ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬ್ಬಾ..! ಬಿಬಿಎಂಪಿ ಕೊನೆಗೂ ಸಿದ್ಧಪಡಿಸಿತು ಜಾಹೀರಾತು ನೀತಿ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 14: ಬಿಬಿಎಂಪಿಯು ದೆಹಲಿ ಮಾದರಿಯಲ್ಲಿ ಜಾಹೀರಾತು ನೀತಿಯನ್ನು ತರಲು ಕರಡನ್ನು ಸಿದ್ಧಪಡಿಸಿದೆ. ಹೈಕೋರ್ಟ್‌ ತರಾಟೆ ಬಳಿಕ ಎಚ್ಚೆತ್ತಿರುವ ಬಿಬಿಎಂಪಿಯು ಕೊನೆಗೂ ಜಾಹೀರಾತು ನೀತಿಗೆ ಮುಂದಾಗಿದೆ.

ಅದರ ಜತೆಗೆ ಮುಂದಿನ 1 ವರ್ಷ ಜಾಹೀರಾತು ಪ್ರದರ್ಶನಕ್ಕೆ ನಿಷೇಧ ಹೇರಿದೆ ಇದೀಗ ನೂತನ ಜಾಹೀರಾತು ನೀತಿಯಲ್ಲಿ ಪ್ರಮುಖವಾಗಿ ಅಕ್ರಮ ಜಾಹೀರಾತು ತಡೆಗೆ ಹೆಚ್ಚು ಒತ್ತು ನೀಡಲಾಗಿದೆ.

ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ ಮರ-ಗೋಡೆ ಮೇಲೆ ಭಿತ್ತಿಪತ್ರ ಅಂಟಿಸಿದ್ರೆ ಬೀಳುತ್ತೆ ಲಕ್ಷ ದಂಡ

ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಜಾಹೀರಾತು ಪ್ರದರ್ಶನ ಮಾಡಬೇಕೆಂದರೂ ಬಿಬಿಎಂಪಿ ಆಯುಕ್ತರ ಅನುಮತಿ ಕಡ್ಡಾಯವಾಗಿದೆ. ಖಾಸಗಿ ಜಾಗ ಅಥವಾ ಸರ್ಕಾರ ವಿವಿಧ ಇಲಾಖೆಗಳಿಗೆ ಸೇರಿದ ಜಾಗವಾದರೂ, ಜಾಹೀರಾತು ಅಳವಡಿಕೆಗೆ ಅನುಮತಿ ಪಡೆಯಬೇಕಿದೆ.

BBMP finally comes out with advertisement policy draft

ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್ಜಾಹೀರಾತು ನೀತಿ: ಬಿಬಿಎಂಪಿಗೆ ಮತ್ತೆ ಕ್ಲಾಸ್ ತೆಗೆದುಕೊಂಡ‌ ಹೈಕೋರ್ಟ್

ವಾಣಿಜ್ಯ ಪ್ರದೇಶಗಳಲ್ಲಿಯೇ ಅಳವಡಿಸಬೇಕಿದೆ. ಅದರ ಜತೆಗೆ ಪ್ರತಿ ಜಾಹೀರಾತು ಫಲಕದಲ್ಲೂ ಶೇ.10 ಸಾರ್ವಜನಿಕ ಸಂದೇಶ ಸಾರುವ ಅಂಶವನ್ನು ಒಳಗೊಂಡಿರುತ್ತದೆ.

ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌ ಅನಧಿಕೃತ ಪೋಸ್ಟರ್‌ಗಳನ್ನು ಹರಿದುಹಾಕಿದ ಮೇಯರ್‌ ಸಂಪತ್‌ರಾಜ್‌

ಮೊದಲ ಬಾರಿಗೆ ಜಾಹೀರಾತು ಅಕ್ರಮ ತಡೆಗೆ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಐವರ ಸಮಿತಿ ರಚಿಸಲಾಗುತ್ತಿದೆ. ಅದರಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ , ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷರು ಸದಸ್ಯರಾಗಿರಲಿದ್ದಾರೆ. ತಿಂಗಳಿಗೊಮ್ಮೆ ಸಭೆ ನಡೆಸಿ ಅಕ್ರಮ ಫಲಕಗಳ ವರದಿಯನ್ನು ಪಡೆಯಲಿದ್ದಾರೆ.

English summary
In the lines of Delhi Municipal Corporation, Bruhat Bengaluru Mahanagara Palike has come out with draft of advertisement policy and the same will be tabled in BBMP council meeting soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X