ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಸ್ಮಾರ್ಟ್‌ ಪಾರ್ಕಿಂಗ್ ವ್ಯವಸ್ಥೆ ಜಾರಿ; 10 ರಸ್ತೆಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 20: ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ನಗರದಲ್ಲಿನ ವಾಹನ ನಿಲುಗಡೆ ಸಮಸ್ಯೆ ನಿವಾರಿಸಲು ಈ ವ್ಯವಸ್ಥೆಯನ್ನು 10 ರಸ್ತೆಯಲ್ಲಿ ಜಾರಿಗೊಳಿಸಲಾಗಿದೆ.

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆಗೆ ಚಾಲನೆ ನೀಡಲಾಗಿದೆ. ನಗರದ 87 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೆ ಬರುತ್ತಿದೆ. ಸೆಪ್ಟೆಂಬರ್ 19ರಿಂದ 10 ರಸ್ತೆಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬಂದಿದೆ.

ಬೆಂಗಳೂರು; ಜೆ. ಸಿ. ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧ?ಬೆಂಗಳೂರು; ಜೆ. ಸಿ. ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್ ನಿಷೇಧ?

ಬಿಬಿಎಂಪಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೊಳಿಸಲಾಗಿದೆ. ಸೆಂಟ್ರಲ್ ಪಾರ್ಕಿಂಗ್ ಸರ್ವೀಸಸ್ ಸಂಸ್ಥೆಯು ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ. 10 ರಸ್ತೆಗಳಲ್ಲಿ 475 ಕಾರು ಮತ್ತು 510 ಬೈಕ್ ನಿಲುಗಡೆ ಮಾಡಬಹುದಾಗಿದೆ.

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಕೊನೆಗೂ ಇಳಿಕೆಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಶುಲ್ಕ ಕೊನೆಗೂ ಇಳಿಕೆ

ಡಿಜಿಟಲ್ ಮಾದರಿಯಲ್ಲಿಯೂ ಪಾರ್ಕಿಂಗ್ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ. ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ರಸ್ತೆಗಳಲ್ಲಿ ಡಿಜಿಟಲ್ ನಾಮಫಲಕ ಅಳವಡಿಸಲಾಗಿದೆ. ವಾಹನಗಳ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಲಾಗಿದೆ.

ಕಬ್ಬನ್ ಪಾರ್ಕ್‌ನಲ್ಲಿ ವಾಹನ ನಿಷೇಧ; ಬೆಂಗಳೂರು ಪೊಲೀಸರ ವರದಿ ಕಬ್ಬನ್ ಪಾರ್ಕ್‌ನಲ್ಲಿ ವಾಹನ ನಿಷೇಧ; ಬೆಂಗಳೂರು ಪೊಲೀಸರ ವರದಿ

ಡಿಜಿಟಲ್ ಪಾರ್ಕಿಂಗ್ ಮೀಟರ್

ಡಿಜಿಟಲ್ ಪಾರ್ಕಿಂಗ್ ಮೀಟರ್

ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಶುಲ್ಕ ಪಾವತಿ ಮಾಡಲು ನಮ್ಮ ಬೆಂಗಳೂರು ಸ್ಮಾರ್ಟ್ ಪಾರ್ಕಿಂಗ್ (NBSP) ಎಂಬ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲಾಗಿದೆ. ವಾಹನವನ್ನು ಪಾರ್ಕಿಂಗ್ ಮಾಡಿ ಪಾರ್ಕಿಂಗ್ ಸಂಖ್ಯೆಯನ್ನು ಆ್ಯಪ್ ನಲ್ಲಿ ನಮೂದಿಸಿ, ಡಿಜಿಟಲ್ ಪಾರ್ಕಿಂಗ್ ಮೀಟರ್ ಮೂಲಕ ಪಾರ್ಕಿಂಗ್ ಶುಲ್ಕ ಪಾವತಿ ಮಾಡಬಹುದು.

ಅಗತ್ಯ ಮಾಹಿತಿ ಲಭ್ಯವಿದೆ

ಅಗತ್ಯ ಮಾಹಿತಿ ಲಭ್ಯವಿದೆ

ಯಾವ ರಸ್ತೆಯಲ್ಲಿ ವಾಹನ ನಿಲುಗಡೆಗೆ ಎಷ್ಟು ಸ್ಥಳ ಲಭ್ಯವಿದೆ, ಎಷ್ಟು ವಾಹನ ನಿಂತಿವೆ ಮುಂತಾದ ಮಾಹಿತಿಗಳನ್ನು ಪಡೆಯಲಯ ಪಾರ್ಕಿಂಗ್ ಸ್ಥಳದಲ್ಲಿ ಸೆನ್ಸಾರ್ ಅಳವಡಿಸಲಾಗಿದೆ. ಇನ್ನೂ ಎಷ್ಟು ವಾಹನಗಳ ನಿಲುಗಡೆಗೆ ಅವಕಾಶವಿದೆ ಎಂಬುದನ್ನು ಇದು ತೋರಿಸಲಿದೆ.

ವಾಹನಗಳ ಸುರಕ್ಷತೆಗೆ ಆದ್ಯತೆ

ವಾಹನಗಳ ಸುರಕ್ಷತೆಗೆ ಆದ್ಯತೆ

ಪಾರ್ಕಿಂಗ್ ಮಾಡಿದ ಸ್ಥಳದಲ್ಲಿ ವಾಹನಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ವಾಹನಗಳ ಕಳ್ಳತನ, ಜಖಂಗೊಳಿಸುವುದು ಸೇರಿದಂತೆ ಇತರ ಅಪರಾಧ ತಡೆಯಲು ವಾಹನಗಳ ಮೇಲೆ ಕಣ್ಗಾವಲು ಇರುತ್ತದೆ ಇದಕ್ಕಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

Recommended Video

8 ಜನ ರಾಜ್ಯಸಭಾ ಸದಸ್ಯರು ಅಮಾನತು !! | Oneindia Kannada
10 ರಸ್ತೆಗಳು ಯಾವುದು?

10 ರಸ್ತೆಗಳು ಯಾವುದು?

ಶನಿವಾರದಿಂದ ನಗರದ 10 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬಂದಿದೆ.

* ಕನ್ನಿಂಗ್ ಹ್ಯಾಮ್ ರಸ್ತೆ
* ಎಂ.ಜಿ.ರಸ್ತೆ
* ಕಸ್ತೂರು ಬಾ ರಸ್ತೆ
* ಸೆಂಟ್ ಮಾರ್ಕ್ಸ್ ರಸ್ತೆ
* ರೆಸಿಡೆನ್ಸಿ ರಸ್ತೆ
* ಮ್ಯೂಸಿಯಂ ಕ್ರಾಸ್ ರಸ್ತೆ
* ವಿಠ್ಠಲ್ ಮಲ್ಯ ರಸ್ತೆ
* ಮಲ್ಯ ಆಸ್ಪತ್ರೆ ರಸ್ತೆ
* ಚರ್ಚ್ ಸ್ಟ್ರೀಟ್
* ಅಲಿ ಅಸ್ಕರ್ ರಸ್ತೆ

English summary
But the Bruhat Bengaluru Mahanagara Palike (BBMP) introduced smart parking on 10 roads from September 19, 2020. Smart parking system will come up in 87 roads of the city soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X