ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಅಂತಿಮಗೊಳಿಸಿದ 7 ಖಾಸಗಿ ಕೋವಿಡ್ ಆರೈಕೆ ಕೇಂದ್ರಗಳು

|
Google Oneindia Kannada News

ಬೆಂಗಳೂರು, ಜೂನ್ 23: ಕರ್ನಾಟಕ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಮವಾರಕ್ಕೆ (ಜೂ 22) ರಾಜಧಾನಿಯಲ್ಲಿ ಒಟ್ಟು ಸೋಂಕು ದೃಢ ಪಟ್ಟವರ ಸಂಖ್ಯೆ 1,398ಕ್ಕೆ ಏರಿದೆ. ಕೋವಿಡ್ ಆರೈಕೆಗಾಗಿ ಏಳು ಖಾಸಗಿ ಚಿಕಿತ್ಸಾ ಕೇಂದ್ರಗಳನ್ನು ತೆರಯಲಾಗುತ್ತಿದೆ.

Recommended Video

ಪೌರಕಾರ್ಮಿಕರು ನೀರು ಕೇಳಿದ್ದಕ್ಕೆ ಅಮಾನವೀಯವಾಗಿ ನಡೆದುಕೊಂಡ‌ ಮಹಿಳೆ | Oneindia Kannada

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿ, ನೂರು ಬೆಡ್ ಗಳ ಕೋವಿಡ್ ವಾರ್ಡ್ ಪರಿಶೀಲನೆ ನಡೆಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ 50ರಷ್ಟು ಹಾಸಿಗೆ ಸರ್ಕಾರ ಕಳುಹಿಸುವ ರೋಗಿಗೆಖಾಸಗಿ ಆಸ್ಪತ್ರೆಗಳಲ್ಲಿ 50ರಷ್ಟು ಹಾಸಿಗೆ ಸರ್ಕಾರ ಕಳುಹಿಸುವ ರೋಗಿಗೆ

"ಕೊರೊನಾ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಲಾಗುವುದು. ರೋಗಿಗಳು ಅಪೇಕ್ಷೆ ಪಟ್ಟಲ್ಲಿ ಸರಕಾರವೇ ಖಾಸಗಿ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡುತ್ತದೆ" ಎಂದು ಶ್ರೀರಾಮುಲು ಹೇಳಿದ್ದಾರೆ.

BBMP Finalized Seven Covid-19 Care Centers Including BGS, PES Hostel

"ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರ ಕರೆತರುವ ರೋಗಿಗಳಿಗೆ ಮೀಸಲಿಡಬೇಕು. ಸರ್ಕಾರ ರೆಫರ್ ಮಾಡುವ ರೋಗಿಗಳಿಗೆ ಸರ್ಕಾರ ನಿಗದಿ ಮಾಡಿರುವ ದರವನ್ನು ಪಡೆಯಬೇಕು ಎಂದು ಆರೋಗ್ಯ ಸಚಿವರು ಸೂಚಿಸಿದ್ದಾರೆ.

ಕೋವಿಡ್ ಆರೈಕೆಗೆ ಸರಕಾರ ಅಂತಿಮಗೊಳಿಸಿರುವ ಏಳು ಆರೈಕೆ ಕೇಂದ್ರಗಳ ಪಟ್ಟಿ:

1. ಹಜ್ ಭವನ, ಥಣಿಸಂದ್ರ
2. ಬಿ.ಜಿ.ಎಸ್ ಇಂಜಿನಿಯರಿಂಗ್ ಹಾಸ್ಟೆಲ್, ಕೆಂಗೇರಿ
3. ಮೆಡ್ ಸೂಲ್ ಆಸ್ಪತ್ರೆ, ಜ್ಞಾನಭಾರತಿ
4. ಆರ್.ಎನ್.ಎಸ್.ಐ.ಟಿ ಕಾಲೇಜು, ಕೆಂಗೇರಿ
5. ರವಿಶಂಕರ್ ಆಯುರ್ವೇದ ಆಸ್ಪತ್ರೆ, ಕನಕಪುರ ರಸ್ತೆ
6. ಪಿ.ಇ.ಎಸ್. ಕಾಲೇಜ್ ವಸತಿ ನಿಲಯ, ಬನಶಂಕರಿ ಮೂರನೇ ಹಂತ
7. ಆರ್.ವಿ ಇಂಜಿನಿಯರಿಂಗ್ ಕಾಲೇಜ್ ಹಾಸ್ಟೆಲ್, ಮೈಸೂರು ರಸ್ತೆ

English summary
BBMP Finalized Seven Covid-19 Care Centers Including BGS, PES Hostel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X