ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆ ಮುಂದೂಡಿಕೆ

|
Google Oneindia Kannada News

Recommended Video

ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆ ಮುಂದೂಡಿಕೆ | Oneindia Kannada

ಬೆಂಗಳೂರು, ಸೆಪ್ಟೆಂಬರ್ 23 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಚುನಾವಣೆಯನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ 27ರಂದು ಚುನಾವಣೆ ದಿನಾಂಕವನ್ನು ನಿಗದಿ ಮಾಡಲಾಗಿತ್ತು.

ಸೋಮವಾರ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ನಡೆಯಬೇಕಿದ್ದ ಚುನಾವಣೆ ಮುಂದೂಡಲಾಗಿದೆ.

ಬೆಂಗಳೂರಲ್ಲಿ ಮತ್ತೆ ಆಪರೇಷನ್ ಕಮಲ; ನಾಲ್ವರ ಫೋನ್ ಆಫ್ಬೆಂಗಳೂರಲ್ಲಿ ಮತ್ತೆ ಆಪರೇಷನ್ ಕಮಲ; ನಾಲ್ವರ ಫೋನ್ ಆಫ್

ಮೇಯರ್ ಗಂಗಾಬಿಕೆ ಮತ್ತು ಉಪ ಮೇಯರ್ ಭದ್ರೇಗೌಡ ಅವಧಿ ಸೆಪ್ಟೆಂಬರ್ 28ಕ್ಕೆ ಅಂತ್ಯಗೊಳ್ಳಲಿದೆ. ಆದ್ದರಿಂದ, ಸೆಪ್ಟೆಂಬರ್ 27ರಂದು ಚುನಾವಣೆ ನಡೆಸಲು ದಿನಾಂಕವನ್ನು ಘೋಷಣೆ ಮಾಡಲಾಗಿತ್ತು. ಈಗ ಚುನಾವಣೆ ಮುಂದೂಡಿಕೆಯಾಗಿದೆ.

ಬಿಬಿಎಂಪಿ ವಿಭಜನೆ: ನಾಲ್ವರು ವಿಶೇಷ ಆಯುಕ್ತರ ನೇಮಕಬಿಬಿಎಂಪಿ ವಿಭಜನೆ: ನಾಲ್ವರು ವಿಶೇಷ ಆಯುಕ್ತರ ನೇಮಕ

ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ನಾಲ್ಕು ಅವಧಿಯ ಅಧಿಕಾರವನ್ನು ಮೈತ್ರಿಕೂಟ ಅನುಭವಿಸಿದ್ದು, 5ನೇ ಅವಧಿಗೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಸೆಪ್ಟೆಂಬರ್ 27ರಂದು ಚುನಾವಣೆ ನಡೆಯಬೇಕಿತ್ತು.

ಬಿಬಿಎಂಪಿಯಲ್ಲೂ ಆಪರೇಷನ್ ಕಮಲ, ಮೇಯರ್ ಹುದ್ದೆ ಬಿಜೆಪಿಗೆ?ಬಿಬಿಎಂಪಿಯಲ್ಲೂ ಆಪರೇಷನ್ ಕಮಲ, ಮೇಯರ್ ಹುದ್ದೆ ಬಿಜೆಪಿಗೆ?

ಬೆಂಗಳೂರಿನ 4 ಕ್ಷೇತ್ರಗಳು

ಬೆಂಗಳೂರಿನ 4 ಕ್ಷೇತ್ರಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕೆ. ಆರ್. ಪುರ, ಶಿವಾಜಿನಗರ, ಮಹಾಲಕ್ಷ್ಮೀ ಲೇಔಟ್, ಯಶವಂತಪುರ ಕ್ಷೇತ್ರದಲ್ಲಿಯೂ ಉಪ ಚುನಾವಣೆ ನಡೆಯಲಿದೆ. ಶನಿವಾರದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದ್ದರಿಂದ, ಬಿಬಿಎಂಪಿ ಮೇಯರ್ ಚುನಾವಣೆ ಮುಂದೂಡಲಾಗಿದೆ.

ದಿನಾಂಕ ನಿಗದಿ ಮಾಡಬೇಕು

ದಿನಾಂಕ ನಿಗದಿ ಮಾಡಬೇಕು

15 ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 24ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಬಳಿಕ ಪ್ರಾದೇಶಿಕ ಆಯುಕ್ತರು ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಸುವ ದಿನಾಂಕ ನಿಗದಿ ಮಾಡಲಿದ್ದಾರೆ.

ರೆಸಾರ್ಟ್ ರಾಜಕೀಯ

ರೆಸಾರ್ಟ್ ರಾಜಕೀಯ

ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಹಿನ್ನಲೆಯಲ್ಲಿ 4 ಪಕ್ಷೇತರ ಸದಸ್ಯರು ಗೋವಾದ ರೆಸಾರ್ಟ್‌ಗೆ ಹೋಗಿದ್ದರು. ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಬೆಂಬಲದಿಂದ ರೆಸಾರ್ಟ್‌ ಸೇರಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.

ಮ್ಯಾಜಿಕ್ ನಂಬರ್ 129

ಮ್ಯಾಜಿಕ್ ನಂಬರ್ 129

ಬಿಬಿಎಂಪಿಯ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಮ್ಯಾಜಿಕ್ ನಂಬರ್ 129. ಬಿಜೆಪಿ 125, ಕಾಂಗ್ರೆಸ್ 104, ಜೆಡಿಎಸ್ 21 ಸದಸ್ಯ ಬಲ ಹೊಂದಿದೆ. 7 ಪಕ್ಷೇತರ ಸದಸ್ಯರಿದ್ದಾರೆ. ಈ ಬಾರಿ ಬಿಜೆಪಿ ಮೇಯರ್ ಪಟ್ಟ ಪಡೆದುಕೊಳ್ಳಲು ಸಿದ್ಧತೆ ನಡೆಸಿತ್ತು. ಆದರೆ, ಈಗ ಚುನಾವಣೆ ಮುಂದಕ್ಕೆ ಹೋಗಿದೆ.

English summary
Bruhat Bengaluru Mahanagara Palike mayor and deputy mayor election postponed. Election postponed after election commission announced schedule for 15 assembly seat by election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X