ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ಸ್ಥಾನ ಗಳಿಸಲು ಬಿಬಿಎಂಪಿ ಸಿದ್ಧತೆ

|
Google Oneindia Kannada News

ಬೆಂಗಳೂರು, ಜನವರಿ 12: ಕಳೆದ ಬಾರಿ ನಡೆದ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ ಬೆಂಗಳೂರಿನ ಫಲಿತಾಂಶ ಅಷ್ಟೇನುಚೆನ್ನಾಗಿರಲಿಲ್ಲ.

ಈ ಬಾರಿಯಾದರೂ ಶ್ರೇಣಿಯನ್ನು ಹೆಚ್ಚು ಮಾಡಿಕೊಳ್ಳಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ.

2020ರ ಸ್ವಚ್ಛ ಸರ್ವೇಕ್ಷಣದಲ್ಲಿ ಬೆಂಗಳೂರು 214ನೇ ಸ್ಥಾನ ಗಳಿಸಿದ್ದು, 2019ರಲ್ಲಿ 194ನೇ ಸ್ಥಾನ ಗಳಿಸಿತ್ತು. ಈ ಬಾರಿ ಉತ್ತಮ ಫಲಿತಾಂಶ ಪಡೆಯಬೇಕೆಂದು ಬಿಬಿಎಂಪಿ ಪಣತೊಟ್ಟಿದೆ.

BBMP Eyes Higher Swachh Survekshan Rank

ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ರಸ್ತೆಗಳನ್ನು ಉತ್ತಮವಾಗಿ ನಿರ್ಮಾಣ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನ ರಸ್ತೆಗುಂಡಿಗಳೆಲ್ಲವನ್ನು ಮುಚ್ಚಿ ಸುಂದರವಾಗಿ ಕಾಣುವಂತೆ ಮಾಡಲಾಗುತ್ತದೆ.

ಹಾಗೆಯೇ ಕಸಮುಕ್ತನಗರವನ್ನಾಗಿ ಮಾಡಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಈಗಾಗಲೇ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ ಆರಂಭವಾಗಿದೆ.

ಬಿಬಿಎಂಪಿ ಮಾಹಿತಿ ಜನವರಿ 8ರವರೆಗೆ ಆರೋಗ್ಯ,ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರಕಾರ 11 ಮಂದಿ ತಮ್ಮ ಅಭಿಪ್ರಾಯವನ್ನು ಕಳುಹಿಸಿದ್ದಾರೆ. ಹಾಗೆಯೇ ಜಲ ಮಂಡಳಿಯೂ ಕೂಡ ಬೆಂಗಳೂರು ವಾಟರ್ ಪ್ಲಸ್ ಸಿಟಿ ಎಂದು ಹೇಳುತ್ತಾ ಬೆಂಗಳೂರಿನ ಸ್ಥಾನವನ್ನು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ.

Recommended Video

ಪ್ರಮಾಣವಚನ ಸ್ವೀಕರಿಸುವವರ ಹೆಸರು ಪ್ರಕಟಿಸಿದ ಸಿಎಂ ಯಡಿಯೂರಪ್ಪ! | Oneindia Kannada

ತ್ಯಾಜ್ಯ ನೀರನ್ನು ಕೂಡ ಬಟ್ಟಿ ಇಳಿಸಲಾಗುತ್ತಿದೆ. ಪಾದಚಾರಿ ಸ್ನೇಹಿ ಫೂಟ್‌ಪಾತ್‌ಗಳು ಹಾಗೂ ಸಾರ್ವಜನಿಕ ಶೌಚಾಲಯಗಳ ಕುರಿತು ಬಿಬಿಎಂಪಿ ಹಾಗೂ ಜನಾಗ್ರಹವು ಮೈಸಿಟಿಮೈಬಜೆಟ್ ಎನ್ನುವ ಅಭಿಯಾನವನ್ನು ಹಮ್ಮಿಕೊಂಡು, ಇಡೀ ಬೆಂಗಳೂರು ಸಮೀಕ್ಷೆಯನ್ನು ನಡೆಸುತ್ತಿದೆ.

English summary
The Bruhat Bengaluru Mahanagara Palike is all set to take Swachh Survekshan, an annual survey of cleanliness, hygiene and sanitation, very seriously this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X