• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಬಿಬಿಎಂಪಿ ಸದಸ್ಯ ಎಂ. ನಾಗರಾಜ್ ಕೋವಿಡ್‌ಗೆ ಬಲಿ

|

ಬೆಂಗಳೂರು, ಸೆಪ್ಟೆಂಬರ್ 18 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ. ನಾಗರಾಜ್ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಎರಡು ಬಾರಿ ಬಿಬಿಎಂಪಿ ಸದ್ಯರಾಗಿ ಅವರು ಆಯ್ಕೆಯಾಗಿದ್ದರು.

ಕೋವಿಡ್ ಸೋಂಕಿಗೆ ತುತ್ತಾಗಿದ್ದ ಎಂ. ನಾಗರಾಜ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕರ್ನಾಟಕ; 1 ಲಕ್ಷದ ಗಡಿ ದಾಟಿದ ಕೋವಿಡ್ ಸಕ್ರಿಯ ಪ್ರಕರಣಗಳು

ಎಂ. ನಾಗರಾಜ್ ಅವರು 2001ರಲ್ಲಿ ಕುರುಬರಹಳ್ಳಿ, 2010ರಲ್ಲಿ ನಂದಿನಿ ಲೇಔಟ್ ವಾರ್ಡ್‌ನಿಂದ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಲೆಕ್ಕಪತ್ರ ಸ್ಥಾಯಿ ಸಮಿತಿ, ವಿಪಕ್ಷ ನಾಯಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.

ಮನೆಯಲ್ಲೇ ಕೊಪ್ಪಳದಲ್ಲಿ ಕೋವಿಡ್ ಗೆದ್ದ 105ರ ವೃದ್ಧೆ

ಗುರುವಾರ ರಾತ್ರಿ ರಾಜ್ಯಸಭಾ ಸದಸ್ಯ, ಬಿಜೆಪಿ ನಾಯಕ ಅಶೋಕ ಗಸ್ತಿ ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರಿಗೂ ಸಹ ಕೋವಿಡ್ ಸೋಂಕು ತಗುಲಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನ

   Nepalದ ಹೊಸ ಪುಸ್ತಕಗಳಳಲ್ಲಿ ಭಾರತವನ್ನು ಸೇರಿಸಿಕೊಂಡ ಭೂಪಟ | Oneindia Kannada

   ಬೆಂಗಳೂರು ನಗರದಲ್ಲಿ ಗುರುವಾರ 3,799 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 184082. ಸಕ್ರಿಯ ಪ್ರಕರಣಗಳ ಸಂಖ್ಯೆ 41,053.

   English summary
   BBMP former corporator M.Nagaraj died due to COVID 19. He is admitted to private hospital in Bengaluru. He elected as corporator in 2001 and 2010.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X