ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಜ್ ವೆಸ್ಟೆಂಡ್‌ ಹೋಟೆಲ್‌ಗೆ ದಂಡ ಹಾಕಿದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 25 : ತಾಜ್ ವೆಸ್ಟೆಂಡ್‌ ಹೋಟೆಲ್ ಮೇಲೆ ಬಿಬಿಎಂಪಿ ಅಧಿಕಾರಿಗಳು ದಾಳಿ ಮಾಡಿದರು. ನಿಯಮಗಳನ್ನು ಪಾಲನೆ ಮಾಡದ ಹಿನ್ನಲೆಯಲ್ಲಿ 50 ಸಾವಿರ ರೂ. ದಂಡವನ್ನು ವಿಧಿಸಿ ನಿಯಮ ಪಾಲಿಸುವಂತೆ ಸೂಚನೆ ನೀಡಿದರು.

ಶುಕ್ರವಾರ ಆರೋಗ್ಯಾಧಿಕಾರಿಗಳ ತಂಡ ತಾಜ್ ವೆಸ್ಟೆಂಡ್ ಹೋಟೆಲ್ ಮೇಲೆ ದಾಳಿ ಮಾಡಿತು. ಹೋಟೆಲ್‌ನಲ್ಲಿ ತ್ಯಾಜ್ಯ ವಿಂಗಡನೆ ಮಾಡಿರಲಿಲ್ಲ. ಶುಚಿತ್ವವಿಲ್ಲದ ತರಕಾರಿ, ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಮಾಡುತ್ತಿರುವುದು ಬೆಳಕಿಗೆ ಬಂದಿತು.

ಈ ಹಸುವಿನ ಹೊಟ್ಟೆಯಲ್ಲಿದ್ದದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್!ಈ ಹಸುವಿನ ಹೊಟ್ಟೆಯಲ್ಲಿದ್ದದ್ದು ಬರೋಬ್ಬರಿ 52 ಕೆಜಿ ಪ್ಲಾಸ್ಟಿಕ್!

ಪ್ರತ್ಯೇಕ ಧೂಮಪಾನ ವಲಯಗಳನ್ನು ಗುರುತಿಸುವಂತೆ ಬಿಬಿಎಂಪಿ ಸೂಚನೆ ನೀಡಿತ್ತು. ಆದರೆ, ಅದನ್ನು ಸಹ ಪಾಲನೆ ಮಾಡಿರಲಿಲ್ಲ. ಆದ್ದರಿಂದ, ಅಧಿಕಾರಿಗಳು 50,000 ರೂ. ದಂಡವನ್ನು ವಿಧಿಸಿದರು.

 ಪ್ಲಾಸ್ಟಿಕ್ ಜಾಗೃತಿಗೆ ಮ್ಯೂಸಿಕ್ ಆಲ್ಬಂ ಪ್ಲಾಸ್ಟಿಕ್ ಜಾಗೃತಿಗೆ ಮ್ಯೂಸಿಕ್ ಆಲ್ಬಂ

BBMP Fined Rs 50 Thousand For Taj West End hotel

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಿರುವ ನಿಯಮಗಳನ್ನು ಹೋಟೆಲ್‌ ಉಲ್ಲಂಘನೆ ಮಾಡಿದರೆ ಪರವಾನಗಿ ರದ್ದು ಪಡಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ಮನೆ, ಹೋಟೆಲ್ ಸೇರಿದಂತೆ ಎಲ್ಲಾ ಕಡೆ ಕಸವನ್ನು ವಿಂಗಡನೆ ಮಾಡಿಕೊಡಬೇಕು ಎಂದು ಬಿಬಿಎಂಪಿ ನಿಯಮ ರೂಪಿಸಿದೆ. ಹೆಚ್ಚು ಕಸ ಸಂಗ್ರಹವಾಗುವ ಹೋಟೆಲ್, ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಕಸವನ್ನು ವಿಂಗಡನೆ ಮಾಡಬೇಕಿದೆ. ಆದರೆ, ತಾಜ್ ವೆಸ್ಟೆಂಡ್ ಈ ನಿಯಮ ಪಾಲಿಸದ ಕಾರಣ ಪಾಲಿಕೆ ದಂಡವನ್ನು ಹಾಕಿದೆ.

ಬೆಂಗಳೂರು ನಗರದಲ್ಲಿ 3 ಕಿ. ಮೀ. ಓಡಿ; ಪ್ಲಾಸ್ಟಿಕ್ ಸಂಗ್ರಹಿಸಿ ಬೆಂಗಳೂರು ನಗರದಲ್ಲಿ 3 ಕಿ. ಮೀ. ಓಡಿ; ಪ್ಲಾಸ್ಟಿಕ್ ಸಂಗ್ರಹಿಸಿ

ಬೆಂಗಳೂರು ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಎರಡು ತಿಂಗಳು ಕಳೆದಿದೆ. ನಿಷೇಧಿತ ಪ್ಲಾಸ್ಟಿಕ್ ಹಿಡಿದು ಓಡಾಡುವ ಜನರು ಮತ್ತು ಅದನ್ನು ನೀಡಿದ ಅಂಗಡಿಗಳ ಮೇಲೆಯೂ ದಾಳಿ ನಡೆಸಿ, ದಂಡವನ್ನು ವಿಧಿಸಲಾಗುತ್ತದೆ.

English summary
BBMP health officers visited Taj West End hotel fined Rs 50,000 for non-segregation of waste, using banned plastics and directed to follow rules to avoid losing their trade license.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X