ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೆರಿಗೆ ಸಂಗ್ರಹದಲ್ಲಿ ಪಾಲಿಕೆ ವಿಫಲ:ಆರ್ಥಿಕ ಸ್ಥಿತಿ ಸುಧಾರಣೆ ಯಾವಾಗ?

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ಬಿಬಿಎಂಪಿಯು ಆರ್ಥಿಕ ಸ್ಥಿತಿ ಸುಧಾರಣೆಗೆ ತೆರಿಗೆ ಹೆಚ್ಚಳ ಮಾಡಿ, ಆನ್‌ಲೈನ್ ತೆರಿಗೆ ಪಾವತಿ ವ್ಯವಸ್ಥೆ ಜಾರಿಗೆ ತಂದಿತ್ತು, ಆದರೆ ಅವರ ಆಲೋಚನೆ ಬುಡಮೇಲಾಗಿದೆ. ಆಡಳಿತಾರೂಢ ಪಕ್ಷದ ವೈಫಲ್ಯ ಇದೀಗ ಬಯಲಾಗಿದೆ.

ಕೇಂದ್ರ ಲೆಕ್ಕ ಪರಿಶೋಧನಾ ವರದಿಯಲ್ಲಿ ರಾಜ್ಯದ ಉಳಿದೆಲ್ಲ ನಗರಾಡಳಿತಕ್ಕಿಂತ ಬಿಬಿಎಂಪಿ ತೆರಿಗೆ ಸಂಗ್ರಹ ಕೆಳಮಟ್ಟದಲ್ಲಿದೆ ಎಂದು ತಿಳಿಸಲಾಗಿದೆ.

ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?ಆನ್ ಲೈನ್ ನಲ್ಲಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಹೇಗೆ?

ವರದಿ ಪ್ರಕಾರ, 2012-13ರಿಂದ 2016-17ರವರೆಗೆ ಪ್ರತಿವರ್ಷ ತನ್ನ ಬಜೆಟ್ ನಲ್ಲಿ ತಿಳಿಸಲಾಗುವ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ತಲುಪುವಲ್ಲಿ ಬಿಬಿಎಂಪಿ ವಿಫಲವಾಗಿದೆ.

BBMP fails to mobilize sources against its own target!

ಅದರಂತೆ, 5 ವರ್ಷಗಳಲ್ಲಿ ಅತಿಹೆಚ್ಚು ಆದಾಯ ಸಂಗ್ರಹವಾಗಿದ್ದು, ಶೇ.63 ಮಾತ್ರ, ಮತ್ತೊಂದೆಡೆ, ರಾಜ್ಯದ ಉಳಿದ 10 ಮಹಾನಗರ ಪಾಲಿಕೆ, 57 ನಗರಸಭೆ, 114 ಪುರಸಭೆ, 89 ಪುರ ಪಂಚಾಯಿತಿ ಹಾಗೂ 4 ನೋಟಿಫೈ ಏರಿಯಾ ಕಮಿಟಿಗಳ ಆಸ್ತಿ ತೆರಿಗೆ ಪ್ರಮಾಣ ಶೇ.84 ದಾಟಿದೆ. ಇದು ಬಿಬಿಎಂಪಿ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಆನ್‌ಲೈನ್ ತೆರಿಗೆ ಪಾವತಿ ನಿರಾಳ:20 ದಿನದಲ್ಲಿ 365 ಕೋಟಿ ಸಂಗ್ರಹಆನ್‌ಲೈನ್ ತೆರಿಗೆ ಪಾವತಿ ನಿರಾಳ:20 ದಿನದಲ್ಲಿ 365 ಕೋಟಿ ಸಂಗ್ರಹ

ಬಿಬಿಎಂಪಿ ಆಸ್ತಿ ತೆರಿಗೆ ಮೊತ್ತಕ್ಕೆ ಶೇ.15 ಆರೋಗ್ಯ ಕರ, ಶೇ.6 ಗ್ರಂಥಾಲಯ ಕರ ಹಾಗೂ ಶೇ.3 ಭಿಕ್ಷುಕರ ಕರ ಸಂಗ್ರಹಿಸುತ್ತಿದೆ., ಅದರಂತೆ ಕಳೆದ 5 ವರ್ಷಗಳಲ್ಲಿ 857.73 ಕೋಟಿ ರೂ ಆರೋಗ್ಯ ಕರ, 343.08 ಕೋಟಿ ರರೂ. ಗ್ರಂಥಾಲಯ ಕರ ಹಾಗೂ 171.53 ಕೋಟಿ ರೂ. ಭಿಕ್ಷುಕರ ಕರ ಸಂಗ್ರಹಿಸಿದೆ.

ಆಸ್ತಿ ತೆರಿಗೆ ಸಂಗ್ರಹದ ವಿವರ(ಕೋಟಿ ರೂಗಳಲ್ಲಿ) ಬಿಬಿಎಂಪಿ

ವರ್ಷ ಗುರಿ ಸಂಗ್ರಹ
ಶೇ
2012-13 2,000 936.76 47
2013-14 3,200 908.6 28
2014-15 2,135 1,176 55
2015-16 1,900 1,244 66
2016-17 2,300 1,452 63
English summary
The CAG report has revealed that BBMP was failed to meet its own target on tax collection since seven consecutive years and performed below 60 percent of target. Even BBMP stands in last comparing to other urban local bodies in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X