ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರದ ನಿಯಮ ಪಾಲಿಸದ 36 ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 17: ಕೋವಿಡ್ 19 ರೋಗಿಗಳಿಗೆ ಶೇ 50ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು ಎಂಬ ಸರ್ಕಾರದ ನಿಯಮವನ್ನು ಉಲ್ಲಂಘಿಸಿದ ನಗರದ 36 ಆಸ್ಪತ್ರೆಗಳಿಗೆ ಬಿಬಿಎಂಪಿ ಕಮಿಷನರ್ ಎನ್. ಮಂಜುನಾಥ ಪ್ರಸಾದ್ ಬುಧವಾರ ಷೋಕಾಸ್ ನೋಟಿಸ್ ನೀಡಿದ್ದಾರೆ.

ಎಸ್‌ಎಎಸ್‌ಟಿ ಪೋರ್ಟಲ್ ಮೂಲಕ ಸರ್ಕಾರವು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹಂಚಿಕೆ ಮಾಡಿದ್ದರೂ ಆಸ್ಪತ್ರೆಗಳು ರೋಗಿಗಳಿಗೆ ಹಾಸಿಗೆ ನಿರಾಕರಿಸಿವೆ ಎಂದು ಅವರು ಹೇಳಿದ್ದಾರೆ. ಎಸ್‌ಎಎಸ್‌ಟಿ ಪೋರ್ಟಲ್‌ನಲ್ಲಿ ತನ್ನಲ್ಲಿರುವ ಹಾಸಿಗೆ ವಿವರಗಳನ್ನು ಸೇರಿಸುವಂತೆ 24 ಗಂಟೆಗಳ ಸಮಯವನ್ನು ಆಸ್ಪತ್ರೆಗಳಿಗೆ ನೀಡಲಾಗಿದೆ.

ಬಿಬಿಎಂಪಿ: ಬಯಲಾಯ್ತು ಸಾವಿರ ಕೋಟಿಯ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ!ಬಿಬಿಎಂಪಿ: ಬಯಲಾಯ್ತು ಸಾವಿರ ಕೋಟಿಯ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ!

ಯಾವ ಯಾವ ಆಸ್ಪತ್ರೆಗಳಿಗೆ ನೋಟಿಸ್?:

ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆ, ಶೇಷಾದ್ರಿಪುರ ಅಪೋಲೋ ಹಾಸ್ಪಿಟಲ್ಸ್ ಎಂಟರ್‌ಪ್ರೈಸ್ ಲಿ., ಬೆಂಗಳೂರು ಬ್ಯಾಪಿಸ್ಟ್ ಆಸ್ಪತ್ರೆ, ಕ್ರಿಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಎಚ್‌ಬಿಎಸ್ ಆಸ್ಪತ್ರೆ ಟ್ರಸ್ಟ್, ಬಿಜಿಎಸ್ ಆಸ್ಪತ್ರೆ, ಮೆಡಿಹೋಪ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ನಂದನಾ ಹೆಲ್ತ್ ಕೇರ್ ಸರ್ವಿಸಸ್, ನಾರಾಯಣ ಹೃದಯಾಲಯ, ನ್ಯೂ ಜನಪ್ರಿಯ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್, ಸಂತೋಷ್ ಹಾಸ್ಪಿಟಲ್, ಶಿಫಾ ಆಸ್ಪತ್ರೆ, ಸೇಂಟ್ ವೆಗಾ ಆಸ್ಪತ್ರೆ.

BBMP Issued Notices To 36 Bengaluru Hospitals For Not Reserving 50% Beds For Covid Patients

Recommended Video

ಗೃಹ ಸಚಿವ Basavaraj Bommaiಗೆ ಕೋವಿಡ್ ಸೋಂಕು | Oneindia Kannada

ಸ್ಪೆಷಲಿಸ್ಟ್ ಹೆಲ್ತ್ ಸಿಸ್ಟಮ್, ಸಾಗರ್ ಹಾಸ್ಪಿಟಲ್ ಜಯನಗರ್, ರೀಗಾಲ್ ಆಸ್ಪತ್ರೆ, ಮಣಿಪಾಲ್ ಆಸ್ಪತ್ರೆ, ವಿಕ್ರಮ್ ಆಸ್ಪತ್ರೆ, ಸಕ್ರಾ, ಪಲ್ಸ್, ಸಿಟಿ ಆಸ್ಪತ್ರೆ, ರಾಮಯ್ಯ ಹರ್ಷ ಆಸ್ಪತ್ರೆ, ಹೆಲ್ತ್‌ಕೇರ್ ಗ್ಲೋಬರ್ ಎಂಟರ್‌ಪ್ರೈಸಸ್, ರಕ್ಷಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ವಿಜಯಶ್ರೀ ಆಸ್ಪತ್ರೆ, ಎಹಾ ಆಸ್ಪತ್ರೆ, ಸುಶ್ರೂಷಾ ಆಸ್ಪತ್ರೆ ಯಲಹಂಕ, ನು ಆಸ್ಪತ್ರೆ, ಕಂಫರ್ಟ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಶ್ರೀನಿವಾಸಮ್ ಕ್ಯಾನ್ಸರ್ ಕೇರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ರಿಪಬ್ಲಿಕ್ ಆಸ್ಪತ್ರೆ.

English summary
BBMP Issued Notices to 36 Bengaluru hospitals for not reserving 50% beds for Covid patients as per govt norms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X