ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಬಿಎನ್ ಮಂಜುನಾಥ್ ರೆಡ್ಡಿ ವ್ಯಕ್ತಿ ಚಿತ್ರ

By Mahesh
|
Google Oneindia Kannada News

ಬೆಂಗಳೂರು, ಸೆ. 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸ ಮೇಯರ್ ಹಾಗೂ ಉಪಮೇಯರ್ ಆಯ್ಕೆಗಾಗಿ ಶುಕ್ರವಾರ ಚುನಾವಣೆ ನಡೆಸಲಾಯಿತು.

ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷದ ಮಡಿವಾಳ ವಾರ್ಡ್ ನ ಬಿಬಿಎಂಪಿ ಸದಸ್ಯ ಬಿ.ಎನ್ ಮಂಜುನಾಥ ರೆಡ್ಡಿ ಅವರು ನೂತನ ಮೇಯರ್ ಆಗಿ ಆಯ್ಕೆಯಾದರೆ, ವೃಷಭಾವತಿ ನಗರ ವಾರ್ಡ್ ನ ಜೆಡಿಎಸ್ ಪಕ್ಷದ ಹೇಮಲತಾ ಅವರು ಉಪ ಮಹಾಪೌರರಾಗಿ ಚುನಾಯಿತರಾಗಿದ್ದಾರೆ.

ಬಿಬಿಎಂಪಿ ಮೇಯರ್, ಉಪ ಮೇಯರ್ ಅಲ್ಲದೆ ಸ್ಥಾಯಿ ಸಮಿತಿ ಅಧ್ಯಕ್ಷ, ಸದಸ್ಯರ ಚುನಾವಣೆಯನ್ನು ಕೂಡಾ ನಗರ ಪ್ರಾದೇಶಿಕ ಆಯುಕ್ತರಾದ ಎಂವಿ ಜಯಂತಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಸಲಾಯಿತು.[ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ]

ಚುನಾವಣೆಗೂ ಮುನ್ನ ಹಂಚಿಕೆಯಾದಂತೆ ಮೇಯರ್ ಸ್ಥಾನ ಸ್ಥಾನ ಕಾಂಗ್ರೆಸ್​ಗೆ, ಉಪ ಮೇಯರ್ ಸ್ಥಾನ ಜೆಡಿಎಸ್​ಗೆ ಹಂಚಿಕೆಯಾದರೆ, 12 ಸ್ಥಾಯಿ ಸಮಿತಿಗಳಲ್ಲಿ 7 ಸ್ಥಾನ ಪಕ್ಷೇತರರಿಗೆ ಸಿಗಲಿದೆ. ಉಳಿದ 5ರಲ್ಲಿ ಕಾಂಗ್ರೆಸ್​ಗೆ 3, ಜೆಡಿಎಸ್​ಗೆ 2 ಸ್ಥಾನ ಸಿಕ್ಕಿದೆ.

ಬೆಂಗಳೂರು ಉಸ್ತುವರಿ ಸಚಿವ ರಾಮಲಿಂಗಾರೆಡ್ಡಿ ಅವರ ಅತ್ಯಾಪ್ತರಾದ ಬಿಎನ್ ಮಂಜುನಾಥ್ ರೆಡ್ಡಿ ಅವರ ಪರಿಚಯ ಇಲ್ಲಿದೆ
* ಬಿ .ನಾರಾಯಣ ರೆಡ್ಡಿ ಮಂಜುನಾಥ ರೆಡ್ಡಿ (52 ವರ್ಷ)ಅವರು ಮಡಿವಾಳದ ನಿವಾಸಿ.
* ಮನೆ ವಿಳಾಸ : ಸಂಖ್ಯೆ 84/19, 1ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ, ಮಾರುತಿ ನಗರ, ಮಡಿವಾಳ, ಬೆಂಗಳೂರು - 560 068.

ಮಡಿವಾಳ ವಾರ್ಡ್ ಕಾರ್ಪೊರೇಟರ್ ಆಗಿ 3ನೇ ಬಾರಿ

ಮಡಿವಾಳ ವಾರ್ಡ್ ಕಾರ್ಪೊರೇಟರ್ ಆಗಿ 3ನೇ ಬಾರಿ

* ಈ ಹಿಂದೆ ಮಡಿವಾಳ ವಾರ್ಡ್ ಕಾರ್ಪೊರೇಟರ್ ಆಗಿ 3ನೇ ಬಾರಿ, ಮಡಿವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 3 ಬಾರಿ ಆಯ್ಕೆಯಾಗಿದ್ದಾರೆ. 1991ರಿಂದ ಬಿಬಿಎಂಪಿ ಬೆಂಗಳೂರಿನ ವಾರ್ಡ್ ಗಳ ಪರಿಚಯವಿದೆ. ಅನುಭವಿ ಬೆಂಗಳೂರು ನಾಗರಿಕ.
* ಕಳೆದ ಅವಧಿ(2013)ಯಲ್ಲಿ ಬಿಬಿಎಂಪಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿದ್ದರು

ವಿರೋಧ ಪಕ್ಷದ ನಾಯಕರಾಗಿದ್ದರು

* ಮಂಜುನಾಥ್ ರೆಡ್ಡಿ ಬಿಎ ಪದವಿಧರ.
* 1983ರಲ್ಲಿ ಎನ್‍ಎಸ್‍ಯುಐ ಸದಸ್ಯರಾಗಿ ಎಂಟ್ರಿ ನೀಡಿದ ಇವರು ಜಯನಗರ ಯೂತ್ ಬ್ಲಾಕ್ ಅಧ್ಯಕ್ಷರಾಗಿದ್ದರು.
* 1996ರಲ್ಲಿ ಮೊದಲ ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದರು.

ರಾಮಲಿಂಗಾರೆಡ್ಡಿ ಅವರ ಆತ್ಯಾಪ್ತರು

ರಾಮಲಿಂಗಾರೆಡ್ಡಿ ಅವರ ಆತ್ಯಾಪ್ತರು

* 2001ರಲ್ಲಿ ಸ್ಥಾಯಿ ಸಮಿತಿ ಸದಸ್ಯರಾಗಿದ್ದರು.
* 2015ರಲ್ಲಿ ಬೆಂಗಳೂರಿನ ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ(172)ದ ಮಡಿವಾಳ ವಾರ್ಡ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
1996, 2010 ಮತ್ತು 2015ರಲ್ಲಿ ಸೇರಿ ಒಟ್ಟು ಮೂರು ಬಾರಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿರುವ ಇವರ ಹೆಸರನ್ನು ಮೇಯರ್ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ಅವರೇ ಸೂಚಿಸಿದ್ದರು.

131 ಮತಗಳನ್ನು ಪಡೆದ ಮಂಜುನಾಥ ರೆಡ್ಡಿ

131 ಮತಗಳನ್ನು ಪಡೆದ ಮಂಜುನಾಥ ರೆಡ್ಡಿ

ಬಿಬಿಎಂಪಿ ಪಾಲಿಕೆ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ, ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್, ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 131 ಮತಗಳನ್ನು ಪಡೆದ ಮಂಜುನಾಥ ರೆಡ್ಡಿ ಅವರು ಮೇಯರ್ ಆಗಿ ಆಯ್ಕೆಯಾದರು. ಬಿಜೆಪಿ ಪರವಾಗಿ ಕಾಡು ಮಲ್ಲೇಶ್ವರ ವಾರ್ಡ್‌ ಬಿಜೆಪಿ ಸದಸ್ಯ ಮಂಜುನಾಥ ರಾಜು ಅವರು ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.

English summary
BBMP Mayor B Narayana Reddy Manjunath Reddy profile. Manjunath Reddy elected to BBMP from Madiwala ward. He is block congress president and was leader of opposition in previous term.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X