ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ: quarantineಗೆ 17 ಹೋಟೆಲ್‌ ಗುರುತಿಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಮಾರ್ಚ್ 29: ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬೆಂಗಳೂರು ನಗರವೇ ನಂಬರ್ 1. ಬಿಬಿಎಂಪಿ ಮಾರಣಾಂತಿಕ ಸೋಂಕು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೊರೊನಾ ಸೋಂಕು ತಗುಲಿರುವ ಶಂಕೆ ಇರುವವರಿಗೆ quarantine ವ್ಯವಸ್ಥೆ ಮಾಡಲು ಬೆಂಗಳೂರು ನಗರದಲ್ಲಿ 17 ಹೋಟೆಲ್‌ಗಳನ್ನು ಗುರುತಿಸಲಾಗಿದೆ. ಹೋಟೆಲ್‌ಗಳಲ್ಲಿ quarantine ಮಾಡುವ ಮೂಲಕ ಅವರು ಇತರ ವ್ಯಕ್ತಿಗಳ ಸಂಪರ್ಕಕ್ಕೆ ಬರದಂತೆ ಮಾಡಲಾಗುತ್ತದೆ.

ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್ ಈ ಕೊರೊನಾ ವೆಬ್ ತಾಣಗಳು ಫೇಕ್ ಎಂದ ಸೈಬರ್ ಕ್ರೈಂ ಸೆಲ್

ಬಿಬಿಎಂಪಿ ಮೇಯರ್ ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದಾರೆ. ಯಾವ-ಯಾವ ಹೋಟೆಲ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಟ್ಟಿಯನ್ನು ಸಹ ಹಾಕಿದ್ದಾರೆ. ಹೋಟೆಲ್‌ಗಳನ್ನು ಬಳಸಿಕೊಂಡು ನಗರದಲ್ಲಿ ವೈರಸ್ ಹರಡುವುದನ್ನು ತಡೆಯಲು ಬಿಬಿಎಂಪಿ ಮುಂದಾಗಿದೆ.

ನಿಜವಾಗಿಯೂ ಕೊರೊನಾ ಭಾರತದಲ್ಲಿ 3ನೇ ಹಂತದಲ್ಲಿದೆಯೇ? ನಿಜವಾಗಿಯೂ ಕೊರೊನಾ ಭಾರತದಲ್ಲಿ 3ನೇ ಹಂತದಲ್ಲಿದೆಯೇ?

ಕೊರೊನಾ ಸೋಂಕು ದೃಢಪಟ್ಟಿರುವ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು ಮನೆಯಲ್ಲಿ quarantine ನಲ್ಲಿ ಇಡಬೇಕಿದೆ. ಇಂತಹ ಸಮಯದಲ್ಲಿ ಅವರಿಗೆ ಜ್ವರ, ಕೆಮ್ಮು, ನೆಗಡಿಯಂತಹ ರೋಗ ಲಕ್ಷಣಗಳು ಕಂಡು ಬಂದಲ್ಲಿ ಅವರಿಗೆ ಶೀಘ್ರವಾಗಿ ಚಿಕಿತ್ಸೆ ನೀಡಬೇಕಾಗಿರುತ್ತದೆ.

ಕೊರೊನಾ ಸೋಂಕಿನ ರೋಗಿಗಳಿಗೆ ನೀಡುವ ಆಹಾರಗಳೇನು? ಕೊರೊನಾ ಸೋಂಕಿನ ರೋಗಿಗಳಿಗೆ ನೀಡುವ ಆಹಾರಗಳೇನು?

ಬೇರ್ಪಡಿಸಿ ಇಡುವುದು

ಬೇರ್ಪಡಿಸಿ ಇಡುವುದು

ಸೋಂಕು ತಗುಲಿರುವ ಶಂಕಿತ ವ್ಯಕ್ತಿಗಳನ್ನು ಬೇರ್ಪಡಿಸಿ, ಪ್ರತ್ಯೇಕವಾಗಿಡಲು ಪ್ರಥಮ ಹಂತವಾಗಿ 17 ಹೋಟೆಲ್‌ಗಳನ್ನು ಗುರುತಿಸಲಾಗಿದೆ. ಈ ಹೋಟೆಲ್‌ಗಳಲ್ಲಿ ತಂಗುವ ಸೋಂಕಿತ ವ್ಯಕ್ತಿಗೆ ಕಾಲ ಕಾಲಕ್ಕೆ ಉಪಹಾರ ಮತ್ತು ಭೋಜನ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಹೋಟೆಲ್‌ಗೆ ಹಣವನ್ನು ಸಹ ಪಾವತಿ ಮಾಡಲಾಗುತ್ತದೆ.

ಉಪ/ಉಪಹಾರದ ವ್ಯವಸ್ಥೆ

ಉಪ/ಉಪಹಾರದ ವ್ಯವಸ್ಥೆ

ವಾಣಿಜ್ಯ ಕೈಗಾರಿಕೆ ಇಲಾಖೆಯಿಂದ ನೇಮಿಸಲಾಗಿರುವ ಅಧಿಕಾರಿ/ನೌಕರರು ಈ ಕುರಿತು ಪರಿಶೀಲಿಸಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು. ಅವಶ್ಯಕತೆ ಇದ್ದರೆ ಪಾಲಿಕೆಯ ಆಯಾ ಕಂದಾಯ ಅಧಿಕಾರಿಗಳ ಸಹಕಾರ ಪಡೆಯಬಹುದು ಎಂದು ಸೂಚನೆ ನೀಡಲಾಗಿದೆ.

ಹೋಟೆಲ್‌ಗಳ ಬಳಕೆ ಹೇಗೆ

ಹೋಟೆಲ್‌ಗಳ ಬಳಕೆ ಹೇಗೆ

ಕೋವಿಡ್-19 ಸೋಂಕು ತಗಲಿರಬಹುದಾದದ ಶಂಕಿತ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿ ವರದಿ ಬರುವ ತನಕ (ಗರಿಷ್ಠ 2 ದಿನ) ಇತರರ ಜೊತೆ ಸೇರದಂತೆ ಪ್ರತ್ಯೇಕವಾಗಿ ಇಡಲು ಹೋಟೆಲ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.

ಹೋಟೆಲ್‌ನಲ್ಲಿ ಎಸಿ ಇರಬಾರದು

ಹೋಟೆಲ್‌ನಲ್ಲಿ ಎಸಿ ಇರಬಾರದು

ಸದರಿ ಹೋಟೆಲ್‌ನಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರಬಾರದು. ಇಂತಹ ವ್ಯವಸ್ಥೆ ಹೋಟೆಲ್‌ನಲ್ಲಿದ್ದರೆ ಬೇರೆ ಹೋಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸಬೇಕು. ಉಪಹಾರ ಮತ್ತು ಊಟವನ್ನು ನೀಡುವಾಗ ಬಳಸಿ ಬಿಸಾಕುವಂತಹ ಪ್ಲೇಟ್‌ಗಳನ್ನು ಬಳಕೆ ಮಾಡಬೇಕು.

ಸದರಿ ಹೋಟೆಲ್‌ಗಳಲ್ಲಿ ತಂಗುವ ವ್ಯಕ್ತಿಗಳ ಸಂಖ್ಯೆಗೆ ಅನುಗುಣವಾಗಿ ಹಣವನ್ನು ಪಾವತಿ ಮಾಡಲಾಗುತ್ತದೆ. ಪ್ರತಿ ಕೊಠಡಿ ಊಟ/ಉಪಹಾರ ದರವನ್ನು ಅಧ್ಯಕ್ಷರು ರಾಜ್ಯ ಕಾರ್ಯಕಾರಣಿ ಸಮಿತಿ ಕರ್ನಾಟ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ನಿರ್ಧರಿಸಿದಂತೆ ನೀಡಲಾಗುತ್ತದೆ.

English summary
Bruhat Bengaluru Mahanagara Palike (BBMP) identified 17 hotels in Bengaluru city to quarantine COVID-19 patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X