನೆ

ಬಾರ್ ಕೌನ್ಸಿಲ್ ಗೆ ದೂರು ನೀಡುತ್ತೇನೆ

ವಕೀಲರೆಂದು, ಆರ್ ಟಿಐ ಕಾರ್ಯಕರ್ತ ಎಂದು ಹೇಳಿಕೊಂಡು ನನ್ನ ಮೇಲೆ ದೂರು ನೀಡುರುವ ವ್ಯಕ್ತಿಯ ಮೇಲೆ ಬಾರ್ ಕೌನ್ಸಿಲ್ ಗೆ ದೂರು ನೀಡುತ್ತೇನೆ. ಇಂಥ ಕೀಳುಮಟ್ಟದ ಪ್ರಚಾರ ಪಡೆದುಕೊಳ್ಳುವ ಅಗತ್ಯ ಅವರಿಗೆ ಏನಿತ್ತು ಎಂದು ಪ್ರಶ್ನೆ ಮಾಡಿದರು.

 ಜನರಿಗೆ ಸತ್ಯ ಮುಟ್ಟಿಸಿ

ಜನರಿಗೆ ಸತ್ಯ ಮುಟ್ಟಿಸಿ

ಪ್ಯಾನ್ ಕಾರ್ಡ್ ಮತ್ತು ಚುನಾವಣೆ ಸಂದರ್ಭ ನೀಡಿದ್ದ ಅಫಿಡವಿಟ್ ನ್ನು ಮತ್ತೊಮ್ಮೆ ಪ್ರದರ್ಶಿಸಿದ ರೆಡ್ಡಿ ರಾಜ್ಯಕ್ಕೆ, ಬೆಂಗಳೂರು ನಾಗರಿಕರಿಗೆ ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರಬಾರದು. ಈ ಪ್ರಕರಣದ ಹಿಂದೆ ನಿಜವಾಗಿ ಯಾರಿದ್ದಾರೆ ಎಂಬುದು ಸದ್ಯವೇ ತಿಳಿದು ಬರಲಿದೆ ಎಂದು ಹೇಳಿದರು.

English summary
BBMP Mayor Manjunatha Reddy deny the false affidavit claim which is filed by Advocate NP Amrutesh to Election Commission. Advocate NP Amrutesh claimed that Manjunatha Reddy had submitted a false affidavit while filing nomination papers in the recent BBMP elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X