ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಪ್ಪಟ್ಟು ತೆರಿಗೆಯಿಂದ ಮೂಲ ಆದಾಯ ವೃದ್ಧಿಗೆ ಬಿಬಿಎಂಪಿ ತಂತ್ರಗಾರಿಕೆ

|
Google Oneindia Kannada News

Recommended Video

ನಿಯಮ ಮೀರಿ ಶಾಪಿಂಗ್ ಮಾಡಿದ್ರೆ ಟ್ಯಾಕ್ಸ್ | Airport | Dutyfree | Tax | Oneindia Kannada

ಬೆಂಗಳೂರು, ಜನವರಿ 20 : ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ನಿಯಮ ಹಾಗೂ ನಕ್ಷೆ ಉಲ್ಲಂಘಿಸಿರುವ ಕಟ್ಟಡಗಳಿಂದ ದುಪ್ಪಟ್ಟು ತೆರಿಗೆ ಸಂಗ್ರಹಕ್ಕೆ ಬಿಬಿಎಂಪಿ ಮುಂದಾಗಿದೆ.

ಇದರಿಂದ ವಾರ್ಷಿಕ 400 ಕೋಟಿಗೂ ಅಧಿಕ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ಮುಂದಾಗಿದೆ. ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ 19 ಲಕ್ಷ ಆಸ್ತಿದಾರರ ಆಸ್ತಿಗಳಿಂದ 300 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗುತ್ತಿದೆ.

ಬಿಬಿಎಂಪಿ ದಾಖಲೆಗಳ ಪ್ರಕಾರ ಸದ್ಯ ಬೆಂಗಳೂರಿನಲ್ಲಿ 4 ಲಕ್ಷ ಆಸ್ತಿಗಳಲ್ಲಿ ಕಟ್ಟಡ ನಿಯಮ ಹಾಗೂ ನಕ್ಷೆಗಳನ್ನು ಉಲ್ಲಂಘಿಸಲಾಗಿದೆ.

ಜೀವ ವೈವಿಧ್ಯತೆ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಬಿಬಿಎಂಪಿ ಜೀವ ವೈವಿಧ್ಯತೆ ರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಬಿಬಿಎಂಪಿ

ರಾಜ್ಯ ಸಚಿವ ಸಂಪುಟದ ಅನುಮೋದನೆಯ ಪ್ರಕಾರ ಈ ನಾಲ್ಕು ಲಕ್ಷ ಆಸ್ತಿಗಳ ಮೇಲೆ ದುಪ್ಪಟ್ಟು ತೆರಿಗೆ ಸಂಗ್ರಹ ಮಾಡಬಹುದಾಗಿದೆ.

 ನಾಲ್ಕು ಲಕ್ಷ ನಿಯಮ ಬಾಹಿರ ಕಟ್ಟಡ

ನಾಲ್ಕು ಲಕ್ಷ ನಿಯಮ ಬಾಹಿರ ಕಟ್ಟಡ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ನಿಯಮ ಹಾಗೂ ನಕ್ಷೆ ಉಲ್ಲಂಘಿಸಿರುವ 3,98,006 ಲಕ್ಷ ಕಟ್ಟಡಗಳನ್ನು ನಿಯಮ ಬಾಹಿರ ಎಂದು ಗುರುತಿಸಲಾಗಿದೆ. ಇವುಗಳಲ್ಲಿ 3,62,831 ಕಟ್ಟಡಗಳು ವಸತಿ ಆಗಿದ್ದರೆ, 16,760 ವಾಣಿಜ್ಯ ಕಟ್ಟಡಗಳಾಗಿವೆ. ಇನ್ನು 18,415 ಕಟ್ಟಡಗಳು ವಸತಿ ಹಾಗೂ ವಾಣಿಜ್ಯ ಉದ್ದೇಶಗಳನ್ನು ಹೊಂದಿದೆ.

 400 ಕೋಟಿ ರೂ. ತೆರಿಗೆ ಸಂಗ್ರಹ

400 ಕೋಟಿ ರೂ. ತೆರಿಗೆ ಸಂಗ್ರಹ

ನಿಯಮ ಉಲ್ಲಂಘಿಸಿರುವ 3.98 ಲಕ್ಷ ಕಟ್ಟಡಗಳಿಗೆ ದುಪ್ಪಟ್ಟು ತೆರಿಗೆ ವಿಧಿಸಿದರೆ ಸುಮಾರು 401.12 ಕೋಟಿ ತೆರಿಗೆ ಸಗ್ರಹಿಸಬಹುದು ಎಂದು ಬಿಬಿಎಂಪಿ ಅಂದಾಜಿಸಿದೆ.

 ಶೀಘ್ರವೇ ತೆರಿಗೆ ಅನ್ವಯ

ಶೀಘ್ರವೇ ತೆರಿಗೆ ಅನ್ವಯ

ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವ ಈ ನಿಯಮವನ್ನು ಶೀಘ್ರವೇ ಬಿಬಿಎಂಪಿ ಅನುಷ್ಠಾನ ಮಾಡುವ ಸಾಧ್ಯತೆ ಇದೆ.ನಿಯಮಗಳನ್ನು ರೂಪಿಸಿ ಕಾನೂನು ತಜ್ಞರಿಂದ ಸಲಹೆ ಪಡೆಯಲು ಬಿಬಿಎಂಪಿ ಸಿದ್ಧತೆ ನಡೆಸಿದೆ.

 ಏನಿದು ನಿಯಮ ಉಲ್ಲಂಘನೆ?

ಏನಿದು ನಿಯಮ ಉಲ್ಲಂಘನೆ?

ಕಟ್ಟಡ ನಿರ್ಮಾಣ ನಿರ್ಮಾಣ ನಿಯಮ ಹಾಗೂ ನಕ್ಷೆಗೆ ಸಂಬಂಧಿಸಿ ಬಿಬಿಎಂಪಿ ಕೆಲ ಸಿದ್ಧ ಸೂತ್ರಗಳನ್ನು ಒಳಗೊಂಡಿದೆ. ಬಿಬಿಎಂಪಿಯಿಂದ ಅನುಮತಿ ಪಡೆದ ನಕ್ಷೆಗೆ ಅನುಸಾರವಾಗಿಯೇ ಕಟ್ಟಡ ನಿರ್ಮಾಣ ಮಾಡಬೇಕು, ಅನುಮತಿಗಿಂತ ಹೆಚ್ಚು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ವಾಣಿಜ್ಯ ಕಟ್ಟಡಗಳಲ್ಲಿ ಪಾರ್ಕಿಂಗ್‌ಗೆ ಕಡ್ಡಾಯವಾಗಿ ಜಾಗ ಮೀಸಲಿಡಬೇಕು. ಎಲ್ಲಾ ಸುರಕ್ಷಾ ನಿಯಮಗಳನ್ನು ಪಾಲಿಸಿರಬೇಕು. ನಕ್ಷೆ ಹಾಗೂ ನಿಯಮಕ್ಕೆ ವಿರುದ್ಧವಾಗಿ ಶೇ.5ಕ್ಕೂ ಹೆಚ್ಚಿನ ಉಲ್ಲಂಘನೆಯಾಗಿದ್ದರೆ ಅಂತಹ ಕಟ್ಟಡಗಳನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ.

English summary
BBMP Eying on revenue generation by collecting Double Tax Who Violated the Rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X