ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಾರ್ಡ್ ಮರುವಿಂಗಡಣೆಗೆ ಸರ್ಕಾರದ ಗೆಜೆಟ್: ಬೆಂಗಳೂರಿನಲ್ಲೀಗ 243 ವಾರ್ಡ್

|
Google Oneindia Kannada News

ಬೆಂಗಳೂರು, ಜೂನ್ 21: ಬೃಹತ್ ಬೆಂಗಳೂರು ಮಹಾನಗರ (ಬಿಬಿಎಂಪಿ) ವಾರ್ಡ್‌ಗಳ ಸಂಖ್ಯೆ 243 ವಾರ್ಡ್‌ಗಳು ಅಧಿಕೃತವಾಗಿದೆ. ಬಿಬಿಎಂಪಿ ಸಲ್ಲಿಸಿದ್ದ ವಾರ್ಡ್ ಮರುವಿಂಗಡನೆಗೆ ಸರ್ಕಾರ ಅಂಗೀಕಾವನ್ನು ನೀಡಿ ಸರ್ಕಾರಿ ಅಧಿಸೂಚನೆಯನ್ನು ಹೊರಡಿಸಿದೆ.

ಬಿಬಿಎಂಪಿ ವಾರ್ಡ್‌ಗಳ ಪುನರ್ ವಿಂಗಡಣೆ ಬಗ್ಗೆ ಪುನರ್ ವಿಂಗಡಣಾ ಸಮಿತಿಯು ದಿನಾಂಕ 09.06.2022ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ವರದಿಯನ್ನು ಆಧರಿಸಿ ಸರ್ಕಾರ ಅನುಮೋದನೆಯನ್ನು ನೀಡಿ ಅಧಿ ಸೂಚನೆಯನ್ನು ಹೊರಡಿಸಿದೆ.

ಬೆಂಗಳೂರಿನ 2011 ಜನಗಣತಿಯ ಆಧಾರದಲ್ಲಿ 243 ವಾರ್ಡ್‌ಗಳನ್ನು ರಚನೆಯನ್ನು ಸಮಿತಿಯು ವರದಿಯನ್ನು ನೀಡಿತ್ತು. ಬಿಬಿಎಂಪಿಯಲ್ಲಿ ಈವರೆಗೂ 198 ವಾರ್ಡ್‌ಗಳು ಇದ್ದವು. ಇದೀಗ ಸರ್ಕಾರದ ಆದೇಶದಿಂದಾಗಿ 243 ವಾರ್ಡ್‌ಗಳು ಬೆಂಗಳೂರಿನಲ್ಲಿ ರಚನೆಯಾಗಿವೆ.

ಬಿಬಿಎಂಪಿ ಚುನಾವಣೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ಸಮಯಾವಕಾಶವನ್ನು ನೀಡಿ ಆದೇಶವನ್ನು ಹೊರಡಿಸಿತ್ತು. ಇದರಿಂದಾಗಿ ಬಿಬಿಎಂಪಿ ವಾರ್ಡ್ ಮರು ವಿಂಗಡನಾ ಸಮಿತಿಯು ವಾರ್ಡ್‌ಗಳ ಮರು ವಿಂಗಡನೆಗೆ ವೇಗವನ್ನು ನೀಡಿತ್ತು.

ಸರ್ಕಾರವೂ ಸಹ ವಾರ್ಡ್ ಮರುವಿಂಗಡಣೆಯ ಬಳಿಕವೇ ಬಿಬಿಎಂಪಿ ಚುನಾವಣೆ ಎಂದು ಹೇಳಿತ್ತು. ಜೂನ್ 9 ರಂದು ಬಿಬಿಎಂಪಿ ಮರುವಿಂಗಡಣಾ ಸಮಿತಿ ವಾರ್ಡ್‌ಗಳನ್ನು 243 ವಾರ್ಡ್‌ಗಳಾಗಿ ವಿಂಗಡಿಸಿ ವರದಿಯನ್ನು ನೀಡಿತ್ತು. ಸರ್ಕಾರವೂ ವಾರ್ಡ್ ಮರುವಿಂಗಡಣೆಗೆ ಅಸ್ತು ಎಂದಿರುವುದರಿಂದ ಬಿಬಿಎಂಪಿಯ ಚುನಾವಣೆಯೂ ಶೀಘ್ರದಲ್ಲೇ ನಡೆಯಲಿದೆ. ಇನ್ನುಂದೆ 243 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ.

ಪ್ರತಿ ವಾರ್ಡ್‌ಗೆ ಸರಾಸರಿ 35 ಸಾವಿರ ಜನಸಂಖ್ಯೆ

ಪ್ರತಿ ವಾರ್ಡ್‌ಗೆ ಸರಾಸರಿ 35 ಸಾವಿರ ಜನಸಂಖ್ಯೆ

2011ರ ಜನಗಣತಿ ಆಧರಿಸಿದಂತೆ ಬೆಂಗಳೂರಿನಲ್ಲಿ 84.43 ಲಕ್ಷ ಜನಸಂಖ್ಯೆಯಿದ್ದು ಅದನ್ನು 243 ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರತಿ ವಾರ್ಡ್‌ಗೆ ಸರಾಸರಿ 35 ಸಾವಿರ ಜನಸಂಖ್ಯೆ ಬರಲಿದೆ. ನಗರದ ಕೇಂದ್ರ ಭಾಗದಲ್ಲಿ ಅಷ್ಟೊಂದು ಪ್ರಮಾಣದ ಜನಸಂಖ್ಯೆ ಹೆಚ್ಚಳವಾಗಿಲ್ಲ. ಹೀಗಾಗಿ, ಬಿಬಿಎಂಪಿ ಕೇಂದ್ರ ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ ವಾರ್ಡ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವಿದಿಲ್ಲ.

ಬೊಮ್ಮನಹಳ್ಳಿಯಲ್ಲಿ 6 ವಾರ್ಡ್ ಹೆಚ್ಚಳ

ಬೊಮ್ಮನಹಳ್ಳಿಯಲ್ಲಿ 6 ವಾರ್ಡ್ ಹೆಚ್ಚಳ

ಬೆಂಗಳೂರಿನಲ್ಲಿ ಒಟ್ಟು 28 ವಿಧಾನ ಸಭಾ ಕ್ಷೇತ್ರಗಳಿವೆ. ಈ ಪೈಕಿ 10 ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿಲ್ಲ.

ಕಾಂಗ್ರೆಸ್ ಶಾಸಕರಿರುವ ಶಿವಾಜಿನಗರ ಕ್ಷೇತ್ರದಲ್ಲಿ ಒಂದು ವಾರ್ಡ್ ಕಡಿಮೆ ಮಾಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದಿಗಿಂತ 6 ವಾರ್ಡ್‌ಗಳನ್ನು ಹೆಚ್ಚಿಗೆ ಸೃಷ್ಟಿ ಮಾಡಲಾಗಿದೆ. ಉಳಿದಂತೆ ಬೆಂಗಳೂರು ದಕ್ಷಿಣ ಹಾಗೂ ಜೆಡಿಎಸ್ ಶಾಸಕರಿರುವ ಮತ್ತು ಬಿಜೆಪಿ ಪ್ರಭಾವ ಹೆಚ್ಚಿರುವ ದಾಸರ ಹಳ್ಳಿಯ ಕ್ಷೇತ್ರದಲ್ಲಿ ತಲಾ 5 ವಾರ್ಡ್‌ಗಳನ್ನು ಹೊಸದಾಗಿ ರಚನೆ ಮಾಡಲಾಗಿದೆ. ನಗರ ಹೊರವಲಯದಲ್ಲಿರುವ ಕ್ಷೇತ್ರಗಳಲ್ಲಿಯೂ ವಾರ್ಡ್‌ಗಳನ್ನು ಹೆಚ್ಚಳ ಮಾಡಲಾಗಿದೆ.

ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ವಾರ್ಡ್ ಹೆಚ್ಚಳ ಕಡಿಮೆ

ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ವಾರ್ಡ್ ಹೆಚ್ಚಳ ಕಡಿಮೆ

ಬಿಬಿಎಂಪಿ ವಾರ್ಡ್ ಮರುವಿಂಗಡಣಾ ಸಮಿತಿಯಲ್ಲಿ ಬಿಜೆಪಿ ಶಾಸಕರ ಮೇಲುಗೈ ಸಾಧಿಸಿದ್ದರು. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿದೆ. 10 ಕ್ಷೇತ್ರಗಳ ವಾರ್ಡ್ ಸಂಖ್ಯೆ ಬದಲಿಲ್ಲ ಯಥಾವತ್ತಾಗಿ ಇರಿಸಲಾಗಿದೆ.

ವಾರ್ಡ್‌ಗಳ ವಿವರ ಕ್ಷೇತ್ರ ಹಳೇ ಸಂಖ್ಯೆ ಹೊಸ ಸಂಖ್ಯೆ

ವಾರ್ಡ್‌ಗಳ ವಿವರ ಕ್ಷೇತ್ರ ಹಳೇ ಸಂಖ್ಯೆ ಹೊಸ ಸಂಖ್ಯೆ

ಬಿಟಿಎಂ ಲೇಔಟ್ ಮೊದಲು 8 - ಈಗ 9ವಾಡ್೯ , ಒಂದು ವಾರ್ಡ್ ಹೆಚ್ಚಳ.

ಬೆಂಗಳೂರು ದಕ್ಷಿಣ ಮೊದಲು8 -ಈಗ 13 ಐದು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಬಸವನಗುಡಿ ಮೊದಲು 6- ಈಗ 7, ಒಂದು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಬೊಮ್ಮನಹಳ್ಳಿಿಮೊದಲು 8- ಈಗ 14, ಆರು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಬ್ಯಾಾಟರಾಯನಪುರ ಮೊದಲು7 -ಈಗ11, ನಾಲ್ಕು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಸಿವಿ ರಾಮನ್‌ನಗರ ಮೊದಲು7- ಈಗ 9, ಎರಡು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಚಾಮರಾಜಪೇಟೆ ಮೊದಲು7- ಈಗ 7 , ವಾರ್ಡ್ ಹೆಚ್ಚಳವಿಲ್ಲ.

ಚಿಕ್ಕಪೇಟೆ ಮೊದಲು7 -ಈಗ 7, ವಾರ್ಡ್ ಹೆಚ್ಚಳವಿಲ್ಲ.

ದಾಸರಹಳ್ಳಿಿ ಮೊದಲು8 - ಈಗ13,

ಗಾಂಧಿನಗರ ಮೊದಲು7 -ಈಗ 7, ವಾರ್ಡ್ ಹೆಚ್ಚಳವಿಲ್ಲ.

ಗೋವಿಂದರಾಜನಗರ ಮೊದಲು9 -ಈಗ 9, ವಾರ್ಡ್ ಹೆಚ್ಚಳವಿಲ್ಲ.

ಹೆಬ್ಬಾಾಳ ಮೊದಲು8 - ಈಗ 8, ವಾರ್ಡ್ ಹೆಚ್ಚಳವಿಲ್ಲ.

ಜಯನಗರ ಮೊದಲು7- ಈಗ 7, ವಾರ್ಡ್ ಹೆಚ್ಚಳವಿಲ್ಲ.

ಕೆ.ಆರ್.ಪುರ ಮೊದಲು9 -ಈಗ 13, ನಾಲ್ಕು ವಾರ್ಡ್ ಹೆಚ್ಚಳ.

ಮಹದೇವಪುರ ಮೊದಲು8 -ಈಗ 12, ನಾಲ್ಕು ವಾರ್ಡ್ ಹೆಚ್ಚಳ.

ಮಹಾಲಕ್ಷ್ಮೀಲೇಔಟ್ ಮೊದಲು7 -ಈಗ 9, ಎರಡು ವಾರ್ಡ್ ಹೆಚ್ಚಳ.

ಮಲ್ಲೇಶ್ವರ ಮೊದಲು7- ಈಗ 7, ವಾರ್ಡ್ ಹೆಚ್ಚಳವಿಲ್ಲ.

ಪದ್ಮನಾಭನಗರ ಮೊದಲು8-ಈಗ 9, ಒಂದು ವಾರ್ಡ್ ಹೆಚ್ಚಳ.

ಪುಲಕೇಶಿನಗರ ಮೊದಲು7 - ಈಗ 7, ವಾರ್ಡ್ ಹೆಚ್ಚಳವಿಲ್ಲ.

ರಾಜಾಜಿನಗರ ಮೊದಲು7- ಈಗ 7, ವಾರ್ಡ್ ಹೆಚ್ಚಳವಿಲ್ಲ.

ರಾಜರಾಜೇಶ್ವರಿನಗರ ಮೊದಲು9 -ಈಗ 13, ನಾಲ್ಕು ವಾರ್ಡ್ ಹೆಚ್ಚಳ.

ಸರ್ವಜ್ಞನಗರ ಮೊದಲು8-ಈಗ 10 , ಎರಡು ವಾರ್ಡ್ ಹೆಚ್ಚಳ.

ಶಾಂತಿನಗರ ಮೊದಲು7 -ಈಗ 7, ವಾರ್ಡ್ ಹೆಚ್ಚಳವಿಲ್ಲ.

ಶಿವಾಜಿನಗರ ಮೊದಲು7-ಈಗ 6, ಒಂದು ವಾರ್ಡ್ ಕಡಿಮೆ ಮಾಡಲಾಗಿದೆ.

ವಿಜಯನಗರ ಮೊದಲು8-ಈಗ 9, ಒಂದು ವಾರ್ಡ್ ಹೆಚ್ಚಳ.

ಯಲಹಂಕ ಮೊದಲು4- ಈಗ 5, ಒಂದು ವಾರ್ಡ್ ಹೆಚ್ಚಳ.

ಯಶವಂತಪುರ ಮೊದಲು5- ಈಗ 8, ಮೂರು ವಾರ್ಡ್ ಹೆಚ್ಚಳ

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿದ್ದು 198 ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ 243 ವಾರ್ಡ್‌ಗಳಾಗಿಸಿದ್ದ ಸಮಿತಿಯ ವರದಿಗೆ ಸರ್ಕಾರ ಅಸ್ತು ಎಂದಿದ್ದು. ಇನ್ನು ಶೀಘ್ರದಲ್ಲೇ ನಡೆಯಲಿರುವ ಬಿಬಿಎಂಪಿಯ ಚುನಾವಣೆಯು 243 ವಾರ್ಡ್‌ಗಳಿಗೆ ನಡೆಯಲಿದೆ.

Recommended Video

Narendra Modiಗೆ ಎರಡು ದಶಕಗಳ ನಂತರ ಕ್ಲೀನ್ ಚಿಟ್ | India | Oneindia Kannada

English summary
BBMP: Gazette Notification on Delimitation of Wards, Now BBMP 198 ward to 243 wards, Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X