ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು 31 ತಂಡಗಳನ್ನು ರಚಿಸಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31: ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿಯು 31 ತಂಡವನ್ನು ರಚಿಸಿದೆ.

ಗುಂಡಿಗಳನ್ನು ತುಂಬಲು ಟೆಂಡರ್‌ಗಳನ್ನು ವಲಯವಾರು ಎಂದು ಕರೆಯಲಾಗುತ್ತದೆ ಮತ್ತು ಗುತ್ತಿಗೆದಾರರು ಗುಂಡಿಗಳನ್ನು ಮುಚ್ಚಲು ಮತ್ತು ರಸ್ತೆ ರಿಪೇರಿ ಮಾಡಲು ಟಾರ್ ಬಳಸುವ ಬದಲು ಹಾಟ್ ಮಿಕ್ಸ್ ಬಳಸಲು ಸೂಚಿಸಿದ್ದಾರೆ.

ರಸ್ತೆಗಳಲ್ಲಿನ ಗುಂಡಿಗಳಿಂದಾಗಿ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ತಂಡ ರಚಿಸಲಾಗಿದೆ ಎಂದು ಬಿಬಿಎಂಪಿ ಆಡಳಿತಾಧಿಕಾರಿ ತಿಳಿಸಿದ್ದಾರೆ.

BBMP Forms 31 Teams To Fill Potholes In The City

ರಸ್ತೆಗಳ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಎಂಜಿನೀಯರ್ ಗಳ ಜೊತೆ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಇದರ ಜೊತೆಗೆ ವೈಟ್ ಟಾಪಿಂಗ್ ಮತ್ತು ಟೆಂಡರ್ ಶೂರ್ ಕಾಮಾರಿಗಳು ನಡೆಯುತ್ತಿವೆ, ಬೆಂಗಳೂರು ಜಲ ಮಂಡಳಿ ಮತ್ತು ಬೆಸ್ಕಾಂ ನ ಹಲವು ಕಾಮಗಾರಿಗಳಿಂದಾಗಿ ರಸ್ತೆ ಅಗೆಯಲಾಗುತ್ತಿದೆ, ಇದರಿಂದಾಗಿ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಎಷ್ಟು ಮಿಶ್ರಣ ಬೇಕು ಎಂಬ ಬಗ್ಗೆ ವರದಿಯನ್ನು ಸಿದ್ಧಪಡಿಸಲಾಗುತ್ತಿದೆ ಮತ್ತು ಗುಂಡಿಗಳ ಸಮಸ್ಯೆಯನ್ನು ಪರಿಹರಿಸಲು ಗುತ್ತಿಗೆದಾರರಿಗೆ ದೋಷದ ಹೊಣೆಗಾರಿಕೆಯ ಅವಧಿಯನ್ನು ಸಹ ನಿಗದಿಪಡಿಸಲಾಗುತ್ತದೆ.

Recommended Video

RRNagar Congress Candidate Kusuma Exclusive Interview | ನಾನು ಯಾರನ್ನೂ ನಂಬೋಲ್ಲ !! | Oneindia Kannada

1300 ಕಿಮೀ ರಸ್ತೆಯಲ್ಲಿ ಮುಖ್ಯ ರಸ್ತೆ ಮತ್ತು ಉಪ ರಸ್ತೆ ಹಾಗೂ ಜೊತೆಗೆ ಫುಟ್ ಪಾತ್ ಗಳು ಸೇರಿಕೊಂಡಿವೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

English summary
Bruhat Bengaluru Mahanagara Palike (BBMP) engineers have been directed to prioritise on repairing 1,300 km of prominent roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X