ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೃತೀಯ ಲಿಂಗಿಗಳಿಗೆ ಬಿಬಿಎಂಪಿಯಿಂದ ವಸತಿ ಸಂಕೀರ್ಣ

|
Google Oneindia Kannada News

ಬೆಂಗಳೂರು, ಜನವರಿ 31: ಬಿಬಿಎಂಪಿಯು ತೃತೀಯ ಲಿಂಗಿಗಳಿಗಾಗಿ ಮನೆಗಳನ್ನು ನಿರ್ಮಾಣ ಮಾಡುತ್ತಿದೆ. ಶೆಲ್ಟರ್‌ನಲ್ಲಿ ಆಹಾರ ಕೂಡ ಒದಗಿಸಲಾಗುತ್ತದೆ. ಜೊತೆಗೆ ಅವರಿಗೆ ವಿವಿಧ ತರಬೇತಿಗಳನ್ನು ನೀಡಲಾಗುತ್ತದೆ.

ತೃತೀಯಲಿಂಗಿಗಳು ಕ್ರಮೇಣವಾಗಿ ಸಮಾಜದಲ್ಲಿ ಸ್ಥಾನ ಕಂಡುಕೊಳ್ಳುತ್ತಿದ್ದಾರೆ, ಆದರೆ ಬಸ್‌ ನಿಲ್ದಾಣಗಳು, ಸಿಗ್ನಲ್‌ಗಳು, ಟೋಲ್‌ಗಳು ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಭಿಕ್ಷೆ ಬೇಡುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಮನೆಯ ಮಾಲೀಕರು ತೃತೀಯ ಲಿಂಗಿಗಳಿಗೆ ಮನೆಯನ್ನು ನೀಡಲು ಹಿಂಜರಿಯುತ್ತಾರೆ. ಅವರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾದರೆ ಎನ್ನುವ ಕಾರಣದಿಂದ ಅವರನ್ನು ನಿರಾಕರಿಸುತ್ತಾರೆ.

BBMP gets inclusive, to provide shelter to transgenders

ಹೊಸ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, ತೃತೀಯಲಿಂಗಿಗೆ ಪ್ರಮುಖ ಸ್ಥಾನಹೊಸ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್, ತೃತೀಯಲಿಂಗಿಗೆ ಪ್ರಮುಖ ಸ್ಥಾನ

ಹಾಗಾಗಿ ಉಪ್ಪಾರ ಪೇಟೆ ಪೊಲೀಸ್ ಠಾಣೆ, ಮೆಜೆಸ್ಟಿಕ್ ಬಳಿ ಇರುವ ಆರೋಗ್ಯ ಕೇಂದ್ರವನ್ನು ಸದ್ಯಕ್ಕೆ ಬಳಕೆ ಮಾಡುತ್ತಿಲ್ಲ ಅದನ್ನೇ ಬಳಸಿಕೊಳ್ಳಲಾಗುತ್ತಿದೆ. ಮುಂದಿನ ವಾರ ಕೇಂದ್ರ ತೆರೆಯಲಿದೆ. ಅಲ್ಲಿ ವಾಸ ಮಾಡುವುದರಿಂದ ಪೊಲೀಸರು ಭದ್ರತೆಯನ್ನು ಕೂಡ ನೀಡಬಹುದಾಗಿದೆ.

ತೃತೀಯ ಲಿಂಗಿಗಳೆಂದರೆ ಕೀಳಾಗಿ ನೋಡುವ ಮನಸ್ಥಿತಿಯೇ ಇನ್ನು ಇದೆ, ಅವರಿಗೆ ಆಶ್ರಯ ನೀಡಲು ಹಿಂಜರಿಕೆ, ಕೆಲಸ ನೀಡುವುದಿಲ್ಲ ಹಾಗಾಗಿ ಅವರು ಅನಿವಾರ್ಯವಾಗಿ ಭಿಕ್ಷೆ ಬೇಡಿ ಜೀವನ ಸಾಗಿಸುವಂತಾಗಿದೆ. ಅದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಪೋಷಕರ ಸಹಕಾರದಿಂದ ಉತ್ತಮ ಜೀವನ ನಡೆಸುತ್ತಿದ್ದಾರೆ.

English summary
In a first, BBMP has proposed to set up a shelter home for the transgender community, as a part of its home less shelters project in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X