ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೋವಿಡ್ - 19 ಹೆಚ್ಚಳ; ಬಿಬಿಎಂಪಿಯಿಂದ ಜನರಿಗೆ ಮನವಿ

|
Google Oneindia Kannada News

ಬೆಂಗಳೂರು, ಜುಲೈ 03 : ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜನರಿಗೆ ಮನವಿಯೊಂದನ್ನು ಮಾಡಿದೆ.

Recommended Video

China reacts to Modi's surprise visit to galwan valley | Oneindia Kannada

ಗುರುವಾರ ನಗರದಲ್ಲಿ 889 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಒಂದೇ ದಿನ ನಗರದಲ್ಲಿಇಷ್ಟು ಸಂಖ್ಯೆಯ ಪ್ರಕರಣ ದಾಖಲಾಗಿರುವುದು ಇದೇ ಮೊದಲು. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 6179.

ಮಾಸ್ಕ್ ಧರಿಸದಿದ್ದಕ್ಕೆ ಜೂನ್‌ನಲ್ಲಿ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?ಮಾಸ್ಕ್ ಧರಿಸದಿದ್ದಕ್ಕೆ ಜೂನ್‌ನಲ್ಲಿ ಬಿಬಿಎಂಪಿ ಸಂಗ್ರಹಿಸಿದ ದಂಡ ಎಷ್ಟು?

BBMP Issues Precautionary Measures For General Public

ಬೆಂಗಳೂರು ನಗರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5505. ಇದುವರೆಗೂ ನಗರದಲ್ಲಿ 100 ಜನರು ಕೊರೊನಾ ವೈರಸ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಬೆಂಗಳೂರು ಲಾಕ್‌ಡೌನ್‌? ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ ಬೆಂಗಳೂರು ಲಾಕ್‌ಡೌನ್‌? ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ಪಷ್ಟನೆ

ಸಾರ್ವಜನಿಕ ಸ್ಥಳದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

* ಸಾರ್ವಜನಿಕ ಸ್ಥಳಗಳಲ್ಲಿ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವಂತೆ ಮುಖಗವಸು ಧರಿಸುವುದು ಕಡ್ಡಾಯ.

* ಸೀನು, ಕೆಮ್ಮು ಬಂದಾಗ ಕರವಸ್ತ್ರ ಅಥವಾ ಇನ್ನಿತರ ವಸ್ತ್ರಗಳನ್ನು ಅಡ್ಡವಾಗಿರಿಸಿಕೊಳ್ಳಬೇಕು.

ಬಿಬಿಎಂಪಿ ಅಂತಿಮಗೊಳಿಸಿದ 7 ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳು ಬಿಬಿಎಂಪಿ ಅಂತಿಮಗೊಳಿಸಿದ 7 ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳು

* ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು ಕಸಕಡ್ಡಿ ಹಾಕುವುದು ಮತ್ತು ಇನ್ನಿತರ ರೀತಿಯಲ್ಲಿ ಗಲೀಜು ಮಾಡುವುದನ್ನು ನಿಷೇಧಿಸಲಾಗಿದೆ.

* ಆಗಿಂದಾಗ್ಗೆ ಸಾಬೂನಿನಿಂದ ಅಥವ ಸ್ಯಾನಿಟೈಸರ್‌ನಿಂದ ಕೈ ತೊಳೆದುಕೊಳ್ಳಬೇಕು.

* ಬಾಯಿ, ಮೂಗು ಮತ್ತು ಕಣ್ಣುಗಳನ್ನು ಕೈಯಿಂದ ಮುಟ್ಟಿಕೊಳ್ಳಬಾರದು.

* ನೀವು ಹೋದೆಡೆಗಳಲ್ಲಿ ಇತರರಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಿ

* ಮಾಸ್ಕ್ ಧರಿಸದಿದ್ದಲ್ಲಿ ಅಥವ ಅಂತರ ಕಾಯ್ದುಕೊಳ್ಳದಿದ್ದಲ್ಲಿ ರೂ. 200 ರೂ. ದಂಡ ವಿಧಿಸಲಾಗುತ್ತದೆ.

English summary
The Bruhat Bengaluru Mahanagara Palike (BBMP) issued precautionary measures for the general public in a view of rising COVID - 19 cases in city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X