ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸದ ಲಾರಿಗಳ ಅವಘಡ: ಬೆಂಗಳೂರು ಸಂಚಾರಿ ಪೊಲೀಸ್ ಸ್ಪೆಷಲ್ ಡ್ರೈವ್

|
Google Oneindia Kannada News

ಬೆಂಗಳೂರು, ಮೇ16 : ಬಿಬಿಎಂಪಿ ಕಸದ ಲಾರಿಯ ಅಪಘಾತಗಳು ಮರುಕಳಿಸುತ್ತಲೇ ಇವೆ. ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಮಾಡಿದ್ದರೂ ಯಾವುದೇ ರೀತಿಯ ಪ್ರಯೋಜನವಾಗತ್ತಿಲ್ಲ. ನಗರ ಸಂಚಾರಿ ಪೊಲೀಸ್ ಆಯುಕ್ತರು ಕೆಲವು ತೀರ್ಮಾನವನ್ನು ಮಾಡಿದ್ದರೆ. ಅಪಘಾತವನ್ನು ತಪ್ಪಿಸಲು ಕೆಲವು ಯೋಜನೆಯನ್ನು ಬಿಬಿಎಂಪಿಗೆ ಸೂಚಿಸಲಾಗಿದೆೆ.

ಬಿಬಿಎಂಪಿ ಕಸದ ಲಾರಿಗಳು ಅಪಘಾತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಗೆ ಕಸದ ಲಾರಿ ವೇಗದ ಮಿತಿಯನ್ನು 40 ಕಿಮೀ ಇಳಿಸುವುದು. ಕಸದ ವಾಸನೆಗೆ ಕುಡಿದು ವಾಹನ ಚಲಾಯಿಸುತ್ತಾರೆ ಅನ್ನೋ ಆರೋಪವಿರುದರಿಂದ ಬಿಬಿಎಂಪಿ ಅಧಿಕಾರಿಗಳು ವಾಹನ ಚಾಲನೆ ಹೋಗುವ ಮುನ್ನ, ವಾಹನ ವಾಪಸ್ ತಂದ ಬಳಿಕ ಹಾಗೂ ಸರ್ಪೈಸ್ ಆಗಿ ಆಲ್ಕೋಮೀಟರ್ ಚೆಕ್ ಗಳನ್ನು ಮಾಡಬೇಕು ಎಂದು ಬಿಬಿಎಂಪಿಗೆ ಜಂಟೀ ಪೊಲೀಸ್ ಆಯುಕ್ತ ರವಿಕಾಂತೇಗೌಡರ ಸೂಚನೆ ತಿಳಿಸಿದ್ದಾರೆ.

ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ; 2 ತಿಂಗಳಲ್ಲಿ ನಾಲ್ವರು ಸಾವುಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ; 2 ತಿಂಗಳಲ್ಲಿ ನಾಲ್ವರು ಸಾವು

ಟ್ರಾಫಿಕ್ ಪೊಲೀಸ್ ವಿಶೇಷ ಕ್ರಮ

ಟ್ರಾಫಿಕ್ ಪೊಲೀಸ್ ವಿಶೇಷ ಕ್ರಮ

ಸಂಚಾರಿ ಪೊಲೀಸರು ವಿಶೇಷ ನಿಯಮ ಜಾರಿ ಅಭಿಯಾನ ಮಾಡಲಿದ್ದಾರೆ. ಸಂಚಾರಿ ಪೊಲೀಸರು ಸ್ಪೆಷಲ್ ಡ್ರೈವ್ ಮಾಡಲಿದ್ದಾರೆ. ಸಂಚಾರ ತರಬೇತಿ ಶಾಲೆಗಳಲ್ಲಿ ವಿಶೇಷ ತರಭೇತಿಗಳನ್ನು ನೀಡಲಾಗುತ್ತದೆ. ಆಡಿಯೋ ವಿಡಿಯೋ ತರಬೇತಿಯನ್ನು ನೀಡಲಾಗುತ್ತದೆ. ಯಾವ ಲೇನ್ ನಲ್ಲಿ ಸಂಚಾರ ಮಾಡಬೇಕು. ಶಾಲಾ ಕಾಲೇಜು ವಲಯದಲ್ಲಿ ಹೇಗಿ ಸಂಚರಿಸಬೇಕು ಅನ್ನುವುದರ ತರಬೇತಿಯನ್ನು ನೀಡಲಾಗುತ್ತದೆ. ನಲ್ವತ್ತು ನಲ್ವತ್ತು ಜನರ ಬ್ಯಾಚ್ ಮಾಡಿ ತರಬೇತಿಯನ್ನು ನೀಡಲಾಗುತ್ತದೆ. ಸಕರಾತ್ಮಕವಾದ ಫಲಿತಾಂಶ ಸಿಗುವ ನಂಬಿಕೆ ಇದೆ, ಬಿಬಿಎಂಪಿ ಕಸದ ಲಾರಿ ವಿರುದ್ದ ವಿಶೇಷ ಕಾರ್ಯಾಚರಣೆಯನ್ನು ಮಾಡಿದ್ದ ವೇಳೆ ಹತ್ತು ಲಾರಿಗಳನ್ನು ಪರಿಶೀಲನೆ ಮಾಡಲಾಗಿತ್ತು ಈ ವೇಳೆ ಒಬ್ಬ ಮಾತ್ರ ಕುಡಿದು ವಾಹನ ಚಾಲನೆ ಮಾಡಿದ್ದು ಕಂಡು ಬಂದಿತ್ತು. ಆತನ ವಿರುದ್ದ ಕ್ರಮಕ್ಕೆ ಬಿಬಿಎಂಪಿಗೆ ಸೂಚಿಸಲಾಗಿತ್ತು ಬಿಬಿಎಂಪಿ ಚಾಲಕನನ್ನು ಅಮಾನತು ಮಾಡಿದೆ ಎಂದು ಜಂಟೀ ಪೊಲೀಸ್ ಆಯುಕ್ತ ರವಿಕಾಂತೇಗೌಡರವರು ಸ್ಪಷ್ಟಪಡಿಸಿದ್ದಾರೆ. ಇನ್ನು ಬಿಬಿಎಂಪಿ ಕಸದ ಲಾರಿಯಿಂದ ಕಳೆದ ಎರಡು ತಿಂಗಳಲ್ಲಿ ನಾಲ್ವರು ಮೃತಪಟ್ಟಿದ್ದರು.

ಬಿಬಿಎಂಪಿ ಲಾರಿಗೆ ಅಕ್ಷತಾ ಬಲಿ

ಬಿಬಿಎಂಪಿ ಲಾರಿಗೆ ಅಕ್ಷತಾ ಬಲಿ

ಮಾರ್ಚ್ 21 ಹೆಬ್ಬಾಳದ ಬಳಿ ರಸ್ತೆಯನ್ನು ದಾಟುವಾಗ ಶಾಲಾ ಬಾಲಕಿ ಸುಮಾರು 15 ವರ್ಷದ ಅಕ್ಷತಾಳನ್ನು ಬಿಬಿಎಂಪಿ ಲಾರಿ ಕಸದ ಲಾರಿ ಬಲಿಯನ್ನು ಪಡೆದಿತ್ತು. ಶಾಲೆಗೆ ತೆರಳಿ ಮನೆಗೆ ಹೋಗುತ್ತಿದ್ದ ಅಕ್ಷತಾ ಬಲಿಗೆ ಬಿಬಿಎಂಪಿಯ ಎರಡು ನಿರ್ಲಕ್ಷ್ಯಗಳು ಕಾರಣವಾಗಿದ್ದವು. ಹೆಬ್ಬಾಳದ ಅಂಡರ್ ಪಾಸ್ ನಲ್ಲಿ ಮಳೆ ನೀರು ನಿಂತಿದ್ದ ಪರಿಣಾಮದಿಂದಾಗಿ ರಸ್ತೆಯನ್ನು ಅಕ್ಷತಾ ದಾಟುತ್ತಿದ್ದಳು. ಈ ವೇಳೆ ವೇಗವಾಗಿ ಬಂದ ಲಾರಿ ಅಕ್ಷತಾಳ ಸೊಂಚದ ಮೇಲೆ ಹರಿದಿತ್ತು. ಅಕ್ಷತಾ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

ರಾಮಯ್ಯ ಬಲಿ

ರಾಮಯ್ಯ ಬಲಿ

ಮಾರ್ಚ್ 31 ರಂದು ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬಿಬಿಎಂಪಿಯ ಕಸದ ಲಾರಿಗೆ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮದಿಂದಾಗಿ ಯಲಹಂಕ ನಿವಾಸಿಯಾಗಿದ್ದ ಸುಮಾರು 60 ವರ್ಷದ ರಾಮಣ್ಣ ಗಂಭೀರವಾಗಿ ಗಾಯಗೊಂಡಿದ್ದರು. ರಾಮಣ್ಣ ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದರು.

ಪದ್ಮಿನಿ ಸಾವು

ಪದ್ಮಿನಿ ಸಾವು

ಏಪ್ರಿಲ್ 18ರಂದು ನಾಯಂಡಹಳ್ಳಿ ರಿಂಗ್ ರಸ್ತೆಯ ಬಳಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಎಸ್‌ಬಿಐ ಉದ್ಯೋಗಿ ಪದ್ಮಿನಿಯ ದ್ವಿಚಕ್ರವಾಹನಕ್ಕೆ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದಿತ್ತು. ಕಸದ ಲಾರಿ ಮಾಡಿದ ಅಪಘಾತದಿಂದಾಗಿ ಸುಮಾರು 40 ವರ್ಷದ ಪದ್ಮಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ದೇವಣ್ಣ ಬಲಿ

ದೇವಣ್ಣ ಬಲಿ

ಮೇ14 ಬಿಬಿಎಂಪಿ ಕಸದ ಲಾರಿ ಚಾಲಕರ ಬೇಜವಾಬ್ದಾರಿಗೆ ಸ್ವಿಗ್ಗಿ ಡೆಲಿವರಿ ಬಾಯ್ ದೇವಣ್ಣ ಬಲಿ. ನಾಗವಾರ- ಥಣಿಸಂದ್ರ ಮುಖ್ಯರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಯಾದಗಿರಿ ಜಿಲ್ಲೆ ಸುರಪುರ ಮೂಲದ ಸುಮಾರು 25 ವರ್ಷದ ದೇವಣ್ಣ ಬಲಿಯಾಗಿದ್ದ.

(ಒನ್ಇಂಡಿಯಾ ಸುದ್ದಿ)

Recommended Video

ಚಾಹಲ್ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಹೇಳಿದ್ದೇನು | Oneindia Kannada

English summary
BBMP garbage vehicle accident case increased. Bengaluru Traffic police gave special trainig to drivers. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X