ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಶೀಘ್ರ 23 ಕಡೆ ಸ್ಕೈವಾಕ್ ನಿರ್ಮಾಣ, ಎಲ್ಲೆಲ್ಲಿ?

|
Google Oneindia Kannada News

ಬೆಂಗಳೂರು, ಮಾರ್ಚ್ 5: ಬಿಬಿಎಂಪಿಯು ನಗರದ 23 ಕಡೆ ಸ್ಕೈವಾಕ್ ನಿರ್ಮಿಸಲು ಟೆಂಡರ್ ಕರೆದಿದ್ದು ಕಾಮಗಾರಿ ಇನ್ನೊಂದು ತಿಂಗಳಲ್ಲಿ ಆರಂಭವಾಗುತ್ತಿದೆ.

ಭಾನುವಾರ ವಿವಿಧ ನಿರ್ಮಾಣ ಕಂಪನಿಗಳಿಂದ ಟೆಂಡರ್ ಆಹ್ವಾನಿಸಿದೆ. ಪ್ರತಿ ಸ್ಕೈವಾಕ್ 1.5 ಕೋಟಿ ಇಂದ 2 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.

ಮತ್ತೊಂದು ಸ್ಕೈ ವಾಕ್‌ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ ಮತ್ತೊಂದು ಸ್ಕೈ ವಾಕ್‌ ನಿರ್ಮಾಣಕ್ಕೆ ಸಿದ್ಧತೆ ಆರಂಭಿಸಿದ ಬಿಬಿಎಂಪಿ

ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಇನ್ನುಳಿದ 29 ಸ್ಕೈವಾಕ್‌ಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಈಗಾಗಲೇ ನಗರದಲ್ಲಿ ನಿರ್ಮಾಣವಾಗಿರುವ ಸಾಕಷ್ಟು ಸ್ಕೈವಾಕ್‌ಗಳು ಸರಿಯಾಗಿ ಬಳಕೆಯಾಗುತ್ತಿಲ್ಲ. ಹಾಗಾಗಿ ಕೇವಲ ಅವಶ್ಯಕತೆ ಇರುವ ಕಡೆಗಳಲ್ಲಿ ಮಾತ್ರ ಸ್ಕೈವಾಕ್ ನಿರ್ಮಿಸಬೇಕು.

BBMP floats tender for 23 skywalks in city

ಉದಾಹರಣೆಗೆ ರೆಸಿಡೆನ್ಸಿ ರಸ್ತೆ ಇಂತಹ ಜನರು ಹೆಚ್ಚು ಓಡಾಡುವ ಹಾಗೂ ವಾಹನಗಳೂ ಹೆಚ್ಚಿರುವ ರಸ್ತೆಗಳಲ್ಲಿ ಸ್ಕೈವಾಕ್ ನಿರ್ಮಾಣ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ. ಸೋಫಿಯಾ ಶಾಲೆಯ ಬಳಿ ಇರುವ ಸ್ಕೈವಾಕ್‌ನ್ನು ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ. ಆಸ್ಪತ್ರೆ, ದೇವಸ್ಥಾನ, ಶಾಲೆ ಇರುವ ಪ್ರದೇಶಗಳಲ್ಲಿ ಸ್ಕೈವಾಕ್ ನಿರ್ಮಿಸಿದರೆ ಉತ್ತಮ.

ಬೆಂಗಳೂರು ಅಭಿವೃದ್ಧಿಗೆ 2491 ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ ಬೆಂಗಳೂರು ಅಭಿವೃದ್ಧಿಗೆ 2491 ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ

ಸ್ಕೈವಾಕ್ ನಿರ್ಮಾಣದಿಂದ ಸಾಕಷ್ಟು ಉಪಯೋಗ ಇದೆ ಹಾಗಾಗಿ ನಗರದ ವಿವಿಧ ಕಡೆಗಳಲ್ಲಿ ಸ್ಕೈವಾಕ್ ನಿಮಾರ್ಣ ಮಾಡಲು ಬಿಬಿಎಂಪಿ ಸಿದ್ಧವಾಗಿದೆ.

ಬೆಂಗಳೂರು: ಕಾರ್ಡ್ ರಸ್ತೆಯ ಮಂಜುನಾಥನಗರ ಫ್ಲೈಓವರ್ ಲೋಕಾರ್ಪಣೆ ಬೆಂಗಳೂರು: ಕಾರ್ಡ್ ರಸ್ತೆಯ ಮಂಜುನಾಥನಗರ ಫ್ಲೈಓವರ್ ಲೋಕಾರ್ಪಣೆ

ಎಲ್ಲೆಲ್ಲಿ ಸ್ಕೈವಾಕ್ ನಿರ್ಮಾಣ

-ಜಾಲಹಳ್ಳಿ ಮೆಟ್ರೀ ನಿಲ್ದಾಣ
-ಗೊರಗುಂಟೆ ಪಾಳ್ಯ ಮೆಟ್ರೋ ನಿಲ್ದಾಣ
- ವೈಷ್ಣವಿ ಸಫೈರ್ ಮಾಲ್, ತುಮಕೂರು ರಸ್ತೆ
- ಎಂಎಸ್ ರಾಮಯ್ಯ, ಚೌಲ್ಟ್ರಿ, ಸುಂದರನಗರ
- ಎಚ್‌ಬಿಆರ್ ಲೇಔಟ್‌, ಒಂದನೇ ಅಡ್ಡರಸ್ತೆ
-ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ, ಹೆಬ್ಬಾಳ
-ಎಂವಿಜೆ ಎಂಜಿನಿಯರಿಂಗ್ ಕಾಲೇಜು
-ಹೋಪ್ ಫಾರ್ಮ್ ಜಂಕ್ಷನ್
-ದಾಸರಹಳ್ಳಿ ಮೆಟ್ರೋ ನಿಲ್ದಾಣ
-ಓಲ್ಡ್‌ ಸುಜಾತಾ ಚಿತ್ರಮಂದಿರ, ರಾಜಾಜಿನಗರ
-ಸಂಗಮ್ ಥೀಯೇಟರ್
-ಪ್ರೆಸ್ಟೀಜ್ ಶಾಂತಿನಿಕೇತನ್, ವೈಟ್‌ ಫೀಲ್ಡ್
- ಲೇಬರ್ ಕಮಿಷನರ್ ಕಚೇರಿ, ಡೈರಿ ವೃತ್ತ
- ಕೆಪಿಎನ್ ಟ್ರಾವೆಲ್-ಹೊಸೂರು ರಸ್ತೆ
-ಕೇಂದ್ರೀಯ ವಿದ್ಯಾಲಯ ಶಾಲೆ, ಸಿವಿ ರಾಮನ್ ರಸ್ತೆ
-ಟ್ರಿನಿಟಿ ವೃತ್ತ
-ಎಎಸ್‌ಆರ್ ಕಲ್ಯಾಣ ಮಂಟಪ-ಬಾಣಸವಾಡಿ
- ಮಲಬಾರ್ ಫುಡ್ ಕೋರ್ಟ್ ಬಸ್‌ ನಿಲ್ದಾಣ, ಹೆಣ್ಣೂರು
-ಓಲ್ಡ್ ಮದ್ರಾಸ್ ರಸ್ತೆ
-ಟೋಲ್ ಗೇಟ್ ವೃತ್ತ, ಮಾಗಡಿ ರಸ್ತೆ
-ಜಿಂಜರ್ ಹೋಟೆಲ್, ಓಆರ್‌ಆರ್ ರಸ್ತೆ

English summary
The Bruhat Bengaluru Mahanagara Palike (BBMP) will soon kickstart work on constructing 23 skywalks at various locations in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X