• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2 ಉದ್ಯಾನದಲ್ಲಿ ಸೌರ ವಿದ್ಯುತ್ ಉತ್ಪಾದನೆ ಆರಂಭಿಸಿದ ಬಿಬಿಎಂಪಿ

|

ಬೆಂಗಳೂರು, ನವೆಂಬರ್ 19 : ಇದೇ ಮೊದಲ ಬಾರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಎರಡು ಉದ್ಯಾನವನಗಳಲ್ಲಿ ಸೋಲಾರ್ ಫಲಕವನ್ನು ಅಳವಡಿಸಿದೆ. ಇದರಿಂದಾಗಿ ಬೆಸ್ಕಾಂಗೆ ಪಾವತಿ ಮಾಡುವ ಸಾವಿರಾರು ರೂ. ವಿದ್ಯುತ್ ಬಿಲ್ ಉಳಿತಾಯವಾಗಲಿದೆ.

ಸೋಮವಾರ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮತ್ತು ಪದ್ಮನಾಭನಗರ ಕ್ಷೇತ್ರದ ಶಾಸಕ ಆರ್.ಅಶೋಕ್ ಅವರು ಜಯನಗರ 3ನೇ ಬಡಾವಣೆಯ ಯಡಿಯೂರು ವಾರ್ಡ್‌ನ 'ಸಂಜೀವಿನಿ ವನ', 'ಧನ್ವಂತರಿ ವನ' ದಲ್ಲಿಸೌರ ಫಲಕಗಳನ್ನು ಉದ್ಘಾಟಿಸಿದರು.

ಬೆಳಗಾವಿ : ಜಿಲ್ಲಾ ಆಸ್ಪತ್ರೆಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ

ಇದೇ ಮೊದಲ ಬಾರಿಗೆ ಬೃತಹ್ ಬೆಂಗಳೂರು ಮಹಾನಗರ ಪಾಲಿಕೆ ಯಡಿಯೂರು ವಾರ್ಡ್ (167) ವ್ಯಾಪ್ತಿಯ ಜಯನಗರ 3ನೇ ಬಡಾವಣೆಯ 4ನೇ ಮತ್ತು 5ನೇ ಮುಖ್ಯರಸ್ತೆ ನಡುವೆ ಇರುವ ಎರಡು ಉದ್ಯಾನದಲ್ಲಿ ಸೌರ ವಿದ್ಯುತ್ ಘಟಕವನ್ನು ಪಾಲಿಕೆಯ ಅನುದಾನದಲ್ಲಿ ಸ್ಥಾಪನೆ ಮಾಡಿದೆ.

ವಿಶ್ವದ ಅತಿದೊಡ್ಡ ಸೋಲಾರ್ ಪಾರ್ಕ್ ವಿಶೇಷತೆಗಳು

ಈಗಾಗಲೇ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಬಳಸಿಕೊಂಡು 'ಯಡಿಯೂರು ಜೈವಿಕ ಅನಿಲ ಘಟಕ'ದಲ್ಲಿ ದಿನನಿತ್ಯ 50 ಕಿಲೋವಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62

15 ಲಕ್ಷ ರೂ. ವೆಚ್ಚ

15 ಲಕ್ಷ ರೂ. ವೆಚ್ಚ

ಸುಮಾರು 15 ಲಕ್ಷ ರೂ.ಗಳ ವೆಚ್ಚದಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಲಾಗಿದೆ. ಇದರಿದ ಪ್ರತಿ ದಿನ 15 ಕಿಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇವುಗಳಿಂದ ಸಂಜೀವಿನಿ ವನ, ಧನ್ವಂತರಿ ವನದ ಮುಕ್ಕಾಲು ಕಿಲೋಮೀಟರ್ ಉದ್ದದ ವಾಯುವಿಹಾರ ಮಾರ್ಗ ಮತ್ತು ಮಹಾಕಾಯ ವ್ಯಾಯಾಮ ಕೇಂದ್ರಗಳ ಎಲ್ಲ ವಿದ್ಯುತ್ ದೀಪಗಳನ್ನು ಬೆಳಗಿಸಬಹುದಾಗಿದೆ. ಈ ಮೂಲಕ BESCOM ಸಂಸ್ಥೆಗೆ ಈ ಉದ್ಯಾನಗಳಿಂದ ಪ್ರತಿ ತಿಂಗಳು ಪಾಲಿಕೆ ಪಾವತಿಸುತ್ತಿರುವ 43 ಸಾವಿರ ರೂ. ಹಣ ಉಳಿತಾಯವಾಗಲಿದೆ.

ಹೆಚ್ಚಿನ ವಿದ್ಯುತ್ ಉತ್ಪಾದನೆ

ಹೆಚ್ಚಿನ ವಿದ್ಯುತ್ ಉತ್ಪಾದನೆ

ಮುಂದಿನ ಮೂರು ತಿಂಗಳಿನಲ್ಲಿ ಈ ಘಟಕವನ್ನು ವಿಸ್ತರಣೆ ಮಾಡಿ, 25 ಕಿಗಾವಾಟ್ ಸೌರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ಎಲ್ಲಾ ಯೋಜನೆಗಳು ಅನುಷ್ಠಾನಗೊಂಡ ನಂತರ ಬೆಸ್ಕಾಂಗೆ ಪಾಲಿಕೆ ಪಾವತಿಸುವ ಸುಮಾರು 3 ಲಕ್ಷ ರೂ. ಉಳಿತಾಯವಾಗಲಿದೆ.

ಕಸದಿಂದ ವಿದ್ಯುತ್ ಉತ್ಪಾದನೆ

ಕಸದಿಂದ ವಿದ್ಯುತ್ ಉತ್ಪಾದನೆ

ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಬಳಸಿ ಯಡಿಯೂರು ಜೈವಿಕ ಅನಿಲ ಘಟಕದಲ್ಲಿ ನಿತ್ಯ 50 ಕಿಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರಿಂದ ಯಡಿಯೂರು ವಾರ್ಡ್ ವ್ಯಾಪ್ತಿಯಲ್ಲಿರುವ 7 ಉದ್ಯಾನವನ, 3 ಕಿಲೋಮೀಟರ್ ಉದ್ದದ ಮಾದರಿ ಪಾದಚಾರಿ ಮಾರ್ಗಗಳಲ್ಲಿ ಇರುವ ವಿದ್ಯುತ್ ದೀಪಗಳನ್ನು ಮತ್ತು ಅಲಂಕಾರಿಕ ದೀಪಗಳನ್ನು ಬೆಳಗಿಸಲಾಗುತ್ತಿದ್ದು,1,75,000 ಗಳಷ್ಟು ವಿದ್ಯುತ್ ಶುಲ್ಕವನ್ನು ಉಳಿತಾಯ ಮಾಡಲಾಗುತ್ತಿದೆ.

ಯಡಿಯೂರು ವಾರ್ಡ್‌

ಯಡಿಯೂರು ವಾರ್ಡ್‌

ನವೆಂಬರ್ ಅಂತ್ಯದೊಳಗೆ ಯಡಿಯೂರು ಜೈವಿಕ ಅನಿಲ ಘಟಕದಲ್ಲಿ ನಿತ್ಯ 250 ಕಿಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ಶೀಘ್ರದಲ್ಲಿಯೇ ಯಡಿಯೂರು ವಾರ್ಡ್‌ ಅನ್ನು ಬೆಸ್ಕಾಂ ವಿದ್ಯುತ್ ಮುಕ್ತ ವಾರ್ಡ್‌ ಆಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bruhat Bengaluru Mahanagara Palike (BBMP) for the first time in Bengaluru installed solar power units at two parks in Jayanagar. The two parks are Sanjeevini and Dhanvantari parks in Yediyur ward.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more