• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

32 ಕೋಟಿ ರೂ ತೆರಿಗೆ ಪಾವತಿಸದ ಮಂತ್ರಿಮಾಲ್‌ಗೆ ಬೀಗ

|

ಬೆಂಗಳೂರು,ಫೆಬ್ರವರಿ 25:32 ಕೋಟಿ ರೂ ತೆರಿಗೆ ಪಾವತಿಸದ ಮಂತ್ರಿ ಮಾಲ್ ವಿರುದ್ಧ ಬಿಬಿಎಂಪಿ ಕ್ರಮ ಕೈಗೊಂಡಿದ್ದು, ಮಂತ್ರಿ ಮಾಲ್‌ಗೆ ಬೀಗ ಹಾಕಿದೆ.

ಕಳೆದ ಮೂರು ವರ್ಷಗಳಿಂದ ಬಿಬಿಎಂಪಿಗೆ ಮಂತ್ರಿಮಾಲ್ ತೆರಿಗೆ ಪಾವತಿಸಿಲ್ಲ, ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ನೋಟಿಸ್ ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ, ಹೀಗಾಗಿ ಅಧಿಕಾರಿಗಳು ಖುದ್ದಾಗಿ ತೆರಳಿ ಮಾಲ್‌ಗೆ ಬೀಗ ಹಾಕಿದ್ದಾರೆ.

ಕೊರೊನಾ ಕಾಲದಲ್ಲೂ ಬಿಬಿಎಂಪಿಗೆ ಸಂದಾಯವಾದ ಆಸ್ತಿ ತೆರಿಗೆ ಎಷ್ಟು ಗೊತ್ತಾ?

ಮಂತ್ರಿ ಮಾಲ್ ಮಾಲೀಕರು ಆಸ್ತಿ ತೆರಿಗೆ ಪಾವತಿಗಾಗಿ 15 ದಿನಗಳ ಕಾಲಾವಕಾಶ ಕೇಳಿದ್ದರು, ಅದರಂತೆ ನೋಟಿಸ್ ನೀಡಿ 15 ದಿನಗಳು ಕಳೆದ ಕಾರಣ ಪಶ್ಚಿಮ ವಿಭಾಗದ ತೆರಿಗೆ ಅಧಿಕಾರಿಗಳು ಮಾಲ್ ಸಿಬ್ಬಂದಿಯನ್ನು ಹೊರಗೆ ಕರೆದು ಬೀಗ ಹಾಕಿದ್ದು,ಮಾರ್ಚ್ 1 ರವರೆಗೆ ಅವಕಾಶವಿದ್ದು, ತೆರಿಗೆ ಕಟ್ಟದೇ ಹೋದರೆ ಮಾಲ್‌ನ್ನು ಬಿಬಿಎಂಪಿ ವಶಪಡಿಸಿಕೊಳ್ಳುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮೊದಲು ಮಾಲ್ ಮಾಲೀಕರು 10 ಕೋಟಿ ರೂ ಚೆಕ್ ನೀಡಿದ್ದರು, ಆದರೆ ಅದು ಬೌನ್ಸ್ ಆಗಿರುವುದರಿಂದಾಗಿ ಪಾಲಿಕೆ ಕಾನೂನು ಕೋಶದ ಶಿಫಾರಸ್ಸಿನ ಮೇರೆಗೆ ಬೀಗ ಹಾಕಿದೆ.

   ಇಂದು ಭಾರತ್ ಬಂದ್-ಡೀಸೆಲ್-ಪೆಟ್ರೋಲ್ ದರ ಹೆಚ್ಚಳ, ಟೋಲ್ ನೀತಿಗೆ ವಿರೋಧ | Oneindia Kannada

   ಈ ಕುರಿತು ಬಿಬಿಎಂಪಿ ಕಂದಾಯಾಧಿಕಾರಿ ಪ್ರಸನ್ನ ಕುಮಾರ್ ಮಾಹಿತಿ ನೀಡಿದ್ದು, ತೆರಿಗೆ ಕಟ್ಟದೆ 32 ಕೋಟಿ ರೂ ಬಾಕಿ ಉಳಿಸಿಕೊಂಡಿದೆ. ಈ ಹಿಂದೆ ತೆರಿಗೆ ಪಾವತಿಸುವಂತೆ ಬಿಬಿಎಂಪಿ ನೋಟಿಸ್ ಜಾರಿಗೊಳಿಸಿತ್ತು, ಆದರೂ ಎಚ್ಚೆತ್ತುಕೊಳ್ಳದ ಕಾರಣ ಮಾಲ್‌ಗೆ ಬೀಗ ಹಾಕಿದ್ದೇವೆ ಎಂದು ಹೇಳಿದ್ದಾರೆ.

   English summary
   BBMPrevenue section officials locked the Mantrimall in Sampige road, Malleshwaram for default in the property tax payment.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X