ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ಸಂಖ್ಯೆ ಹೆಚ್ಚಳ; ಬಿಬಿಎಂಪಿ ಮಾರ್ಷಲ್‌ಗಳಿಗೆ ಹೆಚ್ಚಿನ ಅಧಿಕಾರ

|
Google Oneindia Kannada News

ಬೆಂಗಳೂರು, ಮಾರ್ಚ್ 14; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಸಾಮಾಜಿಕ ಅಂತರವನ್ನು ಕಾಪಾಡದೇ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡುತ್ತಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾರ್ಷಲ್‌ಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ. ನಿಯಮ ಮೀರಿ ಜನ ಸೇರಿದ್ದರೆ ದಂಡ ವಿಧಿಸುವ, ದಂಡ ವಿಧಿಸುವ ಮಾರ್ಷಲ್‌ಗಳ ಜೊತೆ ಅನುಚಿತವಾಗಿ ವರ್ತಿಸುವವರಿಗೂ ದಂಡ ಹಾಕಲು ಅನುಮತಿ ನೀಡಿದೆ.

ಕಲಬುರಗಿ; ಮತ್ತೆ ಕೋವಿಡ್ ಪತ್ತೆ, ಅಂತರಾಜ್ಯ ಪ್ರಯಾಣಿಕರಿಗೆ ಸೂಚನೆಕಲಬುರಗಿ; ಮತ್ತೆ ಕೋವಿಡ್ ಪತ್ತೆ, ಅಂತರಾಜ್ಯ ಪ್ರಯಾಣಿಕರಿಗೆ ಸೂಚನೆ

ಶನಿವಾರದ ವರದಿಯಂತೆ ಬೆಂಗಳೂರು ನಗರದಲ್ಲಿ 630 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 410811ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 5,853ಕ್ಕೆ ಏರಿಕೆಯಾಗಿದೆ.

ಹಿರಿಯ ನಾಗರಿಕರಿಗಾಗಿ ಕೋವಿಡ್ ರಕ್ಷಾ ಸಹಾಯವಾಣಿ ಆರಂಭಿಸಿದ ತೇಜಸ್ವಿ ಸೂರ್ಯ ಹಿರಿಯ ನಾಗರಿಕರಿಗಾಗಿ ಕೋವಿಡ್ ರಕ್ಷಾ ಸಹಾಯವಾಣಿ ಆರಂಭಿಸಿದ ತೇಜಸ್ವಿ ಸೂರ್ಯ

BBMP Marshals Will Issue Penalty For People

ನಗರದಲ್ಲಿ ಕಳೆದ ಮೂರು ದಿನದಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ, ಹಲವಾರು ಜನರು ಮಾಸ್ಕ್ ಧರಿಸದೇ ಓಡಾಟವನ್ನು ನಡೆಸುತ್ತಿದ್ದಾರೆ.

ಕಲಬುರಗಿ; ಕೋವಿಡ್ ಸೋಂಕಿತರ ಸಂಪರ್ಕಿತರ ಪರೀಕ್ಷೆಗೆ ಸೂಚನೆ ಕಲಬುರಗಿ; ಕೋವಿಡ್ ಸೋಂಕಿತರ ಸಂಪರ್ಕಿತರ ಪರೀಕ್ಷೆಗೆ ಸೂಚನೆ

ಮದುವೆ, ಸಮಾವೇಶಗಳಲ್ಲಿ ಹೆಚ್ಚಿನ ಜನರು ಸೇರುತ್ತಿದ್ದಾರೆ. 200ಕ್ಕಿಂತಲೂ ಅಧಿಕ ಜನರು ಸೇರುವಂತಿಲ್ಲ ಎಂಬ ನಿಯಮವಿದ್ದರೂ ಯಾರೂ ಸಹ ಪಾಲನೆ ಮಾಡುತ್ತಿಲ್ಲ. ಆದ್ದರಿಂದ, ಬಿಬಿಎಂಪಿ ಮಾರ್ಷಲ್‌ಗಳಿಗೆ ಹೆಚ್ಚಿನ ಅಧಿಕಾರ ನೀಡಿದೆ.

ಮದುವೆ, ಚಿತ್ರಮಂದಿರ, ಧಾರ್ಮಿಕ ಕಾರ್ಯಕ್ರಮ, ಸಮಾವೇಶಗಳಲ್ಲಿ ಹೆಚ್ಚಿನ ಜನರು ಸೇರಿದ್ದರೆ ದಂಡ ವಿಧಿಸುವ ಅಧಿಕಾರವನ್ನು ಮಾರ್ಷಲ್‌ಗಳಿಗೆ ನೀಡಲಾಗಿದೆ. ಮಾರ್ಷಲ್‌ಗಳ ಕರ್ತವ್ಯಕ್ಕೆ ಅಡ್ಡಿ ಮಾಡಿದರೆ ಸಹ ದಂಡ ಕಟ್ಟಬೇಕಾಗುತ್ತದೆ.

English summary
Bruhat Bengaluru Mahanagara Palike marshals will issue penalty for the people who not not following social distancing in public place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X