ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಲು-ಸಾಲು ಹಬ್ಬಗಳು; ಆಚರಣೆಗೆ ಬಿಬಿಎಂಪಿ ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಜುಲೈ 28: ಶ್ರಾವಣ ಮಾಸ ಆರಂಭವಾಗಿದ್ದು ಸಾಲು-ಸಾಲು ಹಬ್ಬಗಳು ಎದುರಿಗೆ ಬಂದಿದೆ. ಬೆಂಗಳೂರು ನಗರದ ಜನರು ಖರೀದಿ ಮತ್ತು ಹಬ್ಬಗಳ ಆಚರಣೆಯಲ್ಲಿ ಬ್ಯುಸಿಯಾಗಲಿದ್ದಾರೆ. ಹಬ್ಬಗಳ ಆಚರಣೆಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Recommended Video

Japan ಇಲ್ಲಿನ ಪ್ರತಿ ಮನೆಗೂ ಮಾಸ್ಕ್ ಜೊತೆ ದುಡ್ಡು ಕೊಟ್ರು | Oneindia Kannada

ಕೊರೊನಾ ವೈರಸ್ ಸೋಂಕಿನ ಭೀತಿಯಲ್ಲಿಯೇ ಬೆಂಗಳೂರು ನಗರದಲ್ಲಿ ಹಬ್ಬವನ್ನು ಆಚರಣೆ ಮಾಡಬೇಕಿದೆ. ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 46,923ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಇದುವರೆಗೂ 917 ಜನರು ಮೃತಪಟ್ಟಿದ್ದಾರೆ.

ಬಕ್ರೀದ್; ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧಬಕ್ರೀದ್; ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹಬ್ಬಗಳ ಆಚರಣೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ಮನೆಯಲ್ಲಿಯೇ ಸರಳವಾಗಿ ಹಬ್ಬವನ್ನು ಆಚರಣೆ ಮಾಡಿ. ಮನೆಗೆ ಯಾರೂ ಭೇಟಿ ನೀಡದಂತೆ ನೋಡಿಕೊಳ್ಳಿ, ದೇವಾಲಯ ಮುಂತಾದ ಪ್ರಾರ್ಥನಾ ಮಂದಿರಕ್ಕೆ ಹೋಗುವುದುನ್ನು ಆದಷ್ಟು ಕಡಿಮೆ ಮಾಡಿ ಎಂದು ಹೇಳಿದ್ದಾರೆ.

ಕೋವಿಡ್ ಭೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ; ಮಾರ್ಗಸೂಚಿ ಪ್ರಕಟ ಕೋವಿಡ್ ಭೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ; ಮಾರ್ಗಸೂಚಿ ಪ್ರಕಟ

ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಜನರು ಎಚ್ಚರ ವಹಿಸಬೇಕು. ಹಬ್ಬಗಳಿಗೆ ಖರೀದಿ, ಹಬ್ಬಗಳ ಆಚರಣೆ ಸಂದರ್ಭದಲ್ಲಿ ಬಿಬಿಎಂಪಿ ನೀಡುವ ಸೂಚನೆಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಳ್ಳಿ ದೇವಾಲಯಗಳಿಗೂ ಬೀಗ: ಮನೆಯಲ್ಲೇ ಯುಗಾದಿ ಹಬ್ಬಹಳ್ಳಿ ದೇವಾಲಯಗಳಿಗೂ ಬೀಗ: ಮನೆಯಲ್ಲೇ ಯುಗಾದಿ ಹಬ್ಬ

ಪ್ರಾರ್ಥನಾ ಮಂದಿರಗಳಿಗೆ ಭೇಟಿ ಬೇಡ

ಪ್ರಾರ್ಥನಾ ಮಂದಿರಗಳಿಗೆ ಭೇಟಿ ಬೇಡ

ದೇವಾಲಯ, ಚರ್ಚ್, ಮಸೀದಿ ಮುಂತಾದ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಬೇಡಿ. ಅವುಗಳು ಬಾಗಿಲು ತೆರೆದಿವೆ ಎಂದು ಘೋಷಣೆ ಮಾಡಿದರೂ ಹಬ್ಬದ ದಿನಗಳ ಸಂದರ್ಭದಲ್ಲಿ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ ಎಂದು ಬಿಬಿಎಂಪಿ ಆಯುಕ್ತರು ಮನವಿ ಮಾಡಿದ್ದಾರೆ.

ಮನೆಗಳಿಗೆ ಭೇಟಿ ಬೇಡ

ಮನೆಗಳಿಗೆ ಭೇಟಿ ಬೇಡ

ಹಬ್ಬಗಳನ್ನು ಮನೆಯಲ್ಲಿಯೇ ಸರಳವಾಗಿ ಆಚರಣೆ ಮಾಡಿ. ಸ್ನೇಹಿತರು, ಸಂಬಂಧಿಕರು, ಅಕ್ಕ-ಪಕ್ಕದ ಮನೆಗಳಿಗೆ ಹೋಗಬೇಡಿ. ನಿಮ್ಮ ಮನೆಗು ಅತಿಥಿಗಳು ಬರದಂತೆ ನೋಡಿಕೊಳ್ಳಿ. ಎಲ್ಲರ ಸುರಕ್ಷತೆ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ.

ಗಣೇಶಮೂರ್ತಿ ತರಬೇಡಿ

ಗಣೇಶಮೂರ್ತಿ ತರಬೇಡಿ

ಗೌರಿ-ಗಣೇಶ ಹಬ್ಬಕ್ಕೆ ಮೂರ್ತಿಗಳನ್ನು ಹೊರಗಡೆಯಿಂದ ತರಬೇಡಿ. ಸಾರ್ವಜನಿಕವಾಗಿ ನಡೆಯುವ ವಿಸರ್ಜನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಡಿ. ಹೊರಗಿನಿಂದ ತರುವ ಮೂರ್ತಿಗಳು ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಅಪಾಯಕಾರಿ ಎಂದು ಬಿಬಿಎಂಪಿ ಹೇಳಿದೆ.

ಸಾಮೂಹಿಕ ಪ್ರಾರ್ಥನೆ ಬೇಡ

ಸಾಮೂಹಿಕ ಪ್ರಾರ್ಥನೆ ಬೇಡ

ಬಕ್ರೀದ್, ಕೃಷ್ಣಾಷ್ಟಮಿ ಹಬ್ಬಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ಮಾಡಬೇಡಿ. ಹೆಚ್ಚು ಜನರು ಸೇರುವುದರಿಂದ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಬೇಡಿ ಎಂದು ಸಲಹೆ ನೀಡಲಾಗಿದೆ. ರಕ್ಷಾಬಂಧನದ ದಿನ ಅಣ್ಣ ಅಥವ ತಂಗಿಯ ಮನೆಗೆ ಭೇಟಿ ನೀಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

English summary
Ahead of the Varamahalakshmi festival, Bakrid, Krishna Janmashtami BBMP issued guidelines for celebrating festivals in the Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X