ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ ಮೇಲ್ಸೇತುವೆ ಟ್ರಾಫಿಕ್ ಕಡಿಮೆ ಮಾಡಲು ಕ್ರಮ

|
Google Oneindia Kannada News

ಬೆಂಗಳೂರು, ಜೂನ್ 29: ಹೆಬ್ಬಾಳ ಮೇಲ್ಸೇತುವೆ ಮೇಲೆ ಅತಿಯಾದ ಟ್ರಾಫಿಕ್ ಕಡಿಮೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಇದರಿಂದ ಈ ಪ್ರದೇಶದಲ್ಲಿ ಟ್ರಾಫಿಕ್ ಕಿರಿಕಿರಿ ಕಡಿಮೆಯಾಗುವ ಸಾಧ್ಯತೆ ಇದೆ.

ಬಿಬಿಎಂಪಿಯ ಆರೋಗ್ಯ ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತ ಕೆವಿ ತ್ರಿಲೋಕ್ ಚಂದ್ರ ಈ ವಿಚಾರ ತಿಳಿಸಿದ್ದಾರೆ. ಹೆಬ್ಬಾಳ ಹಲವು ಭಾಗಗಳನ್ನು ಸಂಪರ್ಕಿಸುವ ಪ್ರಮುಖ ಕೇಂದ್ರವಾಗಿದೆ. ಅದರಲ್ಲೂ ಪೀಕ್ ಅವರ್‌ನಲ್ಲಿ ಇಲ್ಲಿ ಟ್ರಾಫಿಕ್ ವಿಪರೀತವಾಗಿರುತ್ತದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಅಂತರರಾಜ್ಯ ಸಂಚಾರ ಮತ್ತು ಅನೇಕ ವಿಲೀನ ರಸ್ತೆಗಳು ಇಲ್ಲಿ ಕೂಡವುದೇ ಮುಖ್ಯ ಕಾರಣ ಎಂದಿದ್ದಾರೆ.

ಬಿಬಿಎಂಪಿ, ಸಂಚಾರಿ ಪೊಲೀಸ್ ಆಯುಕ್ತರಿಂದ ರಾತ್ರಿ ಸಿಟಿ ರೌಂಡ್ಸ್!ಬಿಬಿಎಂಪಿ, ಸಂಚಾರಿ ಪೊಲೀಸ್ ಆಯುಕ್ತರಿಂದ ರಾತ್ರಿ ಸಿಟಿ ರೌಂಡ್ಸ್!

"ಫ್ಲೈ ಓವರ್ ಮೇಲಿನ ವಾಹನ ದಟ್ಟಣೆ ಕಡಿಮೆ ಮಾಡಲು, ಟ್ರಾಫಿಕ್ ಎಂಜಿನಿಯರಿಂಗ್ ಮಧ್ಯಸ್ಥಿಕೆಗಳು ಬೇಕಾಗುತ್ತದೆ. ಎಲಿವೇಟೆಡ್ ಕಾರಿಡಾರ್ ನಲ್ಲಿ ಗಮ್ಯಸ್ಥಾನವನ್ನು ಸೂಚಿಸುವ ಸ್ಪಷ್ಟ ಸಂಕೇತಗಳನ್ನು ಅಳವಡಿಸಬೇಕು. ಈಗ, ರಾಂಪ್‌ನ ಆರಂಭದಲ್ಲಿ, ಮೂರು ಮಾರ್ಗಗಳಾಗಿ ವಿಭಜಿಸಲ್ಪಟ್ಟಿರುವುದರಿಂದ ಯಾವ ಮಾರ್ಗ ತೆಗೆದುಕೊಳ್ಳಬೇಕು ಎಂಬ ಬಗ್ಗೆ ವಾಹನ ಬಳಕೆದಾರರಲ್ಲಿ ಗೊಂದಲವಿದೆ. ಒಂದು ಬೆಂಗಳೂರು ನಗರದ ಕಡೆಗೆ, ಎರಡನೆಯದು ಹೆಣ್ಣೂರು ಕಡೆಗೆ ಮತ್ತು ಮೂರನೇ ತುಮಕೂರು ರಸ್ತೆ ಅಥವಾ ಹೊರ ವರ್ತುಲ ರಸ್ತೆ ಕಡೆಗೆ" ಎಂದು ಅವರು ಹೇಳಿದರು.

ಮಾರ್ಗದ ಗೊಂದಲದಿಂದ ಟ್ರಾಫಿಕ್ ಸಮಸ್ಯೆ ತೀವ್ರ

ಮಾರ್ಗದ ಗೊಂದಲದಿಂದ ಟ್ರಾಫಿಕ್ ಸಮಸ್ಯೆ ತೀವ್ರ

ಗೊಂದಲ ಮತ್ತು ಲೇನ್ ಶಿಸ್ತಿನ ಕೊರತೆ ಟ್ರಾಫಿಕ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಸಮಸ್ಯೆಯ ಪರಿಶೀಲನೆಯ ನಂತರ, ಟ್ರಾಫಿಕ್ ಅನ್ನು ಸ್ಪಷ್ಟವಾಗಿ ಚಾನೆಲೈಸೇಶನ್ ಮಾಡುವದಿಂದ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಹುದಾಗಿದೆ ಎಂದರು.

ಬೆಂಗಳೂರು ನಗರ, ಹೆಣ್ಣೂರು ಮತ್ತು ತುಮಕೂರು ರಸ್ತೆ ಬದಿಗಳಿಗೆ ಮೀಸಲಾದ ಲೇನ್‌ಗಳೊಂದಿಗೆ ಭೌತಿಕ ಬ್ಯಾರಿಕೇಡ್‌ ಅಳವಡಿಸಲು ಯೋಜಿಸುತ್ತಿದ್ದೇವೆ. ಇವು ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಲು ಅಲ್ಪಾವಧಿಯ ಕ್ರಮಗಳಾಗಿವೆ ತ್ರಿಲೋಕ್ ಚಂದ್ರ ಹೇಳಿದ್ದಾರೆ

ಮೇಲ್ಸೇತುವೆಯ ಅಗಲವೇ ಪ್ರಮುಖ ಸಮಸ್ಯೆಯಾಗಿದೆ. ಎರಡು-ಪಥದ ಸೇವಾ ರಸ್ತೆ (ವಿಮಾನ ನಿಲ್ದಾಣದ ಹೆದ್ದಾರಿ) ಹೊಂದಿರುವ ಮೂರು-ಪಥದ ಹೆದ್ದಾರಿಯು ಫ್ಲೈಓವರ್‌ನ ಕೇವಲ ಎರಡು ಲೇನ್‌ಗಳಿಗೆ ಕಿರಿದಾಗಿದೆ.

ಬೆಂಗಳೂರಿನ ಈ 10 ಜಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಿಎಂ ಸೂಚನೆಬೆಂಗಳೂರಿನ ಈ 10 ಜಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸಿಎಂ ಸೂಚನೆ

ಸಮಸ್ಯೆ ಪರಿಹಾರಕ್ಕಾಗಿ ಯೋಜನೆ ಸಿದ್ಧತೆ

ಸಮಸ್ಯೆ ಪರಿಹಾರಕ್ಕಾಗಿ ಯೋಜನೆ ಸಿದ್ಧತೆ

ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಹೆಬ್ಬಾಳ ಮೇಲ್ಸೇತುವೆಯಲ್ಲಿ ತುಮಕೂರು ರಸ್ತೆ ಕಡೆಗೆ ಫ್ಲೈಓವರ್ ಲೇನ್‌ಗಳನ್ನು ಕಿತ್ತುಹಾಕಲು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.

2051 ರ ಅಂದಾಜು ರಸ್ತೆ ಟ್ರಾಫಿಕ್ ಅವಶ್ಯಕತೆಗಳನ್ನು ಪೂರೈಸಲು ಮತ್ತು ಮೆಟ್ರೋ ಮತ್ತು ಉಪನಗರ ಮಾರ್ಗಗಳಂತಹ ಇತರ ಸಾರಿಗೆ ವಿಧಾನಗಳ ಏಕೀಕರಣವನ್ನು ಪೂರೈಸಲು ಹೆಬ್ಬಾಳ ಜಂಕ್ಷನ್‌ನಲ್ಲಿ ಸಾಮರ್ಥ್ಯ ವರ್ಧನೆಗಾಗಿ ಸಮಗ್ರ ಅಧ್ಯಯನ ಮತ್ತು ಯೋಜನೆ ತಯಾರಿಸಲು ರಾಜ್ಯ ಸರ್ಕಾರ ಮತ್ತು ಬಿಎಂಆರ್ ಸಿಎಲ್ ತನ್ನ ಜೊತೆಗೆ ಇತ್ತೀಚೆಗೆ ಆರ್ ಐಟಿಇಎಸ್ (RITES) ಅನ್ನು ತೊಡಗಿಸಿಕೊಂಡಿದೆ.

ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಚಿಂತನೆ

ಹೆಚ್ಚುವರಿ ಮೇಲ್ಸೇತುವೆ ನಿರ್ಮಾಣಕ್ಕೆ ಚಿಂತನೆ

ಅಸ್ತಿತ್ವದಲ್ಲಿರುವ ಹೆಬ್ಬಾಳ ಮೇಲ್ಸೇತುವೆಯ ಪಶ್ಚಿಮಕ್ಕೆ ಹೆಚ್ಚುವರಿ ಎರಡು-ಪಥದ ಮೇಲ್ಸೇತುವೆಯನ್ನು ನಿರ್ಮಿಸಲು ಯೋಜನೆಯು ಯೋಜಿಸಿದೆ. ಹೀಗಾಗಿ ನಗರದಿಂದ ವಿಮಾನ ನಿಲ್ದಾಣಕ್ಕೆ ಐದು ಪಥದ ರಸ್ತೆ ಆದಂತಾಗುತ್ತದೆ.

ಪೂರ್ವ ಭಾಗದಲ್ಲಿ, ಈಗಿರುವ ದ್ವಿಪಥದ ಜೊತೆಗೆ ಮೂರು-ಪಥದ ಮೇಲ್ಸೇತುವೆಯನ್ನು ನಿರ್ಮಿಸಲಾಗುವುದು, ಇದು ವಿಮಾನ ನಿಲ್ದಾಣದಿಂದ ನಗರಕ್ಕೆ ಐದು ಪಥದ ಮಾರ್ಗಗಳಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದರಿಂದ ಮುಖ್ಯ ಮೇಲ್ಸೇತುವೆಯಲ್ಲಿ ಐದು ಲೇನ್‌ಗಳಿರುವುದನ್ನು ಖಚಿತಪಡಿಸುತ್ತದೆ.

ಈಗಿರುವ 1.5 ಲೇನ್‌ಗಳ ರ‍್ಯಾಂಪ್‌ ಅನ್ನು ಕೆಡವಿ ಹೊಸ ಲೇನ್‌ಗಳನ್ನು ಸೇರಿಸಿದ ನಂತರ ನಗರದಿಂದ ತುಮಕೂರು ರಸ್ತೆಯವರೆಗೆ ಈಗಿರುವ ಲೂಪ್ ಅನ್ನು ಮರುನಿರ್ಮಾಣ ಮಾಡಬೇಕು. ನಗರದಿಂದ ಕೆಆರ್ ಪುರದವರೆಗೆ ಈಗಿರುವ ಲೂಪ್ ಅನ್ನು ಉಳಿಸಿಕೊಳ್ಳಲಾಗುವುದು.

ಮೂರು ಪಥದ ಕೆಳಸೇತುವೆ ನಿರ್ಮಿಸಲು ಯೋಜನೆ

ಮೂರು ಪಥದ ಕೆಳಸೇತುವೆ ನಿರ್ಮಿಸಲು ಯೋಜನೆ

ಮೂಲಗಳ ಪ್ರಕಾರ, ಬಿಡಿಎ ಮೂರು ಪಥದ ಕೆಳಸೇತುವೆ (ತುಮಕೂರಿನಿಂದ ಕೆಆರ್ ಪುರಂ ಮಾರ್ಗ) ನಿರ್ಮಾಣಕ್ಕೆ ಯೋಜಿಸಿದೆ. ಬಿಡಿಎ ಯೋಜಿಸಿದಂತೆ ಕೆಆರ್ ಪುರಂನಿಂದ ವಿಮಾನ ನಿಲ್ದಾಣಕ್ಕೆ ಎರಡು ಪಥಗಳ ಎಲಿವೇಟೆಡ್ ಫ್ಲೈಓವರ್ ಆಗಲಿದೆ. ಕೆಆರ್ ಪುರಂನಿಂದ ತುಮಕೂರು ಕಡೆಗೆ ಈಗಿರುವ ನೇರ ರಸ್ತೆಯನ್ನೇ ಚತುಷ್ಪಥ ರಸ್ತೆಯನ್ನಾಗಿ ವಿಸ್ತರಿಸಲಾಗುವುದು. ಆದರೆ, ಈ ಪ್ರಸ್ತಾಪವು ಇನ್ನೂ ಯೋಜನೆಯ ಹಂತದಲ್ಲಿದೆ.

Recommended Video

ಬಾಯಾರಿದ ಅಳಿಲಿಗೆ ನೀರು ಕುಡಿಸಿದ ಮಹಿಳೆ | *Viral | OneIndia Kannda

English summary
BBMP Has Deided to implement measures to ease traffic flow at Hebbal flyover. BBMP planning to install physical barricading with dedicated lanes to the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X