ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1200 ಕೋಟಿಗೂ ಅಧಿಕ ಆಸ್ತಿ ತೆರಿಗೆ ಬಾಕಿ, 20 ಸಂಸ್ಥೆ ಹೆಸರು ಬಹಿರಂಗ

|
Google Oneindia Kannada News

ಬೆಂಗಳೂರು, ಅ. 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಯ ಎಂಟು ವಲಯಗಳಲ್ಲಿ ಸುಮಾರು 100ಕ್ಕೂ ಅಧಿಕ ಆಸ್ತಿ ತೆರಿಗೆ ಬಾಕಿದಾರರನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಕೋಟ್ಯಂತರ ರುಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪಟ್ಟಿ ಪೈಕಿ ಟಾಪ್ 20 ಸಂಸ್ಥೆಗಳ ಹೆಸರು ಪ್ರಕಟಿಸಲಾಗಿದೆ.

ಬಿಬಿಎಂಪಿಯ 8 ವಲಯಗಳಿಂದ ಸುಮಾರು 1200 ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿಯಾಗಬೇಕಿದೆ. ಈಗಾಗಲೇ ಎಲ್ಲಾ ಸಂಸ್ಥೆಗಳಿಗೂ ಈ ಕುರಿತಂತೆ ನೋಟಿಸ್ ನೀಡಲಾಗಿದೆ.

ಕೊರೊನಾವೈರಸ್ ದೆಸೆಯಿಂದ ಉಂಟಾಗಿರುವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿರುವ ಬೆಂಗಳೂರಿನ ನಾಗರಿಕರಿಗಿಂತ ಹೆಚ್ಚು ಆರ್ಥಿಕ ಸಂಕಷ್ಟದಿಂದ ಬಿಬಿಎಂಪಿ ನಲುಗಿದೆ. ಹೀಗಾಗಿ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆ ಹೆಚ್ಚಳ ಮಾಡಲು ಮುಂದಾಗಿರುವ ಸುದ್ದಿ ಬಂದಿದೆ.

ಆನ್ ಲೈನ್ ಮೂಲಕ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವುದು ಹೇಗೆ? ಆನ್ ಲೈನ್ ಮೂಲಕ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವುದು ಹೇಗೆ?

ಈ ಬಾರಿ ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಮೇ 31ರ ತನಕ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಹಲವಾರು ಮಾಲೀಕರು ತೆರಿಗೆ ಕಟ್ಟಿಲ್ಲ. ಬಾಡಿಗೆದಾರರು ಇಲ್ಲದ ಕಾರಣ ಮುಂದಿನ ವರ್ಷ ದಂಡದ ಮೊತ್ತದ ಸಹಿತ ತೆರಿಗೆ ಕಟ್ಟಲು ಚಿಂತನೆ ನಡೆಸುತ್ತಿದ್ದಾರೆ.
ಆದರೆ, ಈ ನಡುವೆ ಭಾರಿ ಮೊತ್ತ ಉಳಿಸಿಕೊಂಡವರಿಗೆ ಚುರುಕು ಮುಟ್ಟಿಸಲು ಪಾಲಿಕೆ ಮುಂದಾಗಿದೆ

ಆಸ್ತಿ ತೆರಿಗೆ ಬಾಕಿ ಉಳಿದರೆ? ಮುಂದೇನು

ಆಸ್ತಿ ತೆರಿಗೆ ಬಾಕಿ ಉಳಿದರೆ? ಮುಂದೇನು

ನೀವೇನಾದ್ರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ರೆ ಈ ಕೂಡಲೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ಕಠಿಣ ಕ್ರಮಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗುತ್ತಿದೆ.

ಆಸ್ತಿ ತೆರಿಗೆ ವಂಚನೆ ಮಾಡಿದವರ ಮನೆ, ಕಚೇರಿ ಮುಂದೆ ತಮಟೆ ಬಾರಿಸಿ, ಘೋಷಣೆ ಕೂಗುವ ಪ್ರಕ್ರಿಯೆ ಜೊತೆಗೆ ಸಮಸ್ತ ಆಸ್ತಿ ಜಪ್ತಿ ಮಾಡಲು ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮನೆ, ಕಟ್ಟಡ, ವಾಣಿಜ್ಯ ಕಟ್ಟಡ ಎಲ್ಲವನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಆದೇಶ ಸಿಕ್ಕಿದೆ. ಸದ್ಯದಲ್ಲೇ ಬಾಕಿದಾರರಿಗೆ ವಾರೆಂಟ್ ಜಾರಿ ಮಾಡುವಂತೆ ಎಲ್ಲಾ ವಲಯಗಳ ಅಧಿಕಾರಿಗಳಿಗೆ ಕಮಿಷನರ್ ಮಂಜುನಾಥ್ ಪ್ರಸಾದ್ ಸೂಚನೆ ನೀಡಿದ್ದಾರೆ.

ಬೆಂಗಳೂರಿಗರೇ ಗಮನಿಸಿ, ಆಸ್ತಿ ತೆರಿಗೆ ದರ ಹೆಚ್ಚಳ ಸಾಧ್ಯತೆ!ಬೆಂಗಳೂರಿಗರೇ ಗಮನಿಸಿ, ಆಸ್ತಿ ತೆರಿಗೆ ದರ ಹೆಚ್ಚಳ ಸಾಧ್ಯತೆ!

ತೆರಿಗೆ ಸಂಗ್ರಹ ಕುಸಿತ ಕಂಡಿದೆ

ತೆರಿಗೆ ಸಂಗ್ರಹ ಕುಸಿತ ಕಂಡಿದೆ

2020ರ ಸೆಪ್ಟೆಂಬರ್ 14ರ ತನಕ ಬಿಬಿಎಂಪಿ 1,916 ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ 2000 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಕೋವಿಡ್ ಪರಿಸ್ಥಿತಿ ಕಾರಣ ತೆರಿಗೆ ಸಂಗ್ರಹ ಕುಸಿತ ಕಂಡಿದೆ. ಆದಾಯ ತೆರಿಗೆಯೇ ಪಾಲಿಕೆಯ ಬಹುದೊಡ್ಡ ಆದಾಯದ ಮೂಲವಾಗಿದೆ. ಪಾಲಿಕೆ ಆದಾಯ ಹೆಚ್ಚಿಸಲು ಗಮನಹರಿಸುವಂತೆ ಅಧಿಕಾರಿಗಳಿಗೆ ಗೌರವ್ ಗುಪ್ತ ಮೌಖಿಕ ಆದೇಶ ನೀಡಿದ್ದರು. ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಸಿದ್ಧಪಡಿಸಲು ಆಯುಕ್ತರು ಈಗ ಸೂಚನೆ ನೀಡಿದ್ದಾರೆ.

ಆರ್ಥಿಕವಾಗಿ ಬಳಲಿರುವ ಬಿಬಿಎಂಪಿ

ಆರ್ಥಿಕವಾಗಿ ಬಳಲಿರುವ ಬಿಬಿಎಂಪಿ

ಆರ್ಥಿಕವಾಗಿ ಬಳಲಿರುವ ಬಿಬಿಎಂಪಿಗೆ ಸದ್ಯಕ್ಕೆ ಆಸ್ತಿ ತೆರಿಗೆ ವಸೂಲಿ, ಆಸ್ತಿ ತೆರಿಗೆ ದರ ಹೆಚ್ಚಳ ಕೊನೆ ಅಸ್ತ್ರವಾಗಿದೆ. ಬಾಕಿ ತೆರಿಗೆ ವಸೂಲಿ ಮಾಡಲೇಬೇಕಾದ ಸ್ಥಿತಿಯಲ್ಲಿ ಬಿಬಿಎಂಪಿ ಬಿಬಿಎಂಪಿಯ 8 ವಲಯಗಳಿಂದ ಟಾಪ್ 100 ಆಸ್ತಿ ತೆರಿಗೆ ಬಾಕಿದಾರರ ಪಟ್ಟಿ ಸಿದ್ಧಪಡಿಸಿಕೊಂಡಿದೆ.

ಪ್ರತಿ ವಲಯದಿಂದ ಟಾಪ್ 100 ಬಾಕಿದಾರರಂತೆ 8 ವಲಯಗಳಿಂದ 800 ಮಂದಿಯ ಪಟ್ಟಿ ಸಿದ್ಧವಾಗಿದ್ದು, ಎಲ್ಲರಿಗೂ ವಾರೆಂಟ್ ನೀಡಿ ಮುಂದಿನ ಕ್ರಮ ಜರುಗಿಸಲಾಗುತ್ತದೆ. 20102-20ರ ಬಾಕಿ ಆಸ್ತಿ ತೆರಿಗೆ ಹೊರತುಪಡಿಸಿ 620 ಕೋಟಿ ಆಸ್ತಿ ತೆರಿಗೆ ವಸೂಲಾಗಬೇಕಿದೆ

ಆಸ್ತಿ ತೆರಿಗೆ ಸಂಗ್ರಹ ಪ್ರತಿ ವರ್ಷದ ಅವ್ಯವಹಾರ: ಎಎಪಿಆಸ್ತಿ ತೆರಿಗೆ ಸಂಗ್ರಹ ಪ್ರತಿ ವರ್ಷದ ಅವ್ಯವಹಾರ: ಎಎಪಿ

ಟಾಪ್ 100 ಬಾಕಿದಾರರಿಂದ 84,72,31,761 ರೂಪಾಯಿ ಬರಬೇಕಿದೆ

ಟಾಪ್ 100 ಬಾಕಿದಾರರಿಂದ 84,72,31,761 ರೂಪಾಯಿ ಬರಬೇಕಿದೆ

ಟಾಪ್ 100 ಬಾಕಿದಾರರಿಂದ 84,72,31,761 ರೂಪಾಯಿ ವಸೂಲಾಗಬೇಕಿದೆ, ಬೆಂಗಳೂರಿನ ಟಾಪ್ 20 ಆಸ್ತಿ ತೆರಿಗೆ ವಂಚನೆ ಮಾಡಿದವರ ಲಿಸ್ಟ್ ಇಲ್ಲಿದೆ.

1. M/s ಅಭಿಷೇಕ್ ಡೆವಲಪರ್ಸ್

- ಬಾಕಿ ಆಸ್ತಿ ತೆರಿಗೆ - 13,55,56,552 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2017-18
2 ಎಷ್ಟು ವರ್ಷದ ಬಾಕಿ

2. MFAR ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್

- ಬಾಕಿ ಆಸ್ತಿ ತೆರಿಗೆ - 9,66,63,504 ರೂ.
- ಖಾತಾ ಸರ್ವೆ ನಂಬರ್ - 114/2 to 5,115/1 to 3,116/3 to 6,117/1, 121/1,2
- ಕಡೆ ಬಾರಿ ಪಾವತಿಸಿರುವ ತೆರಿಗೆ - 2015-16
- ಎಷ್ಟು ವರ್ಷದ ಬಾಕಿ - 4

3. M/S. RMZ ಇಕೊ ವರ್ಲ್ಡ್ ಇನ್ಫ್ರಾಸ್ಟ್ರಕ್ಚರ್ ಫ್ರೈವೇಟ್ ಲಿಮಿಟೆಡ್
(ಆದರ್ಶ್ ಪ್ರೈಮ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್)

- ಬಾಕಿ ಆಸ್ತಿ ತೆರಿಗೆ - 6,64,43,049 ರೂ.
- ಖಾತಾ ಸರ್ವೆ ನಂಬರ್ - 286
- ಕಡೆ ಬಾರಿ ಪಾವತಿಸಿರುವ ತೆರಿಗೆ - 2016-17
- ಎಷ್ಟು ವರ್ಷದ ಬಾಕಿ - 3

4. ಶಾಲೆಟ್ (CHALET) ಹೋಟೆಲ್

- ಬಾಕಿ ಆಸ್ತಿ ತೆರಿಗೆ 2,67,75,472-ರೂ.
- ಖಾತಾ ಸರ್ವೆ ನಂಬರ್ - 75,76,85,86,87,88 ಮತ್ತು ಸಿ.ಎ ಪ್ಲಾಟ್
- ಕಡೆ ಬಾರಿ ಪಾವತಿಸಿರುವ ತೆರಿಗೆ - 2017-18
- ಎಷ್ಟು ವರ್ಷದ ಬಾಕಿ - 2

5 . ಎ.ಎಂ. ರಾಮರಾಜು

- ಬಾಕಿ ಆಸ್ತಿ ತೆರಿಗೆ 2,50,45,341-ರೂ.
- ಖಾತಾ ಸರ್ವೆ ನಂಬರ್ - 1742/1638/1355/172/1/75
- ಕಡೆ ಬಾರಿ ಪಾವತಿಸಿರುವ ತೆರಿಗೆ - 2018-19
- ಎಷ್ಟು ವರ್ಷದ ಬಾಕಿ - 2

ಪಟ್ಟಿಯಲ್ಲಿ ಸರ್ಕಾರಿ ಸಂಸ್ಥೆಗಳು ಕೂಡಾ ಇವೆ

ಪಟ್ಟಿಯಲ್ಲಿ ಸರ್ಕಾರಿ ಸಂಸ್ಥೆಗಳು ಕೂಡಾ ಇವೆ

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಟಾಪ್ ಪಟ್ಟಿಯಲ್ಲಿ ಸರ್ಕಾರಿ ಸಂಸ್ಥೆಗಳು ಕೂಡಾ ಇವೆ.
6. ಡಿವಿಶನಲ್ ಕಂಟ್ರೋಲರ್ ಕರ್ನಾಟಕ ಸ್ಟೇಟ್ ಟ್ರಾನ್ಸ್ಪೋರ್ಟ್ ಡಿಪಾರ್ಟ್ಮೆಂಟ್

- ಬಾಕಿ ಆಸ್ತಿ ತೆರಿಗೆ - 1,74,26,034 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2016-17
- ಎಷ್ಟು ವರ್ಷದ ಬಾಕಿ - 3

7. ಬೆಂಗಳೂರು ಟರ್ಫ್ ಕ್ಲಬ್

- ಬಾಕಿ ಆಸ್ತಿ ತೆರಿಗೆ - 1,61,63,100 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2016-17
- ಎಷ್ಟು ವರ್ಷದ ಬಾಕಿ - 3

8. M/S ಸುಪ್ರೀಂ ಬಿಲ್ಡ್ ಕ್ಯಾಪ್ ಲಿಮಿಟೆಡ್

- ಬಾಕಿ ಆಸ್ತಿ ತೆರಿಗೆ - 1,61,58,650 ರೂ.
- ಖಾತಾ ಸರ್ವೆ ನಂಬರ್ - 1
- ಕಡೆ ಬಾರಿ ಪಾವತಿಸಿರುವ ತೆರಿಗೆ - 2018-19
- ಎಷ್ಟು ವರ್ಷದ ಬಾಕಿ - 1

9. ಗಂಗಾಧರ್. ಟಿ, ರಾಮಚಂದ್ರ, ತನಂದ್. ಎಸ್.ಟಿ ಮತ್ತು ಮಂಜುನಾಥ್. ಟಿ

- ಬಾಕಿ ಆಸ್ತಿ ತೆರಿಗೆ - 1,54,02,434 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2018-19
- ಎಷ್ಟು ವರ್ಷದ ಬಾಕಿ - 1

10 . ಪೊಲೀಸ್ ಇಲಾಖೆ, ಡಿಸಿಪಿ ಉತ್ತರ

- ಬಾಕಿ ಆಸ್ತಿ ತೆರಿಗೆ - 1,49,68,550 ರೂ.
- ಖಾತಾ ಸರ್ವೆ ನಂಬರ್ - 91
- ಕಡೆ ಬಾರಿ ಪಾವತಿಸಿರುವ ತೆರಿಗೆ - 2009-10
- ಎಷ್ಟು ವರ್ಷದ ಬಾಕಿ - 10

11. ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್​ (BMRCL)

- ಬಾಕಿ ಆಸ್ತಿ ತೆರಿಗೆ - 1,49,37,648 ರೂ.
- ಖಾತಾ ಸರ್ವೆ ನಂಬರ್ - 1/12
- ಕಡೆ ಬಾರಿ ಪಾವತಿಸಿರುವ ತೆರಿಗೆ - 2016-17
- ಎಷ್ಟು ವರ್ಷದ ಬಾಕಿ - 3

12. ಗುಡ್​ ಶೆಫರ್ಡ್​​ ಕಾನ್ವೆಂಟ್​

- ಬಾಕಿ ಆಸ್ತಿ ತೆರಿಗೆ - 1.26,19,167 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2008-09
- ಎಷ್ಟು ವರ್ಷದ ಬಾಕಿ - 11

13. ಡಿಪೊ ಮ್ಯಾನೇಜರ್ ಮಹಾನಗರ ಸಾರಿಗೆ 20ನೇ ಹಂತ

- ಬಾಕಿ ಆಸ್ತಿ ತೆರಿಗೆ - 1,23,70,158 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2016-17
- ಎಷ್ಟು ವರ್ಷದ ಬಾಕಿ - 3

14. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು

- ಬಾಕಿ ಆಸ್ತಿ ತೆರಿಗೆ - 1,21,44,228 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2016-17
- ಎಷ್ಟು ವರ್ಷದ ಬಾಕಿ - 3

Recommended Video

ಮೋದಿ ಕೊಟ್ರು ವಿಶೇಷ ಸಲಹೆ | Oneindia Kannada
800ಕ್ಕೂ ಅಧಿಕ ತೆರಿಗೆ ಬಾಕಿದಾರರು

800ಕ್ಕೂ ಅಧಿಕ ತೆರಿಗೆ ಬಾಕಿದಾರರು

15. ಹರಿಶ್ಚಂದ್ರ ಶೆಟ್ಟಿ ( ಲೆಸ್ಸಿ) ಜೆ.ಸಿ ರೋಡ್​

- ಬಾಕಿ ಆಸ್ತಿ ತೆರಿಗೆ - 1,18,48,382 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2012-13
- ಎಷ್ಟು ವರ್ಷದ ಬಾಕಿ - 7

16. ಬೆಂಗಳೂರು ಮೆಟ್ರೋ ರೈಲ್​​ ಕಾರ್ಪೊರೇಶನ್, ನಾಗಸಂದ್ರ ನ್ಯಾಶನಲ್ ಹೈವೆ

- ಬಾಕಿ ಆಸ್ತಿ ತೆರಿಗೆ - 1,15,53,616 ರೂ.
- ಖಾತಾ ಸರ್ವೆ ನಂಬರ್ - 6
- ಕಡೆ ಬಾರಿ ಪಾವತಿಸಿರುವ ತೆರಿಗೆ - 2015-16
- ಎಷ್ಟು ವರ್ಷದ ಬಾಕಿ - 4

17. M/S ಆ್ಯಡಮ್ಸ್​ ಬಿಲ್ಡರ್ಸ್​​ ಪ್ರೈ.ಲಿ

- ಬಾಕಿ ಆಸ್ತಿ ತೆರಿಗೆ - 1,10,66,978 ರೂ.
- ಖಾತಾ ಸರ್ವೆ ನಂಬರ್ - 980
- ಕಡೆ ಬಾರಿ ಪಾವತಿಸಿರುವ ತೆರಿಗೆ - 2017-18
- ಎಷ್ಟು ವರ್ಷದ ಬಾಕಿ - 2

18. ಸೋಲ್​ ಸ್ಪೇಸ್​ ಪ್ರಾಜೆಕ್ಟ್​ ಲಿಮಿಟೆಡ್

- ಬಾಕಿ ಆಸ್ತಿ ತೆರಿಗೆ - 93,82,968 ರೂ.
- ಖಾತಾ ಸರ್ವೆ ನಂಬರ್ - 5/1
- ಕಡೆ ಬಾರಿ ಪಾವತಿಸಿರುವ ತೆರಿಗೆ - 2017-18
- ಎಷ್ಟು ವರ್ಷದ ಬಾಕಿ - 2

19. ಬಿಎಂಟಿಸಿ ನಿರ್ದೇಶಕರು, ಜಯನಗರ 4ನೇಹಂತ

- ಬಾಕಿ ಆಸ್ತಿ ತೆರಿಗೆ - 92,86,872 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2016-17
- ಎಷ್ಟು ವರ್ಷದ ಬಾಕಿ - 3

20. ಗುಡ್​ ಶೆಫರ್ಡ್​ ಕಾನ್ವೆಂಟ್​​ ಮ್ಯೂಸಿಯಂ ರಸ್ತೆ

- ಬಾಕಿ ಆಸ್ತಿ ತೆರಿಗೆ - 91,59,755 ರೂ.
- ಕಡೆ ಬಾರಿ ಪಾವತಿಸಿರುವ ತೆರಿಗೆ - 2008-09
- ಎಷ್ಟು ವರ್ಷದ ಬಾಕಿ - 11

English summary
BBMP has released a list of the top 100 property tax defaulters in each of its 8 zones. Tax dues stand at Rs 1200 Crore. Here is the list of top 20 Property tax defaulters name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X