ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೇ 5ರಷ್ಟು ರಿಯಾಯಿತಿ ಜೊತೆ ಮೇ 31ರ ತನಕ ಆಸ್ತಿ ತೆರಿಗೆ ಪಾವತಿಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 29 : ಲಾಕ್ ಡೌನ್ ಹಿನ್ನಲೆಯಲ್ಲಿ ಬಿಬಿಎಂಪಿ ಬೆಂಗಳೂರಿನ ಜನರಿಗೆ ಅನುಕೂಲ ಮಾಡಿಕೊಡಲು ಆದೇಶವೊಂದನ್ನು ಹೊರಡಿಸಿದೆ. ಮೇ 31ರ ತನಕ ಆಸ್ತಿ ತೆರಿಗೆಯನ್ನು ರಿಯಾಯಿತಿ ಮೇಲೆ ಪಾವತಿ ಮಾಡಲು ಅವಕಾಶ ನೀಡಿದೆ.

ಶೇ 5ರಷ್ಟು ರಿಯಾಯಿತಿ ದರದಲ್ಲಿ ಆಸ್ತಿ ತೆರಿಗೆಯನ್ನು ಪಾವತಿ ಮಾಡಲು ಏಪ್ರಿಲ್ 30ರ ತನಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅವಕಾಶ ನೀಡಿತ್ತು. ಈಗ ತೆರಿಗೆ ಪಾವತಿ ಅವಧಿಯನ್ನು ಮೇ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಲಾಕ್‌ಡೌನ್: ಆನ್‌ಲೈನ್‌ನಲ್ಲಿ ಬೆಸ್ಕಾಂ ಬಿಲ್ ಪಾವತಿ ಹೇಗೆ?ಲಾಕ್‌ಡೌನ್: ಆನ್‌ಲೈನ್‌ನಲ್ಲಿ ಬೆಸ್ಕಾಂ ಬಿಲ್ ಪಾವತಿ ಹೇಗೆ?

ರಾಜ್ಯದಲ್ಲಿ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಮೇ 31ರ ತನಕ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಲಾಗಿತ್ತು.

ಆದಾಯ ತೆರಿಗೆ ರಿಟರ್ನ್ಸ್ ಕುರಿತಂತೆ ಮಹತ್ವದ ಸೂಚನೆ ಪ್ರಕಟ ಆದಾಯ ತೆರಿಗೆ ರಿಟರ್ನ್ಸ್ ಕುರಿತಂತೆ ಮಹತ್ವದ ಸೂಚನೆ ಪ್ರಕಟ

BBMP Extended Deadline To Pay Property Tax Till May 31

ಪೌರಾಡಳಿತ ನಿರ್ದೇಶನಾಲಯದ ಆದೇಶದ ಬಳಿಕ ಬಿಬಿಎಂಪಿ ಸಹ ಆಸ್ತಿ ತೆರಿಗೆ ಪಾವತಿ ಗಡುವು ವಿಸ್ತರಣೆ ಮಾಡಿದೆ. ಜಯಮಹಲ್ ವಾರ್ಡ್ ಬಿಬಿಎಂಪಿ ಸದಸ್ಯ ಎಂ. ಕೆ. ಗುಣಶೇಖರ್ ಸಹ ಆಸ್ತಿ ತೆರಿಗೆ ಪಾವತಿ ದಿನಾಂಕವನ್ನು ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದರು.

ಇನ್ಮುಂದೆ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಕಚೇರಿಗೆ ಹೋಗಬೇಕಿಲ್ಲಇನ್ಮುಂದೆ ಆಸ್ತಿ ತೆರಿಗೆ ಪಾವತಿಸಲು ಪಾಲಿಕೆ ಕಚೇರಿಗೆ ಹೋಗಬೇಕಿಲ್ಲ

2019-20ರಲ್ಲಿ ಬಿಬಿಎಂಪಿ 992.10 ಕೋಟಿ ರೂ.ಗಳ ಆಸ್ತಿ ತೆರಿಗೆ ಸಂಗ್ರಹ ಮಾಡಿತ್ತು. ಈ ವರ್ಷದ ಏಪ್ರಿಲ್ 28 ರ ತನಕ 261 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 26.34ರಷ್ಟು ಮಾತ್ರ ತೆರಿಗೆ ಸಂಗ್ರಹವಾಗಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಆಸ್ತಿ ತೆರಿಗೆ ಪಾವತಿ ಮಾಡಲು ಜನರಿಗೂ ಕಷ್ಟವಾಗುತ್ತಿದೆ. ಜನರು ಕಚೇರಿಗಳಿಗೆ ಬರವುದನ್ನು ನಡೆಯಲು ಬಿಬಿಎಂಪಿ ಆನ್‌ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶವನ್ನು ನೀಡಿದೆ.

ಆನ್‌ಲೈನ್ ಮೂಲಕ ತೆರಿಗೆ ಪಾವತಿಸಲು ಇಲ್ಲಿ ಕ್ಲಿಕ್ ಮಾಡಿ

English summary
The Bruhat Bengaluru Mahanagara Palike (BBMP) has extended the deadline to avail 5% rebate on property tax from April 30 to May 31, 2020 due to lock down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X