ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ನಾಮಫಲಕ ಇಲ್ಲದಿದ್ದರೆ ಉದ್ದಿಮೆ, ಅಂಗಡಿ ಪರವಾನಗಿ ರದ್ದು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯ ಬಳಕೆಗೆ ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ. ಕನ್ನಡ ಭಾಷೆಯಲ್ಲಿ ನಾಮಫಲಕ ಹೊಂದಿಲ್ಲದ ಉದ್ದಿಮೆಗಳು, ಅಂಗಡಿ ಮುಂತಾದ ವಾಣಿಜ್ಯ ಕಟ್ಟಡಗಳ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ರಾಜ್ಯೋತ್ಸವ ಆಚರಿಸಿದ ನೌಕರನ ವಜಾ: ಐಟಿಸಿ ವಿರುದ್ಧ ಬೃಹತ್ ಪ್ರತಿಭಟನೆರಾಜ್ಯೋತ್ಸವ ಆಚರಿಸಿದ ನೌಕರನ ವಜಾ: ಐಟಿಸಿ ವಿರುದ್ಧ ಬೃಹತ್ ಪ್ರತಿಭಟನೆ

ಪ್ರಸಕ್ತ ನವೆಂಬರ್ 1ರಿಂದ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಕಂಪೆನಿಗಳು ಹಾಗೂ ಇತರೆ ಪರವಾನಗಿ ಪಡೆದಿರುವ ವ್ಯಾಪಾರಿಗಳು ತಮ್ಮ ಶಾಖೆ ಅಥವಾ ಕಟ್ಟಡ ಮುಂದೆ ಅಳವಡಿಸಿರುವ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ಅಗ್ರಸ್ಥಾನದಲ್ಲಿ ಬಳಸಬೇಕು ಎಂದು ಬಿಬಿಎಂಪಿ ಆಯುಕ್ತ ಬಿಎಚ್ ಅನಿಲ್ ಕುಮಾರ್ ಶನಿವಾರ ಆದೇಶ ಹೊರಡಿಸಿದ್ದಾರೆ.

BBMP Made Kannada Board Compulsory In Bengaluru Trade Centers Hotels

ನಾಮಫಲಕಗಳಲ್ಲಿ ಕನಿಷ್ಠ ಶೇ 60ರಷ್ಟು ಕನ್ನಡ ಭಾಷೆಯಲ್ಲಿ ವಿವರ ಇರಬೇಕು. ಕನ್ನಡ ಭಾಷೆಯ ಬಳಕೆಯು ಸ್ಪಷ್ಟವಾಗಿ ಇರುವಂತೆ ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಆದೇಶವನ್ನು ಕಡೆಗಣಿಸಿ ಕನ್ನಡವನ್ನು ಆದ್ಯತೆಯ ಮೇರೆಗೆ ಬಳಸದೆ ಇದ್ದರೆ ಅದರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.

BBMP Made Kannada Board Compulsory In Bengaluru Trade Centers Hotels

ಈ ಹಿಂದೆಯೇ ಪರವಾನಗಿ ಪಡೆದಿರುವವರು 2019ರ ನವೆಂಬರ್ 1ರ ಒಳಗೆ ಈ ಆದೇಶಕ್ಕೆ ಅನುಗುಣವಾಗಿ ನಾಮಫಲಕವನ್ನು ಬದಲಿಸಿ ಕನ್ನಡಕ್ಕೆ ಆದ್ಯತೆ ನೀಡುವುದು ಸಹ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ: ಸರ್ಕಾರದ ಅಧಿಸೂಚನೆವಿವಿಧ ಅಕಾಡೆಮಿಗಳಿಗೆ ಅಧ್ಯಕ್ಷರು, ಸದಸ್ಯರ ನೇಮಕ: ಸರ್ಕಾರದ ಅಧಿಸೂಚನೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳ ಕನ್ನಡೀಕರಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಹಿಂದೆ ನೀಡಿದ್ದ ಸೂಚನೆಯಂತೆ ಈ ಆದೇಶ ಹೊರಡಿಸಲಾಗಿದೆ.

English summary
BBMP on Saturday issued an order that every trade centers and business institutions have to use Kannada sign boards with priority from November 1st.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X