ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೆರವು ಕಾರ್ಯಾಚರಣೆ: ಬಿಬಿಎಂಪಿ ಅರೆಬರೆ ಮಾಹಿತಿಗೆ ನಿವಾಸಿಗಳ ಆಕ್ರೋಶ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್‌ 18: ಬೆಂಗಳೂರು ನಗರದಾದ್ಯಂತ ಮಳೆ ನೀರು ಚರಂಡಿ (ಎಸ್‌ಡಬ್ಲ್ಯೂಡಿ) ಮೇಲೆ ಬಂದಿರುವ ಅತಿಕ್ರಮಣಗಳನ್ನು ತೆಗೆದುಹಾಕಲು ಬಿಬಿಎಂಪಿಯ ಕೈಗೊಂಡಿರುವ ಕಾರ್ಯಾಚರಣೆಯು ಆರ್ಥಿಕವಾಗಿ ದುರ್ಬಲ ವರ್ಗದ ಜನರನ್ನು ಕಂಗಾಲಾಗುವಂತೆ ಮಾಡಿದೆ.

ಕರ್ನಾಟಕ ಭೂಕಂದಾಯ ಕಾಯ್ದೆಯ ಪ್ರಕಾರ ಬಿಬಿಎಂಪಿ ನೋಟಿಸ್ ನೀಡದೆ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ. ಇದರಿಂದ ನಮಗೆ ತೀವ್ರ ತೊಂದರೆಯಾಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳು ಮಾತ್ರ ನಾವು ನೋಟಿಸ್‌ ನೀಡಬೇಕಾಗಿಲ್ಲ. ಒತ್ತುವರಿಯಾಗಿರುವ ಕಟ್ಟಡಗಳಿಗೆ ಕೇವಲ ಮೂರು ದಿನಗಳ ನೋಟಿಸ್ ನೀಡಿದರೆ ಸಾಕು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಬಾಡಿಗೆ ಮನೆ ಸಿಗದೇ ಇಲ್ಲಿನ ನಿವಾಸಿಗಳು ಪರದಾಡುತ್ತಿದ್ದಾರೆ.

ಬಿಬಿಎಂಪಿ: ಒತ್ತುವರಿ ತೆರವು, ಸರ್ವೇ ಕಾರ್ಯ ಮುಂದುವರಿಕೆಬಿಬಿಎಂಪಿ: ಒತ್ತುವರಿ ತೆರವು, ಸರ್ವೇ ಕಾರ್ಯ ಮುಂದುವರಿಕೆ

ಬಿಬಿಎಂಪಿ ಕೇವಲ ಮೌಖಿಕ ಸೂಚನೆ ನೀಡಿ ನಮ್ಮ ಕಟ್ಟಡಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನು ಕಡಿತಗೊಳಿಸಿದೆ ಎಂದು ಸ್ಥಳೀಯ ನಿವಾಸಿ ಹೇಳಿದ್ದಾರೆ. ಪೀಣ್ಯದಲ್ಲಿ ಮನೆ ಹೊಂದಿರುವ ಚಂದ್ರಶೇಖರ್ ಮಾತನಾಡಿ, ಎಂಟು ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ. ನಾವು ಹೊರಡುವ ಮುನ್ನವೇ ಅಧಿಕಾರಿಗಳು ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿತಗೊಳಿಸಿದರು. ಇದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಬಿಬಿಎಂಪಿ ಸರಿಯಾದ ವಿಧಾನವನ್ನು ಅನುಸರಿಸಿಲ್ಲ. ತಾವು ಯಾವುದೇ ಮಳೆ ನೀರು ಚರಂಡಿಯನ್ನು ಅತಿಕ್ರಮಿಸಿಲ್ಲ ಎಂದು ಸಾಬೀತುಪಡಿಸಲು ಎಲ್ಲಾ ಕಾನೂನು ದಾಖಲೆಗಳನ್ನು ಹೊಂದಿದ್ದಾರೆ ಎಂದು ಅನೇಕ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಬಿಬಿಎಂಪಿ ಅಧಿಕಾರಿಗಳು ಇಂತಹ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನಾವು ಈ ಎಲ್ಲಾ ಆಸ್ತಿಗಳಿಗೆ ಹಲವು ಬಾರಿ ನೋಟಿಸ್ ನೀಡಿದ್ದೇವೆ. ನಾವು ಸೂಕ್ತ ವಿಧಾನವನ್ನು ಅನುಸರಿಸುತ್ತಿದ್ದೇವೆ ಮತ್ತು ಅತಿಕ್ರಮಣಗಳ ಪ್ರಮಾಣ ಮತ್ತು ನಗರಕ್ಕೆ ಸಾಕ್ಷಿಯಾದ ಪ್ರವಾಹವನ್ನು ಪರಿಗಣಿಸಿ, ತಕ್ಷಣವೇ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ದಾಸರಹಳ್ಳಿ) ರಂಗಪ್ಪ ಎಸ್. ಹೇಳಿದ್ದಾರೆ.

 ಚರಂಡಿ ಒತ್ತುವರಿಯೇ ಜಾಸ್ತಿ

ಚರಂಡಿ ಒತ್ತುವರಿಯೇ ಜಾಸ್ತಿ

ನಗರದಲ್ಲಿ ಇದುವರೆಗೆ ಗುರುತಿಸಲಾದ 696 ಮಳೆ ನೀರು ಚರಂಡಿ ಅತಿಕ್ರಮಣಗಳಲ್ಲಿ, 300 ಕ್ಕೂ ಹೆಚ್ಚು ಸ್ಥಳಗಳು ಅಂದರೆ ಸುಮಾರು 45 ಪ್ರತಿಶತ ಮನೆಗಳು ಮತ್ತು ಇತರ ಕಟ್ಟಡಗಳಂತಹ ಶಾಶ್ವತ ರಚನೆಗಳನ್ನು ಹೊಂದಿವೆ. ಅಧಿಕೃತ ದಾಖಲೆಗಳಲ್ಲಿ ಸೂಚಿಸಲಾದ ಹೆಚ್ಚಿನ ಸಂಖ್ಯೆ ಕಟ್ಟಡಗಳು, ಅನೇಕ ಜನರು ಮಳೆ ನೀರಿನ ಚರಂಡಿಗಳ ಮೇಲೆ ನಿರ್ಮಾಣ ಮಾಡಿದ್ದಾರೆ ಎಂದು ತಿಳಿಯದೆ ಈ ಆಸ್ತಿಗಳನ್ನು ಖರೀದಿಸಲು ಅಥವಾ ನಿರ್ಮಿಸಲು ಹೂಡಿಕೆ ಮಾಡಿರಬಹುದು ಎಂದು ತೋರಿಸುತ್ತದೆ. 696 ಅತಿಕ್ರಮಣಗಳಲ್ಲಿ ಕೆಲವೇ ಕೆಲವು ಖಾಲಿ ನಿವೇಶನಗಳಾಗಿವೆ.

ಬೆಂಗಳೂರು: ಹೈಕೋರ್ಟ್‌ಗೆ ರಾಜಕಾಲುವೆ ಒತ್ತುವರಿ ತೆರವಿನ ಮಾಹಿತಿ ನೀಡಿದ ಬಿಬಿಎಂಪಿಬೆಂಗಳೂರು: ಹೈಕೋರ್ಟ್‌ಗೆ ರಾಜಕಾಲುವೆ ಒತ್ತುವರಿ ತೆರವಿನ ಮಾಹಿತಿ ನೀಡಿದ ಬಿಬಿಎಂಪಿ

 ಚೋಳನಾಯಕನಹಳ್ಳಿಯಲ್ಲಿ 45 ಕಟ್ಟಡ

ಚೋಳನಾಯಕನಹಳ್ಳಿಯಲ್ಲಿ 45 ಕಟ್ಟಡ

300 ಕಟ್ಟಡಗಳಲ್ಲಿ ಹೆಚ್ಚಿನವು ಬಿಬಿಎಂಪಿಯ ಮಹದೇವಪುರ, ಬೊಮ್ಮನಹಳ್ಳಿ ಮತ್ತು ದಾಸರಹಳ್ಳಿ ವಲಯಗಳಲ್ಲಿವೆ. ಇವೆಲ್ಲವೂ ನಗರದ ಮಧ್ಯಭಾಗದಿಂದ ಹೊರಗಿವೆ. ಪೂರ್ವ ವಲಯದಲ್ಲೂ ಗಮನಾರ್ಹ ಸಂಖ್ಯೆಯ ಅಕ್ರಮ ಕಟ್ಟಡಗಳು ನೆಲಸಮಗೊಳ್ಳಲಿವೆ. ಬಿಬಿಎಂಪಿ ಅಂಕಿ ಅಂಶಗಳ ಪ್ರಕಾರ, ಹೆಬ್ಬಾಳದ ಚೋಳನಾಯಕನಹಳ್ಳಿಯಲ್ಲಿ 45 ಕಟ್ಟಡಗಳು ಮಳೆನೀರು ಚರಂಡಿಗೆ ತಡೆಯೊಡ್ಡುತ್ತಿವೆ. ನಂದಿನಿ ಲೇಔಟ್ ನಲ್ಲಿ 26 ಕಟ್ಟಡಗಳು, ಶ್ರೀನಗರದ ಗವಿಪುರಂನಲ್ಲಿ 17 ಮನೆಗಳು, ಚಿನ್ನಪ್ಪನಹಳ್ಳಿಯಲ್ಲಿ 11 ಕಟ್ಟಡಗಳು, ಕೈಗೊಂಡ್ರಹಳ್ಳಿಯಲ್ಲಿ 7, ಮುನ್ನೇಕೊಳಲದಲ್ಲಿ 7, ಮತ್ತು ವರ್ತೂರಿನಲ್ಲಿ 17. ಈ ಪಟ್ಟಿಯಲ್ಲಿ ಅಪಾರ್ಟ್‌ಮೆಂಟ್‌ಗಳು, ಟೆಕ್ ಪಾರ್ಕ್‌ಗಳು ಮತ್ತು ವಿಲ್ಲಾಗಳೂ ಸೇರಿವೆ.

 ಮನೆ ತೆರವಿಗೆ ತಹಸೀಲ್ದಾರ್‌ ನೋಟೀಸ್‌

ಮನೆ ತೆರವಿಗೆ ತಹಸೀಲ್ದಾರ್‌ ನೋಟೀಸ್‌

ಇಲ್ಲಿಯವರೆಗೆ, ಬಿಬಿಎಂಪಿ ಬಹುತೇಕ ಅರೆ- ಶಾಶ್ವತ ಕಟ್ಟಡಗಳಾದ ಕಾಂಪೌಂಡ್ ಗೋಡೆಗಳನ್ನು ನೆಲಸಮ ಮಾಡುತ್ತಿದೆ. ಅದು ಚರಂಡಿಗಳನ್ನು ನಿರ್ಬಂಧಿಸುತ್ತದೆ. ನಿವಾಸಿಗಳು ವಾಸಿಸುವ ಕಟ್ಟಡಗಳಲ್ಲಿ, ನೆಲಸಮ ಕಾರ್ಯಾಚರಣೆಯನ್ನು ಕೈಗೊಳ್ಳುವ ಮೊದಲು ತಹಸೀಲ್ದಾರ್ ಮೊದಲು ನೋಟಿಸ್ ನೀಡಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

 ಸಂಪೂರ್ಣ ರಚನೆಗೆ ಹಾನಿ ಮಾಡಲ್ಲ

ಸಂಪೂರ್ಣ ರಚನೆಗೆ ಹಾನಿ ಮಾಡಲ್ಲ

ಆದರೆ, ಕಟ್ಟಡದ ಸ್ವಲ್ಪ ಭಾಗ ಮಾತ್ರ ಚರಂಡಿ ಮೇಲೆ ಬಿದ್ದರೆ ಏನು ಮಾಡಬೇಕು ಎಂಬ ಗೊಂದಲ ಅಧಿಕಾರಿಗಳಲ್ಲಿದೆ. ನಾವು ಯಾವುದೇ ಸೂಚನೆ ನೀಡದೆ ಕಾಂಪೌಂಡ್ ಗೋಡೆಗಳು ಮತ್ತು ಪಾರ್ಕಿಂಗ್ ಶೆಲ್ಟರ್‌ಗಳನ್ನು ಧ್ವಂಸ ಮಾಡುತ್ತಿದ್ದೇವೆ. ಅಪಾರ್ಟ್‌ಮೆಂಟ್‌ನ ಕೇವಲ ಒಂದು ಅಥವಾ ಎರಡು ಪಿಲ್ಲರ್‌ಗಳು ಚರಂಡಿಯ ಮೇಲೆ ಬಿದ್ದರೆ, ಚರಂಡಿಯನ್ನು ಅಗಲಗೊಳಿಸಲು ಅದೇ ಆವರಣದಲ್ಲಿ ಸಾಕಷ್ಟು ಸ್ಥಳಾವಕಾಶವಿರುವವರೆಗೆ ನಾವು ಕಟ್ಟಡದ ಸಂಪೂರ್ಣ ರಚನೆಗೆ ಹಾನಿ ಮಾಡುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

English summary
The operation undertaken by the BBMP to remove encroachments on the storm water drains (SWD) across the city of Bengaluru has left the economically weaker sections in distress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X