• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ

|
Google Oneindia Kannada News

ಬೆಂಗಳೂರು, ಮಾರ್ಚ್ 6: ಬಿಬಿಎಂ ಪೂರ್ವ ವಲಯದ ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಶುಕ್ರವಾರ ಪೂರ್ವ ವಲಯ ವ್ಯಾಪ್ತಿಯಲ್ಲಿ, ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ಸಾರ್ವಜನಿಕ ಸ್ಥಳ ಮತ್ತು ಶಾಲಾ ವ್ಯಾಪ್ತಿಯ 100 ಮೀಟರ್ ಒಳಗೆ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು.

ನಗರದ ಸಿ.ಎಚ್.ಎಂ.ರಸ್ತೆ, 100 ಅಡಿ ರಸ್ತೆ, 12ನೇ ಮುಖ್ಯ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ಇಂದಿರಾನಗರ, 4ನೇ ಅಡ್ಡ ರಸ್ತೆ, ಹೆಚ್.ಆರ್.ಬಿ ಲೇಔಟ್, ಸರ್ವಜ್ಞನಗರ, ರೇಸ್ ಕೋರ್ಸ್ ರಸ್ತೆ, ಕೆ.ಜೆ.ಲೇಔಟ್, ಸಂಜಯ್‌ನಗರ ಮುಖ್ಯ ರಸ್ತೆ ಸೇರಿದಂತೆ ಒಟ್ಟು 63 ಪ್ರಕರಣಗಳನ್ನು ದಾಖಲಿಸಲಾಗಿದ್ದು, 23,700 ದಂಡ ವಿಧಿಸಲಾಗಿದೆ.

ಕೊಟ್ಟಾ ಕಾಯ್ದೆ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದ ಸಾರ್ವಜನಿಕರಿಗೆ ಹಾಗೂ ಬಿಡಿಬಿಡಿಯಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿ ಧೂಮಪಾನಕ್ಕೆ ಸಹಕಾರ ನೀಡುತ್ತಿದ್ದ ಉದ್ದಿಮೆದಾರರಿಗೆ ದಂಡ ವಿಧಿಸಲಾಯಿತು.

ಮುಂದಿನ ದಿನಗಳಲ್ಲಿ ಪುನಾರಾವರ್ತಿಸಿದ್ದಲ್ಲಿ ಕೋಟ್ಟಾ ಕಾಯ್ದೆಯಡಿಯಲ್ಲಿ ಕ್ರಿಮಿನಲ್ ಮೊಖದ್ದಮೆ ಹೂಡಲಾಗುವುದು ಮತ್ತು ವ್ಯಾಪಾರ ಪರವಾನಗಿಯನ್ನು ರದ್ದು ಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

English summary
BBMP Inspection And Fined On Tobacco Selling Shops. 23,700 fine collected by bbmp health officers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X